ಸಾರಾಂಶ
ಶಹಾಪುರದಲ್ಲಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗುರುನಾಥ ಬಾಣತಿಹಾಳ ಹಾಗೂ ಉಪಾಧ್ಯಕ್ಷ ಮರಿಗೌಡ ಬಬಲಾದಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಪ್ಪಗೌಡ ದರ್ಶನಾಪುರ ಅವರು ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ನಗರದಲ್ಲಿ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಅಧ್ಯಕ್ಷರಾಗಿ ಗುರುನಾಥ್ ಡಿ. ಬಾಣತಿಹಾಳ ಹಾಗೂ ಉಪಾಧ್ಯಕ್ಷರಾಗಿ ಮರಿಗೌಡ ಬಬಲಾದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಂಗಳವಾರ ಪಿಎಲ್‌ಡಿ ಬ್ಯಾಂಕ್‌ನ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಗುರುನಾಥ್ ಬಾಣತಿಹಾಳ, ಉಪಾಧ್ಯಕ್ಷ ಸ್ಥಾನಕ್ಕೆ ಮರಿಗೌಡ ಬಬಲಾದಿ ಇಬ್ಬರು ಏಕೈಕ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ರವಿ ಕುಮಾರ ಅವರು ಅವಿರೋಧ ಆಯ್ಕೆ ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗುರುನಾಥ ಬಾಣತಿಹಾಳ ಹಾಗೂ ಉಪಾಧ್ಯಕ್ಷ ಮರಿಗೌಡ ಬಬಲಾದಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಪ್ಪಗೌಡ ದರ್ಶನಾಪುರ ಅವರು ಸನ್ಮಾನಿಸಿದರು.ನಿರ್ದೇಶಕರು ಹಾಗೂ ನಪಾರ್ಡ್ ಬ್ಯಾಂಕ್ ಜಿಲ್ಲಾ ನಿರ್ದೇಶಕರಾದ ರಾಯಪ್ಪಗೌಡ ದರ್ಶನಾಪುರ ಮಾತನಾಡಿ, ಬ್ಯಾಂಕಿನಿಂದ ರೈತರಿಗೆ ದೊರೆಯುವ ಎಲ್ಲ ಸೌಲತ್ತುಗಳನ್ನು ಒದಗಿಸುವ ಮೂಲಕ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಬ್ಯಾಂಕಿನ ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಒಟ್ಟಾಗಿ ಶ್ರಮಿಸಬೇಕು. ರೈತರ ಹಿತ ಕಾಪಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಂತಗೌಡ ಸಾದ್ಯಾಪುರ, ಶಿವರಾಜ ಹೂಗಾರ, ಶರಣಪ್ಪಗೌಡ ಇಟಗಾ.ಎಸ್, ಶರಣಗೌಡ ಬಿರನೂರ, ಸಾಹೇಬಗೌಡ ಆಲ್ದಾಳ, ಖಂಡಪ್ಪ ಪೂಜಾರಿ, ಭಾಗಣ್ಣ ದೋರನಹಳ್ಳಿ, ಮಲ್ಲಮ್ಮ ಮಾಲಿ ಪಾಟೀಲ್ ರಾಕಂಗೇರ, ವ್ಯವಸ್ಥಾಪಕ ಮಹೇಂದ್ರಕುಮಾರ ಸೇರಿದಂತೆ ಇತರರಿದ್ದರು.