ಸಾರಾಂಶ
- ಷಂಶೀಪುರ ಸರ್ಕಾರಿ ಶಾಲೆಗೆ ಸುಣ್ಣ, ಬಣ್ಣ, ಚಿತ್ರಕಲೆ ಸೇವೆ ಸಮರ್ಪಣೆ ಸಮಾರಂಭದಲ್ಲಿ ಕೃಷ್ಣಪ್ಪ ಅಭಿಮತ - - - ಕನ್ನಡಪ್ರಭ ವಾರ್ತೆ ಹರಿಹರ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಸರ್ಕಾರಿ ಶಾಲೆಗಳನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ ಹೇಳಿದರು.
ತಾಲೂಕಿನ ಷಂಶೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮ್ಮಿಲನ ಸಂಸ್ಥೆಯಿಂದ ಸೋಮವಾರ ಸುಣ್ಣ, ಬಣ್ಣ ಮಾಡಿಸಿ ಚಿತ್ರಕಲೆ ರಚಿಸಿ ಸಮರ್ಪಣೆ ಮಾಡುವ ಸಮಾರಂಭದಲ್ಲಿ ಅವರು ಮಾತನಾಡಿದರು.ಶಾಲೆಗಳ ಭೌತಿಕ ಸ್ಥಿತಿಯೂ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಮುದಾಯದ ಸಹಕಾರವಿದ್ದಲ್ಲಿ ಈ ನ್ಯೂನತೆಗಳು ದೂರವಾಗಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗುತ್ತದೆ. ಸಮ್ಮಿಲನ ಸಂಸ್ಥೆಯ ಸದಸ್ಯರ ಕಾರ್ಯ ಶ್ಲಾಘನೀಯ ಎಂದರು.
ನಿವೃತ್ತ ಪ್ರೌಢಶಾಲಾ ಶಿಕ್ಷಕ ಎಸ್. ಕೃಷ್ಣಮೂರ್ತಿ ಶ್ರೇಷ್ಠಿ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಹಳೆಯ ಕಾರ್ಯಕರ್ತರು ಸೇರಿ ಸಮ್ಮಿಲನ ಎಂಬ ಸಂಸ್ಥೆ ರಚಿಸಿದ್ದಾರೆ. ಈ ಸಂಸ್ಥೆಯ ಸದಸ್ಯರು ಕೂಡಿಸಿದ ಹಣದಿಂದ ಈ ಶಾಲೆಯ 7 ಕೊಠಡಿಗಳನ್ನು ಆಯ್ಕೆ ಮಾಡಿ ಕೊಳ್ಳಲಾಗಿದೆ ಎಂದರು.ಗ್ರಾಮದ ಮುಖಂಡ ಎಸ್.ಜಿ. ರೇವಣಸಿದ್ದಪ್ಪ ಮಾತನಾಡಿದರು. ಶಾಲೆಗೆ ಚಿತ್ರಕಲೆ ರಚಿಸಿದ ಮೈಸೂರಿನ ರಾಷ್ಟ್ರೀಯ ಕಲಾ ಮಂಚ್ ಸದಸ್ಯ ಕಲಾವಿದರಾದ ಚಂದ್ರಶೇಖರ್, ತ್ಯಾಗರಾಜ್, ತೇಜಸ್, ಸುಚಿತ್ರ, ದೇವಿಕಾ, ಲಿಖಿತಾ ಅವರನ್ನು ಸತ್ಕರಿಸಲಾಯಿತು. ಶುಕ್ರವಾರದಂದು ದೊಡ್ಡಬಾತಿಯ ತಪೋವನ ಆಯುರ್ವೇದ ಕಾಲೇಜಿನ ವೈದ್ಯರ ತಂಡದಿಂದ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.
ಗ್ರಾಪಂ ಸದಸ್ಯರಾದ ರೇವಣಸಿದ್ದಪ್ಪ, ಶಂಕರ್ ವೈ.ಎಸ್, ಎನ್.ಕೆ. ಪ್ರಕಾಶ್, ಗ್ರಾಮಸ್ಥರಾದ ಹನುಮಂತಪ್ಪ ಬಾರಿಕರ್, ಎಸ್.ಜಿ. ರೇವಣಸಿದ್ದಪ್ಪ, ಹರೀಶ್, ತಿಪ್ಪೇಶಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ, ಸಿಆರ್‍ಪಿ ದಿವಾಕರ ತೇಲ್ಕರ್, ಎಸ್‍ಡಿಎಂಸಿ ಅಧ್ಯಕ್ಷ ಗುರುಮೂರ್ತಿ ಕೆ.ಎಂ., ಉಪಾಧ್ಯಕ್ಷೆ ಉಮಾ ಶಿವಕುಮಾರ್, ಸದಸ್ಯರಾದ ಚಂದ್ರಣ್ಣ, ಅಶೋಕ್, ಶಿಕ್ಷಕರಾದ ಗದಿಗೇಶಪ್ಪ ಚಪ್ಪರದಹಳ್ಳಿ, ಎನ್.ಪಿ.ಶಿವಪ್ಪ, ಎನ್.ಧನಂಜಯ್, ಎನ್.ಹಾಲೇಶ್, ಪಿ.ಸುರೇಖಾ, ಸವಿತಾ ಎಂ. ಸಮ್ಮಿಲನ ಸಂಸ್ಥೆಯ ಸದಸ್ಯರಾದ ಚಿತ್ರದುರ್ಗದ ಉದಯರವಿ, ಶಿವಮೊಗ್ಗದ ಕೆ.ಒ.ನರೇಂದ್ರ, ಹಿರಿಯ ನ್ಯಾಯವಾದಿ ವೈ.ಮಂಜಪ್ಪ, ಎಲ್.ಎನ್. ಕಲ್ಲೇಶ್, ಕೆ.ಟಿ.ನಾಗರಾಜ್, ಗಣೇಶ್ ಪವಾರ್, ಶರತ್ ಕಲ್ಲೇಶ್, ವಿಜಯ್, ಚನ್ನಗಿರಿ ಪಂಚಾಕ್ಷರಿ, ಕೊಟ್ರೇಶಪ್ಪ ಎಂ. ಇದ್ದರು.ಶಾಲಾ ಮಕ್ಕಳು ಪ್ರಾರ್ಥಿಸಿದರು, ಮಾಲತೇಶ್ ಜಿ. ಭಂಡಾರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕರಿಬಸಪ್ಪ ಕುಪ್ಪೆಲೂರು ನಿರೂಪಿಸಿ, ಮುಖ್ಯಶಿಕ್ಷಕಿ ಎನ್.ಸಾವಿತ್ರಮ್ಮ ವಂದಿಸಿದರು.
- - -ಕೋಟ್ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದವರೇ ಸಮಾಜದಲ್ಲಿ ಅತ್ಯುನ್ನತ ಸ್ಥಾನಗಳಲ್ಲಿದ್ದಾರೆ. ಇಂಥವರು ತಾವು ಓದಿದ ಶಾಲೆಗಳ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು
- ಎಸ್.ಟಿ. ವೀರೇಶ್, ಮಾಜಿ ಮೇಯರ್, ಪಾಲಿಕೆ- - - -18ಎಚ್‍ಆರ್‍ಆರ್03:
ಹರಿಹರ ತಾಲೂಕಿನ ಷಂಶೀಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮ್ಮಿಲನ ಸಂಸ್ಥೆಯಿಂದ ಸೋಮವಾರ ಸುಣ್ಣ, ಬಣ್ಣ ಮಾಡಿಸಿ ಚಿತ್ರಕಲೆ ರಚಿಸಿದ ನಂತರ ನಡೆದ ನಂತರ ಸಮರ್ಪಣೆ ಸಮಾರಂಭ ನಡೆಯಿತು.