ಮನೆಗೊಂದು ಸಸಿನೆಟ್ಟು ಪರಿಸರ ಸಂರಕ್ಷಿಸಿ

| Published : Aug 23 2024, 01:07 AM IST

ಸಾರಾಂಶ

ಜನಸಂಖ್ಯೆ ಹೆಚ್ಚಳ ಮತ್ತು ಮರಗಳ ನಾಶದಿಂದ ನಮ್ಮ ಪರಿಸರವು ಮಾಲಿನ್ಯವಾಗಿದ್ದು ಇದರಿಂದ ಜನರ ಆರೊಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಇದನ್ನು ತಡೆಯಲು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಒಂದು ಸಸಿಯನ್ನು ನೆಡಬೇಕು ಎಂದು ತಾಪಂ ಮ್ಯಾನೇಜರ್ ಅಮೃತ ಕ್ಷೀರಸಾಗರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಜನಸಂಖ್ಯೆ ಹೆಚ್ಚಳ ಮತ್ತು ಮರಗಳ ನಾಶದಿಂದ ನಮ್ಮ ಪರಿಸರವು ಮಾಲಿನ್ಯವಾಗಿದ್ದು ಇದರಿಂದ ಜನರ ಆರೊಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಇದನ್ನು ತಡೆಯಲು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಒಂದು ಸಸಿಯನ್ನು ನೆಡಬೇಕು ಎಂದು ತಾಪಂ ಮ್ಯಾನೇಜರ್ ಅಮೃತ ಕ್ಷೀರಸಾಗರ ಹೇಳಿದರು.

ತಾಲೂಕಿನ ದಿಗ್ಗಾಂವ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯಲ್ಲಿ ತಾಪಂ ಹಾಗೂ ಅರಣ್ಯ ಇಲಾಖೆಯ ಸಹಯೊಗದೊಂದಿಗೆ ನಡೆದ ತಾಯಿ ಹೆಸರಲ್ಲಿ ಒಂದು ವೃಕ್ಷ ಅಭಿಯಾನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಇತ್ತೀಚೆಗೆ ಪರಿಸರ ಮಾಲಿನ್ಯವು ಹೆಚ್ಚಾಗಿದ್ದು ಇದರಿಂದ ಸರಿಯಾದ ಮಳೆ ಬರುತ್ತಿಲ್ಲಾ ಇದಕ್ಕೆ ಮೂಲ ಕಾರಣ ನಾವುಗಳು ಪರಿಸರ ನಾಶ ಮಾಡುತ್ತಿರುವದು ಕಾರಣವಾಗಿದೆ. ಅದಕ್ಕಾಗಿ ಸರ್ಕಾರವು ಪರಿಸರ ಸಂರಕ್ಷಣೆ ಮಾಡಲು ಯೊಜನೆಗಳನ್ನು ರೂಪಿಸುತ್ತಿದ್ದು ಇದರ ಅಂಗವಾಗಿ ಪ್ರತಿಯೊಬ್ಬರು ತಮ್ಮ ಮನೆಗಳು ಮತ್ತು ಸುತ್ತ ಮುತ್ತಲಿನ ಪರಿಸರದಲ್ಲಿ ಸಸಿ ನೆಟ್ಟು ಉತ್ತಮ ಪರಿಸರದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಭಿವೃದ್ದಿ ಅಧಿಕಾರಿ ಸಂಗೀತಾ ಮಾತನಾಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಶಾಲೆ ಶಿಕ್ಷಕರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.