Petition against construction of ring road

ತೀರ್ಥಹಳ್ಳಿ: ಕುಡುಮಲ್ಲಿಗೆ, ನರಟೂರು, ಅರಳಾಪುರ ಹಾಗೂ ಮುಳುಬಾಗಿಲು ಗ್ರಾ.ಪಂ.ಯನ್ನು ಹಾದು ಹೋಗುವ ವರ್ತುಲ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದ್ದು, ಶುಕ್ರವಾರ ಪ್ರವಾಸಿಮಂದಿರದಲ್ಲಿ ಗ್ರಾಮಸ್ಥರು ಗ್ರಾಮೀಣ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ರಿಂಗ್ ರೋಡ್ ನಿರ್ಮಾಣ ಹಂತದ ಪೂರ್ವಭಾವಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಯೋಜನೆಯಂತೆ ರೈತರ ಜಮೀನುಗಳ ಮೇಲೆಯೇ ಈ ಹೆದ್ದಾರಿ ಹಾದು ಹೋಗುವಂತೆ ನಕ್ಷೆ ಸಿದ್ಧಪಡಿಸಲಾಗಿದೆ. ರಸ್ತೆ ನಿರ್ಮಾಣ ಹಾಗೂ ವಿಸ್ತರಣೆಯಿಂದ ಈ ಗ್ರಾಮಗಳ ನೈಸರ್ಗಿಕ ಪರಿಸರ ಮತ್ತು ಜೀವವೈವಿಧ್ಯತೆಗೆ ಹಾನಿ ಉಂಟಾಗಲಿದೆ ಎಂದು ತಕರಾರಿನಲ್ಲಿ ತಿಳಿಸಲಾಗಿದೆ.

ಗ್ರಾಮಸ್ಥರ ಅರ್ಜಿ ಸ್ವೀಕರಿಸಿ ಮಾತನಾಡಿದ ಗ್ರಾಮೀಣ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ನವೀನ್ ಹಾಗೂ ಸಹಾಯಕ ಇಂಜಿನಿಯರ್ ಶೈಲಾ, ವರ್ತುಲ ರಸ್ತೆ ಹಾದು ಹೋಗುವ ಎಲ್ಲಾ ಗ್ರಾ.ಪಂ ವ್ಯಾಪ್ತಿಯ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ದಾಖಲೆ ಸಲ್ಲಿಸುವ ಮುಂಚಿತವಾಗಿ ಸಾರ್ವಜನಿಕರಿಂದ ಬಂದಿರುವ ತಕರಾರು ಅರ್ಜಿಗಳನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.ಈ ಸಭೆಯಲ್ಲಿ ನೆರಟೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ. ವಾದಿರಾಜ್, ವಿನಾಯಕ ತುಪ್ಪದಮನೆ, ಕೊರಕೋಟೆ ಶ್ರೀನಿವಾಸ್, ಮುಳುಬಾಗಿಲು ಮಂಜುನಾಥ ಶೆಟ್ಟಿ, ಬಿಳಿಗಿರಿ ವಿಜಯ್, ಕುಡುಮಲ್ಲಿಗೆ ಮಂಜುನಾಥ್ ಶೆಟ್ಟಿ ಇದ್ದರು.

ಫೊಟೋ 11 ಟಿಟಿಎಚ್ 03

ವರ್ತುಲ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಪ್ರವಾಸಿಮಂದಿರದಲ್ಲಿ ಗ್ರಾಮಸ್ಥರು ಗ್ರಾಮೀಣ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿದರು.