ಅಧಿಕಾರದಲ್ಲಿದ್ದಾಗ ಶಾಶ್ವತ ಕೆಲಸ ಮಾಡಬೇಕು: ಡಾ.ಮಂಜುನಾಥ್

| Published : Apr 18 2024, 02:16 AM IST

ಅಧಿಕಾರದಲ್ಲಿದ್ದಾಗ ಶಾಶ್ವತ ಕೆಲಸ ಮಾಡಬೇಕು: ಡಾ.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ನಾನು ನಿರ್ದೇಶಕರಾಗಿದ್ದಾಗ 75 ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ ಕೊಡಿಸಿದ್ದೇನೆ. ನಾನು ಎಂಬುದು ಅಹಂಕಾರ, ನಾವು ಎಂಬುದು ಅಲಂಕಾರ ಎಂಬುವ ರೀತಿ ಕೆಲಸ ಮಾಡಿದ್ದೇವೆ. ಹಿಂದೆ ಮಂತ್ರ ಕೆಲಸ ಮಾಡುತ್ತಿತ್ತು, ನಂತರ ಯಂತ್ರ ಕೆಲಸ ಮಾಡುತ್ತಿತ್ತು, ಈಗ ತಂತ್ರ ಕೆಲಸ ಮಾಡುತ್ತಿದೆ. ಇದಕ್ಕೆ ನೀವು ಬಿಜೆಪಿಗೆ ಮತ ನೀಡುವ ಮೂಲಕ ತಂತ್ರಕ್ಕೆ ಪ್ರತಿ ತಂತ್ರ ಕೊಡಬೇಕು. ವೈದ್ಯಕೀಯ ವೃತ್ತಿಯಲ್ಲಿ ಬಡವರು, ಕೂಲಿ, ಕಾರ್ಮಿಕರು, ನಿರ್ಗತಿಕರ ಕಣ್ಣೀರು ಒರೆಸಿದ್ದೇನೆ.

ಕನ್ನಡಪ್ರಭ ವಾರ್ತೆ ಮಾಗಡಿ

ಈಗ ನಡೆಯುತ್ತಿರುವ ಚುನಾವಣೆ ದೇಶದ ಭದ್ರತೆಗಾಗಿ ನಡೆಯುತ್ತಿದ್ದು, ಶಾಶ್ವತ ಕೆಲಸಗಳಿಗೆ ಒತ್ತು ಕೊಟ್ಟಾಗ ಮಾತ್ರ ಅಭಿವೃದ್ಧಿ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಎನ್ ಡಿಎ ಮೈತ್ರಿಯ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ತಾಲೂಕಿನಲ್ಲಿ ಮತ ಪ್ರಚಾರ ಮಾಡಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸಾಕಷ್ಟು ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮಾಗಡಿಯಿಂದ ಬೆಂಗಳೂರಿನವರೆಗೆ ನಾಲ್ಕು ಪಥದ ರಸ್ತೆ ಕಾಮಗಾರಿ, ರೈತರ 28 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ, ಜನಗಳ ಕೈಗೆ ಪ್ರತಿ ತಿಂಗಳೂ 500 ರು. 2000 ಸಾವಿರ ರು. ಬಂದರೆ ಅದು ಅವರ ಗಮನಕ್ಕೆ ಬರುತ್ತದೆ ಎಂದರು. ನಾನು ನಿರ್ದೇಶಕರಾಗಿದ್ದಾಗ 75 ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ ಕೊಡಿಸಿದ್ದೇನೆ. ನಾನು ಎಂಬುದು ಅಹಂಕಾರ, ನಾವು ಎಂಬುದು ಅಲಂಕಾರ ಎಂಬುವ ರೀತಿ ಕೆಲಸ ಮಾಡಿದ್ದೇವೆ. ಹಿಂದೆ ಮಂತ್ರ ಕೆಲಸ ಮಾಡುತ್ತಿತ್ತು, ನಂತರ ಯಂತ್ರ ಕೆಲಸ ಮಾಡುತ್ತಿತ್ತು, ಈಗ ತಂತ್ರ ಕೆಲಸ ಮಾಡುತ್ತಿದೆ. ಇದಕ್ಕೆ ನೀವು ಬಿಜೆಪಿಗೆ ಮತ ನೀಡುವ ಮೂಲಕ ತಂತ್ರಕ್ಕೆ ಪ್ರತಿ ತಂತ್ರ ಕೊಡಬೇಕು. ವೈದ್ಯಕೀಯ ವೃತ್ತಿಯಲ್ಲಿ ಬಡವರು, ಕೂಲಿ, ಕಾರ್ಮಿಕರು, ನಿರ್ಗತಿಕರ ಕಣ್ಣೀರು ಒರೆಸಿದ್ದೇನೆ, ನನ್ನ ಕ್ರಮ ಸಂಖ್ಯೆ 1, ಫಲಿತಾಂಶದಲ್ಲಿ ಕೂಡ ಮೊದಲ ಸ್ಥಾನ ಬರಬೇಕು. ಎಲ್ಲಾ ಕ್ಷೇತ್ರಗಳನ್ನೂ ಸುತ್ತಿದ್ದು ಜನರ ವ್ಯಾಪಕ ಬೆಂಬಲ ನೋಡಿ ಹೆಚ್ಚಿನ ಆತ್ಮವಿಶ್ವಾಸ ಬಂದಿದೆ, ನನ್ನನ್ನು ಸಂಸದನಾಗಿಸಲು, ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲ ರಾಜ್ಯದಲ್ಲಿ ಬರಗಾಲ ಬರುತ್ತದೆ, ಈಗ ಕುಡಿಯುವ ನೀರಿಗೂ ತೊಂದರೆಯಾಗಿದ್ದು, ದನ, ಕರುಗಳಿಗೆ ನೀರಿಲ್ಲಂತೆ ಮಾಡಿದ್ದಾರೆ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟು ಕನ್ನಡಿಗರಿಗೆ ನೀರಿಲ್ಲದಂತೆ ಮಾಡಿದ ಸರ್ಕಾರ ಕಾಂಗ್ರೆಸ್ ಆಗಿದ್ದು, ಮೂರು ಬಾರಿ ಸಂಸದರಾದರೂ ಕ್ಷೇತ್ರಕ್ಕೆ ಒಂದು ಕೊಡುಗೆಯನ್ನೂ ನೀಡದ ಸಂಸದರಿಗೆ ವಿರಾಮ ನೀಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಲು ಡಾ.ಮಂಜುನಾಥ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.

ಯುವ ಮುಖಂಡ ಪ್ರಸಾದ್ ಗೌಡ ಮಾತನಾಡಿ, ಡಿ.ಕೆ.ಸಹೋದರರು ಹಣ ಮಾಡಲು ರಾಜಕೀಯಕ್ಕೆ ಬಂದಿದ್ದಾರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚಿಕ್ಕಮಂಗಳೂರಿನಲ್ಲಿ ಹೇಳಿಕೆ ನೀಡಿದ್ದು, ಎಂಟು ವರ್ಷದ ಮಗುವನ್ನು ಕಿಡ್ನಾಪ್ ಮಾಡಿ ಡಿ.ಕೆ.ಶಿವಕುಮಾರ್ ಅವರು ಬಿಡದಿಯಲ್ಲಿ ಒಂದು ಆಸ್ತಿ ಕಬಳಿಸಿದ್ದಾರೆ. ಇಂತವರಿಗೆ ಮತ ಹಾಕಬೇಕಾ?, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಡಾ. ಮಂಜುನಾಥ್‌ಗೆ ಮತ ನೀಡಿ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ತಾಲೂಕಿನ ಶಿವಗಂಗೆಯಿಂದ ಮತ ಪ್ರಚಾರ ಆರಂಭಿಸಿ ಲಕ್ಷ್ಮೀಪುರವರೆಗೂ ಭರ್ಜರಿ ಮತಯಾಚನೆ ಮಾಡಿದರು. ನೂರಾರು ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಬೃಹತ್ ಗಾತ್ರದ ಹಾರ ಹಾಕಿ ಡಾ. ಮಂಜುನಾಥ್ ಹಾಗೂ ಮುಖಂಡರನ್ನು ಸ್ವಾಗತಿಸಿದರು.