ನಗರದ ನಂಜಪ್ಪ ಲೈಫ್ ಕೇರ್‌ನಲ್ಲಿ ಪೆರಿಫೆರಲ್ ಆರ್ಟರಿ ಡಿಸೀಸ್ ಶಿಬಿರ ಏರ್ಪಡಿಸಿದ್ದು, ಡಿ. 8 ರಿಂದ 31ರವರೆಗೆ ಪರೀಕ್ಷೆ ಮತ್ತು ಚಿಕಿತ್ಸೆಗೆ 40 ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ರಕ್ತನಾಳದಲ್ಲಿ ಬ್ಲಾಕ್ ಆಗಿದ್ದಲ್ಲಿ ನಡೆಯುವಾಗ, ಮೆಟ್ಟಿಲು ಹತ್ತುವಾಗ ತೊಡೆ ಅಥವಾ ಕರುಗಳಲ್ಲಿ (ಕಾಲಿನ ಹಿಂಭಾಗದಲ್ಲಿ ) ನೋವಿನ ಸೆಟೆತ, ವಿಶ್ರಾಂತಿಸುತ್ತಿರುವಾಗ ಕಾಲುಗಳಲ್ಲಿ ನೋವುಂಟಾಗುವುದು, ಕಾಲಿನ ಚರ್ಮದ ಬಣ್ಣ ಬದಲಾವಣೆ ಅಥವಾ ಕಾಲ್ಬೆರಳು, ಪಾದ ಅಥವಾ ಕಾಲುಗಳ ಮೇಲೆ ಗುಣವಾಗದ ಗಾಯಗಳು ಕಂಡುಬಂದರೆ ನಿರ್ಲಕ್ಷಿಸಿದ್ದಲ್ಲಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಗ್ಯಾಂಗ್ರೀನ್ ಉಂಟಾಗಿ ಕಾಲು ಕಳೆದುಕೊಳ್ಳುವ ಸಾಧ್ಯತೆ, ಚಲನಶೀಲತೆ ಕಳೆದುಕೊಳ್ಳುವುದು, ಸೋಂಕು, ಹೃದಯಾಘಾತ ಅಥವಾ ಲಕ್ವ ಸಂಭವಿಸಬಹುದು.

ಶಿವಮೊಗ್ಗ: ನಗರದ ನಂಜಪ್ಪ ಲೈಫ್ ಕೇರ್‌ನಲ್ಲಿ ಪೆರಿಫೆರಲ್ ಆರ್ಟರಿ ಡಿಸೀಸ್ ಶಿಬಿರ ಏರ್ಪಡಿಸಿದ್ದು, ಡಿ. 8 ರಿಂದ 31ರವರೆಗೆ ಪರೀಕ್ಷೆ ಮತ್ತು ಚಿಕಿತ್ಸೆಗೆ 40 ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ರಕ್ತನಾಳದಲ್ಲಿ ಬ್ಲಾಕ್ ಆಗಿದ್ದಲ್ಲಿ ನಡೆಯುವಾಗ, ಮೆಟ್ಟಿಲು ಹತ್ತುವಾಗ ತೊಡೆ ಅಥವಾ ಕರುಗಳಲ್ಲಿ (ಕಾಲಿನ ಹಿಂಭಾಗದಲ್ಲಿ ) ನೋವಿನ ಸೆಟೆತ, ವಿಶ್ರಾಂತಿಸುತ್ತಿರುವಾಗ ಕಾಲುಗಳಲ್ಲಿ ನೋವುಂಟಾಗುವುದು, ಕಾಲಿನ ಚರ್ಮದ ಬಣ್ಣ ಬದಲಾವಣೆ ಅಥವಾ ಕಾಲ್ಬೆರಳು, ಪಾದ ಅಥವಾ ಕಾಲುಗಳ ಮೇಲೆ ಗುಣವಾಗದ ಗಾಯಗಳು ಕಂಡುಬಂದರೆ ನಿರ್ಲಕ್ಷಿಸಿದ್ದಲ್ಲಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಗ್ಯಾಂಗ್ರೀನ್ ಉಂಟಾಗಿ ಕಾಲು ಕಳೆದುಕೊಳ್ಳುವ ಸಾಧ್ಯತೆ, ಚಲನಶೀಲತೆ ಕಳೆದುಕೊಳ್ಳುವುದು, ಸೋಂಕು, ಹೃದಯಾಘಾತ ಅಥವಾ ಲಕ್ವ ಸಂಭವಿಸಬಹುದು.

ಈ ಶಿಬಿರದಲ್ಲಿ ಇಂತಹ ರೋಗ ಲಕ್ಷಣಗಳಿಗೆ ಅಲ್ಟ್ರಾಸೌಂಡ್ ಡಾಪ್ಲರ್, ಸಿ ಟಿ ಆಂಜಿಯೋಗ್ರಾಮ್ ಪರೀಕ್ಷೆ ಮಾಡಿ ಸಣ್ಣ ಸೂಜಿ ಗಾತ್ರದ ರಂಧ್ರದ ಮೂಲಕ ಚಿಕಿತ್ಸೆ ನೀಡುಲಾಗುವುದು. ಶಿಬಿರದಲ್ಲಿ ಶೇ.40 ರವರೆಗೆ ಪರೀಕ್ಷೆ ಮತ್ತು ಚಿಕಿತ್ಸೆಯ ಮೇಲೆ ವಿಶೇಷ ರಿಯಾಯಿತಿ ನೀಡುವುದರ ಜೊತೆಗೆ ಡಾ.ನಿಶಿತ ಎಸ್ ಎಚ್ ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ರವರಿಂದ ಉಚಿತ ಸಮಾಲೋಚನೆ ಲಭ್ಯವಿರುತ್ತದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ನಂಜಪ್ಪ ಲೈಫ್ ಕೇರ್ ವತಿಯಿಂದ ಈ ಮೂಲಕ ಕೋರಲಾಗಿದೆ.