ಯಶಸ್ಸಿಗೆ ಪರಿಶ್ರಮ ಮುಖ್ಯ

| Published : May 28 2024, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಸಾಧಿಸಲು ಬಲವಾದ ಇಚ್ಛಾಶಕ್ತಿ ಬೇಕು. ಕಷ್ಟಪಟ್ಟು ಓದಿದರೇ ಯಾವುದೇ ಪರೀಕ್ಷೆಯಲ್ಲಿ ಯಶಸ್ಸು ಸುಲಭ. ಅದಕ್ಕೆ ಸಂಕಲ್ಪ ಮತ್ತು ಕಠಿಣ ಪರಿಶ್ರಮಬೇಕು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಿಗುತ್ತದೆ ಎಂದು ತಹಸೀಲ್ದಾರ್ ಟಿ.ಟಿ.ತೋಡ್ಕರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಸಾಧಿಸಲು ಬಲವಾದ ಇಚ್ಛಾಶಕ್ತಿ ಬೇಕು. ಕಷ್ಟಪಟ್ಟು ಓದಿದರೇ ಯಾವುದೇ ಪರೀಕ್ಷೆಯಲ್ಲಿ ಯಶಸ್ಸು ಸುಲಭ. ಅದಕ್ಕೆ ಸಂಕಲ್ಪ ಮತ್ತು ಕಠಿಣ ಪರಿಶ್ರಮಬೇಕು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಿಗುತ್ತದೆ ಎಂದು ತಹಸೀಲ್ದಾರ್ ಟಿ.ಟಿ.ತೋಡ್ಕರ ಹೇಳಿದರು.ಕುಠಾಳಿಯ ಹರಳಯ್ಯ ಸಮಾಜ ಬಾಂಧವರು ಎಸ್ಸೆಸ್ಸೆಲ್ಸಿಯಲ್ಲಿ ಅಮೃತಾ ತೋಡಕರ ಹಾಗೂ ಪಿಯುಸಿಯಲ್ಲಿ ಅನುಕ್ಷಾ ತೋಡಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಯಶಸ್ಸಿಗೆ ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಉಷಾರಾಣಿ ಮಾನೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬರುತ್ತಿದ್ದು, ಸಾಮಾಜಿಕ ಅಭಿವೃದ್ಧಿಗೆ ಇದು ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಸಾಧಿಸಿದ ಯಶಸ್ಸು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ, ಕಷ್ಟಪಟ್ಟು ಅಧ್ಯಯನ ಮಾಡಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರು.

ವಿಭಾಗೀಯ ಮ್ಯಾಜಿಸ್ಟ್ರೇಟ್ ಕಚೇರಿಯ ನಿವೃತ್ತ ಅಧಿಕಾರಿ ಎ.ಜಿ.ಮಂಜು ಮಾತನಾಡಿದರು. ಮಧುಕರ ತೋಡ್ಕರ, ಪದ್ಮನಾ ತೋಡಕರ, ರಾಜೀವ್ ಮಾನೆ, ವಿದ್ಯಾಧರ ತೋಡ್ಕರ, ರೇಖಾ ತೋಡ್ಕರ, ಮಾಧುರಿ ತೋಡ್ಕರ, ಸುಮನ ತೋಡ್ಕರ, ಮಾರುತಿ ತೋಡ್ಕರ, ಬಾಬಾ ಗೌಡ ಜಾಂಕರೆ, ಅಶೋಕ ಯಲಗೌಡನವರ, ಶೋಭಾ ತೋಡ್ಕರ, ವೈಜಂತಿ ತೋಡಕರ, ಮಲ್ಲಗೌಡನವರ, ನಾಗಪ್ಪ ಕಾಮಗೌಡನವರ ಹಾಗೂ ನಾಗರಿಕರು ಉಪಸ್ಥಿತರಿದ್ದರು. ಚೇತನ್ ಸನದಿ ಸ್ವಾಗತಿಸಿ, ವಂದಿಸಿದರು.