ಆರೋಗ್ಯವೇ ಭಾಗ್ಯ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಿದ್ವಿನ್ ಆಸ್ಪತ್ರೆ ಆಯೋಜಿಸಿದ್ದ ವಿಶ್ವ ಕಿಡ್ನಿ ದಿನ ಹಾಗೂ ವಿಶ್ವ ಪ್ರಯೋಗಾಲಯ ದಿನಾಚರಣೆ ಅಂಗವಾಗಿ ವಿಶಿಷ್ಟ ‘ರನ್ ಫಾರ್ ಹೆಲ್ತ್’ ಮಾರಥಾನ್‌ನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಆರೋಗ್ಯ ಜಾಗೃತಿ ಮೂಡಿಸಿದ ಮ್ಯಾರಥಾನ್, ಉಚಿತ ಕಿಡ್ನಿ ತಪಾಸಣೆ ಶಿಬಿರ ಉದ್ಘಾಟಿಸಿದ ಡಿವೈಎಸ್ಪಿ ಪ್ರಕಾಶ್

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ನಗರದ ಸಿದ್ವಿನ್ ಆಸ್ಪತ್ರೆಯು ರೋಟರಿ ಕ್ಲಬ್ ಸಹಯೋಗದೊಂದಿಗೆ 5 ಕಿಮೀ ಮಾರಥಾನ್ ಹಾಗೂ ಉಚಿತ ಕಿಡ್ನಿ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ ಡಿವೈಎಸ್ಪಿ ಪ್ರಕಾಶ್ ಮ್ಯಾರಥಾನ್‌ಗೆ ಚಾಲನೆ ನೀಡಿದರು.

ಆರೋಗ್ಯವೇ ಭಾಗ್ಯ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಿದ್ವಿನ್ ಆಸ್ಪತ್ರೆ ಆಯೋಜಿಸಿದ್ದ ವಿಶ್ವ ಕಿಡ್ನಿ ದಿನ ಹಾಗೂ ವಿಶ್ವ ಪ್ರಯೋಗಾಲಯ ದಿನಾಚರಣೆ ಅಂಗವಾಗಿ ವಿಶಿಷ್ಟ ‘ರನ್ ಫಾರ್ ಹೆಲ್ತ್’ ಮಾರಥಾನ್‌ನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಈ ವೇಳೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಮೇಘನಾ ಅರುಣ್ ಕುಮಾರ್, ಉತ್ತಮ ಆರೋಗ್ಯಕ್ಕಾಗಿ ಒತ್ತಡರಹಿತ ಜೀವನ ಹಾಗೂ ನಿಯಮಿತ ದೈಹಿಕ ಚಟುವಟಿಕೆಗಳ ಅಗತ್ಯವಿದೆ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಿಶ್ವ ಕಿಡ್ನಿ ದಿನದ ಅಂಗವಾಗಿ ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಕಿಡ್ನಿ ತಪಾಸಣೆ ಶಿಬಿರವನ್ನು ನಡೆಸಲಾಗುತ್ತಿದೆ. ದೀರ್ಘಕಾಲ ಔಷಧಿಗಳನ್ನು ಸೇವಿಸುವುದರಿಂದ ಕಿಡ್ನಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು, ಆರಂಭಿಕ ಹಂತದಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ನಿಯಮಿತ ತಪಾಸಣೆ ಅಗತ್ಯವಿದೆ ಎಂದು ಅವರು ತಿಳಿಸಿದರು.

ನುರಿತ ತಜ್ಞ ಡಾ.ರಮೇಶ್ ಅವರು ತಪಾಸಣೆ ನಡೆಸಲಿದ್ದಾರೆ ಎಂದರು.

ಆರೋಗ್ಯಕರ ಜೀವನಕ್ಕೆ ದೈಹಿಕ ಚಟುವಟಿಕೆಗಳು ಬಹಳ ಮುಖ್ಯ, ಓಟ ಹಾಗೂ ವ್ಯಾಯಾಮಗಳಿಂದ ದೇಹದಲ್ಲಿ ರಕ್ತ ಸಂಚಲನ ಸುಧಾರಿಸಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ದಿನನಿತ್ಯ ವ್ಯಾಯಾಮ ಮಾಡುವ ಮೂಲಕ ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.

ಈ ಮ್ಯಾರಥಾನ್ನಲ್ಲಿ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ವಿಜೇತರಿಗೆ ಮೊದಲ ಮೂರು ಬಹುಮಾನಗಳೊಂದಿಗೆ, ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಮತ್ತು ಪದಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಪುರುಷ ವಿಭಾಗದಲ್ಲಿ ಗುರುಪ್ರಸಾದ್ ಪ್ರಥಮ ಬಹುಮಾನವಾಗಿ ₹10 ಸಾವಿರ, ಚಿರಂತ್ ಕಶ್ಯಪ್ ದ್ವಿತೀಯ ಬಹುಮಾನವಾಗಿ ₹5 ಸಾವಿರ, ರಘು ವಂಶಿ ತೃತೀಯ ಬಹುಮಾನವಾಗಿ ₹3 ಸಾವಿರ ಪಡೆದರು.

ಮಹಿಳಾ ವಿಭಾಗದಲ್ಲಿ ಜಯಶ್ರೀ ಪ್ರಥಮ ಬಹುಮಾನವಾಗಿ ₹7 ಸಾವಿರ ,ಕುಸುಮಾ ದ್ವಿತೀಯ ಬಹುಮಾನವಾಗಿ ₹5 ಸಾವಿರ, ಸೌಮ್ಯ ತೃತೀಯ ಬಹುಮಾನವಾಗಿ ₹3 ಸಾವಿರ ಪಡೆದರು. ಯುವಕರು ಹಾಗೂ ಹಿರಿಯರು ಸಮಾನವಾಗಿ ಭಾಗವಹಿಸಿ ತಮ್ಮ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಸಿದ್ವಿನ್ ಆಸ್ಪತ್ರೆ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮ ಆರೋಗ್ಯವೇ ಭಾಗ್ಯ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಿತು.

ಈ ಸಂದರ್ಭದಲ್ಲಿ ಡಾ.ಅರುಣ್ ಕುಮಾರ್, ಡಾ.ರವಿ ಕುಮಾರ್, ಡಾ.ಜ್ಯೋತಿ ಪ್ರಕಾಶ್, ಡಾ.ಅರ್ಜುನ್ ಬಹದ್ದೂರ್, ಮ್ಯಾನೇಜರ್ ಮಹೇಶ್, ಸಾರ್ವಜನಿಕರು ಇದ್ದರು.

ಸಿಕೆಬಿ-3 ಚಿಕ್ಕಬಳ್ಳಾಪುರ ನಗರದ ಸಿದ್ವಿನ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ 5ಕಿಮೀ ಮಾರಥಾನ್/ ವಾಕ್‌ಥಾನ್ ಗೆ ಡಿವೈಎಸ್ಪಿ ಪ್ರಕಾಶ್ ಚಾಲನೆ ನೀಡಿದರು.