೧೦ಸಾವಿರ ಗಿಡಗಳ ನಾಟಿಗೆ ಚಾಲನೆ

| Published : Aug 17 2024, 12:54 AM IST / Updated: Aug 17 2024, 12:55 AM IST

ಸಾರಾಂಶ

ಈ ಅಭಿಯಾನದ ಸಂಯೋಜನೆಯಡಿಯಲ್ಲಿ ಈ ಗೋಮಾಳದ ಪ್ರದೇಶದಲ್ಲಿ ೧೦ ಸಾವಿರ ಗಿಡಗಳನ್ನು ಎನ್‌ಸಿಸಿ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿಂತಾಮಣಿದಿಂದ ಭಾಗವಹಿಸಿದ್ದರು

ಕನ್ನಡಪ್ರಭ ವಾರ್ತೆ ಚಿಂತಾಮಣಿ

ನಗರದ ಎಸ್‌ಎಲ್‌ಇಎಸ್ ಸಂಸ್ಥೆಯ ಎನ್‌ಸಿಸಿ ವಿದ್ಯಾರ್ಥಿಗಳು ಶಿಡ್ಲಘಟ್ಟ ತಾಲೂಕಿನ ಕೆ ಮುತ್ತಕದಹಳ್ಳಿ ಪ್ರದೇಶದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ಚಿಕ್ಕಬಳ್ಳಾಪುರದ ೫ ಮತ್ತು ೧೦ ಕರ್ನಾಟಕ ಬಿಎನ್ ಎನ್‌ಸಿಸಿ ಕ್ರೆಡಿಟ್‌ಗಳು ಹಾಗೂ ಕೆ ಮುತ್ತಕದಹಳ್ಳಿ ವೃಕ್ಷ ಬೆಳೆಗಾರರ ಸಹಕಾರ ಸಂಘ ಸಹಯೋದಲ್ಲಿ ೧೦ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಚಿಕ್ಕಬಳ್ಳಾಪುರ ೫ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ಲುನಿಕ್ ಬಸುರಾಯ್ ಮತ್ತು ಇವರ ತಂಡ ಚಿಂತಾಮಣಿ ನಗರದ ವಿಕ್ರಮ್ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡ ಸಾಮೂಹಿಕ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಭಿಯಾನಕ್ಕೆ ಚಾಲನೆ

ಕರ್ನಲ್ ಲುನಿಕ್ ಬಸು ರಾಯ್ ಮಾತನಾಡಿ, ಪ್ರಧಾನ ಮಂತ್ರಿ ಮೋದಿ ವಿಶ್ವ ಪರಿಸರ ದಿನದಂದು ಪ್ರಾರಂಭಿಸಿದ ರಾಷ್ಟ್ರವ್ಯಾಪಿ ಏಕ್ ಪೇಡ್ ಮಾ ಕೆ ನಾಮ್ ಮತ್ತು ಏಕ್ ಕೆಡಟ್ ಏಕ್ ಪೇಡ್ ಅಭಿಯಾನಕ್ಕೆ ಚಾಲನೆ ನೀಡಿದ್ದು ಈ ಅಭಿಯಾನದ ಸಂಯೋಜನೆಯಡಿಯಲ್ಲಿ ಈ ಗೋಮಾಳದ ಪ್ರದೇಶದಲ್ಲಿ ೧೦ ಸಾವಿರ ಗಿಡಗಳನ್ನು ಎನ್‌ಸಿಸಿ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿಂತಾಮಣಿದಿಂದ ಭಾಗವಹಿಸಿದ್ದಾರೆಂದರು.

ಭಾರತದ ಹಸಿರು ಹೊದಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಅಭಿಯಾನದಲ್ಲಿ ಚಿಕ್ಕಬಳ್ಳಾಪುರ ಚಿಂತಾಮಣಿ ಮತ್ತು ಕೋಲಾರದಿಂದ ಬಂದ ೬೧೫ಕ್ಕೂ ಹೆಚ್ಚು ಕೆಡೆಟ್‌ಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಎನ್‌ಸಿಸಿಯ ಜೆಸಿಓ ಶಿವಕುಮಾರ್ ಕೆ ಮುತ್ತಕದಹಳ್ಳಿಯ ವೃಕ್ಷ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಕೆ.ಮುತ್ತುಕದಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು