ಕ್ರಿಕೆಟ್‌ಗೆ ಅವಮಾನ ಮಾಡಿದ ಆಟಗಾರರು: ಶ್ಯಾಮರಾಜ್ ಬಿರ್ತಿ

| Published : Oct 01 2025, 01:01 AM IST

ಕ್ರಿಕೆಟ್‌ಗೆ ಅವಮಾನ ಮಾಡಿದ ಆಟಗಾರರು: ಶ್ಯಾಮರಾಜ್ ಬಿರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಒಬ್ಬ ಮಾಜಿ ಬಿಜೆಪಿ ಲೋಕಸಭಾ ಸದಸ್ಯ ಭಾರತ ಕ್ರಿಕೆಟ್ ತಂಡ ಮುಖ್ಯ ಕೋಚ್ ಆಗಿ ನೇಮಕವಾದಗಲೇ ಅನುಮಾನ ಮೂಡಿತ್ತು. ಈ ದೇಶದಲ್ಲಿ ಕ್ರಿಕೆಟ್ ಆಟವನ್ನೂ ಸಹ ಜನಸಾಮನ್ಯರ ತಲೆಯಲ್ಲಿ ಧರ್ಮದ ಭಾವನೆ ತುರುಕುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕ್ರಿಕೆಟ್ ಆಟವನ್ನು ಕೇವಲ ಆಟವಾಗಿ ಆಸ್ವಾದಿಸಬೇಕೇ ಹೊರತು, ಅದನ್ನು ರಾಜಕೀಯ ಸರಕಾಗಿ ಬಳಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ ಎಂದು ಬಿರ್ತಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಉಡುಪಿ: ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಎರಡೂ ದೇಶಗಳ ಆಟಗಾರರು ಕ್ರಿಕೆಟ್ ಆಟಕ್ಕೆ ಅವಮಾನ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ.

ಫೈನಲ್ ಪಂದ್ಯದ ನಂತರ ನಡೆದ ಬೆಳವಣಿಗೆಗಳು ಆಟಕ್ಕಿಂತ ರಾಜಕೀಯವೇ ಹೆಚ್ಚು ಮೇಳೖೆಸಿದಂತಿತ್ತು. ಇಡೀ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವು ಕ್ರಿಕೆಟ್ ಆಟದ ಹಿರಿಮೆಯನ್ನು ಎತ್ತಿ ಹಿಡಿಯುವಲ್ಲಿ ಸೋತಿತು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿನ ರಾಜಕೀಯಕ್ಕಿಂತಲೂ ಭಾರತದ ಬಿಸಿಸಿಐ ರಾಜಕೀಯ ಇನ್ನೂ ಕೆಳಮಟ್ಟದಲ್ಲಿದೆ ಅನಿಸಿತು ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.