ಸಾರಾಂಶ
ಸೊರಬ ಪಟ್ಟಣದ ಚಾಮರಾಜಪೇಟೆಯ ಕಾನುಕೇರಿ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಕಾನುಕೇರಿ ಮಠದ ಘನಬಸವ ಅಮರೇಶ್ವರ ಮಹಾಸ್ವಾಮೀಜಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸೊರಬ
ಬಹಿರಂಗ ಶುದ್ಧಿಗಾಗಿ ನಾವು ಸ್ನಾನಾದಿಗಳನ್ನು ಮಾಡಿದರೆ ಅಂತರಂಗ ಶುದ್ಧಿಗಾಗಿ ತೀರ್ಥಯಾತ್ರೆಗಳನ್ನು ಮಾಡಬೇಕು ಎಂದು ಸಮಾಧಾನ ಹಿರೇಮಠ ಜಡೆ ಬಂಕಸಾಣ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಮಹಾಸ್ವಾಮಿಗಳು ಹೇಳಿದರು.ಭಾನುವಾರ ಪಟ್ಟಣದ ಚಾಮರಾಜಪೇಟೆಯ ಕಾನುಕೇರಿ ಮಠದಲ್ಲಿ ಚಟ್ಟಿ ಅಮಾವಾಸ್ಯೆ ಪ್ರಯುಕ್ತ ಆಯೋಜಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಾತ್ರೆ ಹೊರಗಿಂದ ಮಾಡುವುದಲ್ಲ, ಒಳಗಿನಿಂದಲು ಮಾಡಬೇಕು. ಕಾಶಿ ರಾಮೇಶ್ವರ ಸೇರಿ ಮುಂತಾದ ಕ್ಷೇತ್ರಗಳಿಗೆ ಭೇಟಿ ಕೊಡಬಹುದು. ಆದರೆ ಅಂತರಂಗ ಶುಚಿ ಇಲ್ಲದೆ ದೇವರ ಹತ್ತಿರ ಹೋಗಿ ಬಂದರೇನು ಪ್ರಯೋಜನ. ಹಾಗಾಗಿ ಮನುಷ್ಯ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸುಚಿತ್ವ ಕಾಯ್ದುಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ಉದ್ಯಮಿ ನಿಜಗುಣ ಚಂದ್ರಶೇಖರ್, ಗಂಗಾಧರ ಮಾಸ್ತರ್ ಹಾಗೂ ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿದರು.
ಈ ವೇಳೆ ಕಾಶಿ ಯಾತ್ರೆ ಮಾಡಿ ಬಂದ ಹಲವರು ತಮ್ಮ ಅನುಭವ ಹಂಚಿಕೊಂಡರು. ದಾಸೋಹಿಗಳಾದ ಉಜ್ಜಪ್ಪ, ಬಸವರಾಜಪ್ಪ ಗೌಡ್ರು, ಕೊಟ್ರೇಶಪ್ಪ ಮುಂತಾದವರನ್ನು ಆಶೀರ್ವದಿಸಲಾಯಿತು. ಅಕ್ಕನ ಬಳಗದ ಜಯಮಾಲ, ಸುನೀತಾ, ಪೂರ್ಣಿಮಾ, ಲಿಂಗರಾಜ ಧೂಪದ ಮಠ, ಉದ್ಯಮಿ ನಾಗರಾಜ ಗುತ್ತಿ, ಇಂದೂಧರ, ವಿಶ್ವನಾಥ ಗೌಡ್ರು, ನಿವೇದಿತಾ, ಮಂಜಣ್ಣ, ಮುಂತಾದವರಿದ್ದರು.