ಶಿಕ್ಷಣ ಜ್ಞಾನ ಪ್ರಶಸ್ತಿಯನ್ನು ಸೋಮವಾರಪೇಟೆ ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಲಾಂಚನ್ ಕಾರೇಕರ್ ಅವರಿಗೆ ಲಭಿಸಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಬೆಂಗಳೂರಿನ ಸೀಗೆಹಳ್ಳಿ ‘ಶಿಕ್ಷಣ ಜ್ಞಾನ’ ಮಾಸಪತ್ರಿಕೆಯ ವತಿಯಿಂದ ನೀಡುವ ಶಿಕ್ಷಣ ಜ್ಞಾನ ಪ್ರಶಸ್ತಿಯನ್ನು ಸೋಮವಾರಪೇಟೆ ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಲಾಂಚನ್ ಕಾರೇಕರ್ ಅವರಿಗೆ ಲಭಿಸಿದೆ.ಹಾಸನದ ಶ್ರೀ ಶಿವಲಿಂಗೇಶ್ವರ ಕಲ್ಯಾಣ ಮಂದಿರದಲ್ಲಿ ಈಚೆಗೆ ನಡೆದ ಪತ್ರಿಕೆಯ 23ನೇ ವಾರ್ಷಿಕೋತ್ಸವ ಮತ್ತು ಶೈಕ್ಷಣಿಕ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ವೇದಿಕೆಯಲ್ಲಿ ಹಾಸನ ತಣ್ಣೀರುಹಳ್ಳ ಮಠದ ವಿಜಯಕುಮಾರ್ ಸ್ವಾಮಿ, ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ.ಎನ್.ಗಂಗಾಧರಪ್ಪ, ಶಿಕ್ಷಣ ಜ್ಞಾನ ಪತ್ರಿಕೆಯ ಸಂಪಾದಕ ಎಸ್.ವಿ. ನಾಗರಾಜ್ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಇದ್ದರು.