ಸಾರಾಂಶ
ಮಹಿಳಾ ಮತದಾರರನ್ನು ಆಕರ್ಷಿಸಲು ಮತ್ತು ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಲು ಪಿಂಕ್ ಸಖಿ ಬೂತ್ ವ್ಯವಸ್ಥೆಯನ್ನು ಎಲೆಬೇತೂರು ಗ್ರಾಮದಲ್ಲಿ ಮಾಡಲಾಗಿದೆ.
ದಾವಣಗೆರೆ: ಎಲೆಬೇತೂರು ಗ್ರಾಮದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಅಂಗವಾಗಿ ಮತದಾನ ಜಾಗೃತಿಗೆ ಮಹಿಳಾ ಮತದಾರರನ್ನು ಆಕರ್ಷಿಸಲು ಮತ್ತು ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಲು ಪಿಂಕ್ ಸಖಿ ಬೂತ್ ವ್ಯವಸ್ಥೆಯನ್ನು ಎಲೆಬೇತೂರು ಗ್ರಾಮದಲ್ಲಿ ಮಾಡಲಾಗಿದೆ.
ಎಲೆಬೇತೂರು ಪಂಚಾಯಿತಿ ಕಚೇರಿಯಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಪಿಂಕ್ ಸಖಿ ಮತಗಟ್ಟೆ ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ. ಇದೇ ಗ್ರಾಮ ಪಂಚಾಯಿತಿಗೆ ಸೇರುವ ಬಿ.ಕಲಪನಹಳ್ಳಿ, ಬಿ.ಚಿತ್ತಾನಹಳ್ಳಿಯಲ್ಲೂ ಮತದಾನಕ್ಕಾಗಿ ಉತ್ತಮ ಮತಗಟ್ಟೆ ವ್ಯವಸ್ಥೆ ಮಾಡಿದ್ದಾರೆ.ನಮ್ಮ ಮತ-ನಮ್ಮ ಹಕ್ಕು, ನನ್ನ ಮತ-ನನ್ನ ಧ್ವನಿ, ನಮ್ಮ ನಡೆ ಮತಗಟ್ಟೆ ಕಡೆ ಎಂಬ ಘೋಷಣೆಗಳೊಂದಿಗಿರುವ ಮತದಾರರನ್ನು ಆಕರ್ಷಿಸುವಂತೆ ಮಾಡಿದೆ. ಸಂಜೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅರಮನೆ ರೀತಿಯಲ್ಲಿ ಸಜ್ಜುಗೊಂಡಿರುವ ಮತಗಟ್ಟೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.