‘ಸಾಹೇಬ್ರೆ ನಮ್ಮನ್ನು ಕಾಪಾಡಿ’: ಸುಡಾನ್‌ ದೇಶದಲ್ಲಿ ಶಿವಮೊಗ್ಗ ಮಹಿಳೆ ಕಣೀರು

| Published : Apr 03 2024, 01:34 AM IST

‘ಸಾಹೇಬ್ರೆ ನಮ್ಮನ್ನು ಕಾಪಾಡಿ’: ಸುಡಾನ್‌ ದೇಶದಲ್ಲಿ ಶಿವಮೊಗ್ಗ ಮಹಿಳೆ ಕಣೀರು
Share this Article
  • FB
  • TW
  • Linkdin
  • Email

ಸಾರಾಂಶ

ಸೂಡಾನ್‌ ದೇಶದ ಆಸ್ಪತ್ರೆಯೊಂದರಿಂದಲೇ ವಿಡಿಯೋ ಮಾಡಿರುವ ಶಿವಮೊಗ್ಗ ಜಿಲ್ಲೆಯ ಚಿಕ್ಕಮಟ್ಟಿ ಗ್ರಾಮದ ಮಹಿಳೆಯೊಬ್ಬರು ಆಸ್ಪತ್ರೆ ಚಿಕಿತ್ಸೆವೆಚ್ಚ ಭರಿಸಿ, ನಮ್ಮನ್ನು ಕಾಪಾಡಿ ಎಂದು ಅಂಗಲಾಚಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸರ್‌ ನಮಸ್ಕಾರ.. ನಾವು ನಮ್ಮ ದೇಶಬಿಟ್ಟು ಬೇರೆ ದೇಶಕ್ಕೆ ಬಂದು ಸಿಲುಕಿದ್ದೇವೆ. ಇಲ್ಲಿ ಮನೆಯವರಿಗೆ ತುಂಬಾನೇ ಹುಷಾರಿಲ್ಲದೇ ಆಸ್ಪತ್ರೆಗೆ ಸೇರಿಸಿದ್ದೇವೆ. ದುಡ್ಡೆಲ್ಲ ಖಾಲಿ ಮಾಡಿಕೊಂಡು ಖರ್ಚಿಗೂ ಹಣ ಇಲ್ಲದೆ ಬಹಳ ಕಷ್ಟದಲ್ಲಿ ಇದ್ದೇವೆ. ನಮ್ಮನ್ನು ಕಾಪಾಡಿ ಎಂದು ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ಗೋಳಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸೂಡಾನ್‌ ದೇಶದ ಆಸ್ಪತ್ರೆಯೊಂದರಿಂದಲೇ ವಿಡಿಯೋ ಮಾಡಿರುವ ಶಿವಮೊಗ್ಗ ಜಿಲ್ಲೆಯ ಚಿಕ್ಕಮಟ್ಟಿ ಗ್ರಾಮದ ಮಹಿಳೆಯೊಬ್ಬರು ಎರಡು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದೆವು. ಕಳೆದ ಐದು ದಿನದಿಂದ ಮನೆಯವರಿಗೆ ಹುಷಾರಿಲ್ಲ. ಮಲೇರಿಯಾ ಜ್ವರ ನೆತ್ತಿಗೆ ಏರಿ ಆರೋಗ್ಯ ತುಂಬಾನೇ ಹದಗೆಟ್ಟಿದೆ. ಆಸ್ಪತ್ರೆಯಲ್ಲಿ ಇಟ್ಟುಕೊಂಡು ತುಂಬಾನೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಇಲ್ಲಿನ ವೈದ್ಯರು ಸರಿಯಾಗಿ ಚಿಕಿತ್ಸೆಯೂ ನೀಡುತ್ತಿಲ್ಲ. ಇಲ್ಲಿಂದ ಹೋಗುವುದಕ್ಕೆ ದಾರಿ ಇಲ್ಲದಾಗಿದೆ. ಸಾಹೇಬ್ರೆ.. ನಮಗೆ ಸಹಾಯ ಮಾಡಿ ಎಂದು ಕಣ್ಣೀರಿಡುತ್ತ ಅಳಲು ತೋರಿಕೊಂಡಿರುವ ದೃಶ್ಯ ಮನಕಲಕುವಂತಿದೆ.