ಜೀವನದ ಯಶಸ್ಸಿಗೆ ಪರಿಶ್ರಮ, ನಿರಂತರ ಕಲಿಕೆ ಮುಖ್ಯ

| Published : Jun 07 2024, 12:31 AM IST

ಸಾರಾಂಶ

ದಾವಣಗೆರೆ, ಜೀವನದಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಪರಿಶ್ರಮ ಮತ್ತು ನಿರಂತರ ಕಲಿಕೆ ಬಹಳ ಮುಖ್ಯ ಎಂದು ಬೆಂಗಳೂರಿನ ಮೊರ್ಗನ್ ಸ್ಟಾನ್ಲಿಯ ಸೀನಿಯರ್ ರಿಲಯಬಿಲಿಟಿ ಪ್ರೊಡಕ್ಷನ್ ಎಂಜಿನಿಯರ್ ಎ.ರಾಘವೇಂದ್ರ ಅಭಿಪ್ರಾಯ ಪಟ್ಟರು.

ಇನ್ಫಾರ್ಮೇಷನ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜೀವನದಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಪರಿಶ್ರಮ ಮತ್ತು ನಿರಂತರ ಕಲಿಕೆ ಬಹಳ ಮುಖ್ಯ ಎಂದು ಬೆಂಗಳೂರಿನ ಮೊರ್ಗನ್ ಸ್ಟಾನ್ಲಿಯ ಸೀನಿಯರ್ ರಿಲಯಬಿಲಿಟಿ ಪ್ರೊಡಕ್ಷನ್ ಎಂಜಿನಿಯರ್ ಎ.ರಾಘವೇಂದ್ರ ಅಭಿಪ್ರಾಯ ಪಟ್ಟರು.

ನಗರದ ಜಿ.ಎಂ. ತಾತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಇನ್ಫಾರ್ಮೇಷನ್ ಸೈನ್ಸ್ ಎಂಜಿನಿಯರಿಂಗ್ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಇನ್ಫಾರ್ಮೇಷನ್‌ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಟಿ.ಎಂ. ವೀರಗಂಗಾಧರ ಸ್ವಾಮಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿಭಾಗದ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದುಕೊಳ್ಳುವುದರ ಮೂಲಕ ವಿಭಾಗಕ್ಕೆ ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಇದೇ ಪ್ರಸಕ್ತ ವರ್ಷದಲ್ಲಿ ವಿಭಾಗದ ಪದ್ಮಶ್ರೀ ಹೆಗಡೆ 10ರಲ್ಲಿ 10 ಪರಿಪೂರ್ಣ ಸಿಜಿಪಿಎ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಸಾಧಿಸಿದ್ದಾರೆ. ಅತ್ಯುತ್ತಮ ಹೊರ ಹೋಗುವ ವಿದ್ಯಾರ್ಥಿನಿ ಶ್ರೇಯಾ ವಿ. ಉಪಾಧ್ಯಾಯ, ಅತ್ಯುತ್ತಮ ತಂತ್ರಜ್ಞ ಪ್ರಶಸ್ತಿ ಅಭಿಷೇಕ್ ಬೆಳಗಾವಿ, ಕಾರ್ಯಕ್ಷಮತೆ ವಿದ್ಯಾರ್ಥಿನಿಯಾಗಿ ಎಂ.ಜೆ. ಜೀವಿತಾ ಹೊರಹೊಮ್ಮಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ ವಹಿಸಿದ್ದರು.ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ, ಸಂಯೋಜಕರಾದ ಶ್ರೀಸೌಮ್ಯ ಯತ್ತಿನ ಹಳ್ಳಿ, ಎಂ.ಶ್ರೀಪೂಜಾ, ಸಹಾಯಕ ಪ್ರಾಧ್ಯಾಪಕರು ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

- - - -5ಕೆಡಿವಿಜಿ37ಃ:

ದಾವಣಗೆರೆ ಜಿಎಂಐಟಿ ಕಾಲೇಜಿನಲ್ಲಿ ಇನ್ಫಾರ್ಮೇಷನ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.