ಕಾವ್ಯಕ್ಕೆ ಬಹಳಷ್ಟು ಮಹತ್ವವಿದೆ, ಕಾವ್ಯಕ್ಕೆಜೀವನದ ಅನುಭವ ಬೇಕು: ಡಾ.ಶರತ್ ಚಂದ್ರ ಸ್ವಾಮೀಜಿ

| Published : May 27 2024, 01:06 AM IST

ಕಾವ್ಯಕ್ಕೆ ಬಹಳಷ್ಟು ಮಹತ್ವವಿದೆ, ಕಾವ್ಯಕ್ಕೆಜೀವನದ ಅನುಭವ ಬೇಕು: ಡಾ.ಶರತ್ ಚಂದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಲೇಖಕರಿಗೂ ಜೀವನ ಅನುಭವದ ಅರಿವು ಹಾಗೂ ಕವಿತ್ವ ಎರಡು ಮುಖ್ಯ. ಕಾವ್ಯದ ರೂಪದ ಪ್ರತಿಬೆ ಪುಷ್ಪವಾಗಿ ಅರಳಿದ್ದು, ಲೇಖಕ ದೇವಣ್ಣ ಹೊಸಕೋಟೆಯವರು ನಮಗೆ ಎರಡು ಕೃತಿಗಳ ಮದ್ದು ನೀಡಿದ್ದಾರೆ. ಅಲ್ಲಮ ಮಹಾನ್ತತ್ವಜ್ಞಾನಿ. ಅಲ್ಲಮ ಚರಿತಾಮೃತ ಕೃತಿಯಲ್ಲಿ ಅವರ ಬಗೆಗಿನ ಜೀವನ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಭಾಷಾ ಶೈಲಿ ಚೆನ್ನಾಗಿ ಮೂಡಿ ಬಂದಿದೆ. ನಡುಗನ್ನಡ ಸ್ವರೂಪದಲ್ಲಿ ಕಾವ್ಯವಿದ್ದು, ಪ್ರಸಂಗಗಳನ್ನು ಬಹಳ ಭಿನ್ನವಾಗಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಕಾವ್ಯಕ್ಕೆ ಬಹಳಷ್ಟು ಮಹತ್ವವಿದೆ. ದೇಹದ ಅರೋಗ್ಯಕ್ಕೆ ವೈದ್ಯಹೇಗೊ, ಮನಸ್ಸಿನ ಆರೋಗ್ಯಕ್ಕೆ ಕಾವ್ಯ ಹಾಗೇ. ಅನುಭವ ಉಸಿರಾಡಿ, ಉಸಿರು ಬಿಡುವುದು ಕಾವ್ಯ ಕವಿತ್ವ. ಹೀಗಾಗಿ, ಕಾವ್ಯಕ್ಕೆಜೀವನದ ಅನುಭವ ಬೇಕು ಎಂದು ಕುಂದೂರುಮಠದ ಶ್ರೀ ಡಾ. ಶರತ್ ಚಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಶನಿವಾರ ಸಂವಹನ ಪ್ರಕಾಶನ ಪ್ರಕಟಿಸಿರುವ ಪ್ರೊ.ದೇವಣ್ಣ ಹೊಸಕೋಟೆ ಅವರ ‘ಅಲ್ಲಮ ಚರಿತಾಮೃತ’ ಮತ್ತು ‘ಹರಿಶ್ಚಂದ್ರ ಕಥಾಮೃತ’ ಎಂಬ ಕೃತಿಗಳಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ಲೇಖಕರಿಗೂ ಜೀವನ ಅನುಭವದ ಅರಿವು ಹಾಗೂ ಕವಿತ್ವ ಎರಡು ಮುಖ್ಯ. ಕಾವ್ಯದ ರೂಪದ ಪ್ರತಿಬೆ ಪುಷ್ಪವಾಗಿ ಅರಳಿದ್ದು, ಲೇಖಕ ದೇವಣ್ಣ ಹೊಸಕೋಟೆಯವರು ನಮಗೆ ಎರಡು ಕೃತಿಗಳ ಮದ್ದು ನೀಡಿದ್ದಾರೆ. ಅಲ್ಲಮ ಮಹಾನ್ತತ್ವಜ್ಞಾನಿ. ಅಲ್ಲಮ ಚರಿತಾಮೃತ ಕೃತಿಯಲ್ಲಿ ಅವರ ಬಗೆಗಿನ ಜೀವನ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಭಾಷಾ ಶೈಲಿ ಚೆನ್ನಾಗಿ ಮೂಡಿ ಬಂದಿದೆ. ನಡುಗನ್ನಡ ಸ್ವರೂಪದಲ್ಲಿ ಕಾವ್ಯವಿದ್ದು, ಪ್ರಸಂಗಗಳನ್ನು ಬಹಳ ಭಿನ್ನವಾಗಿ ಹೇಳಿದ್ದಾರೆ ಎಂದು ಅವರು ಪ್ರಶಂಸಿದರು.

ಸರಳವಾಗಿ ಕೃತಿ ರಚನೆ:

ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಹರಿಶ್ಚಂದ್ರನ ಕುರಿತು ಈಗಾಗಲೇ ಅನೇಕ ಕೃತಿಗಳು ರಚಿತವಾಗಿವೆ. ಅದರಂತೆ ಹರಿಶ್ಚಂದ್ರ ಕಥಾಮೃತ ಮರು ವ್ಯಾಖ್ಯಾನಸೃಷ್ಟಿಯಲ್ಲ. ಇನ್ನೊಂದು ಬಗೆಯಲ್ಲಿ ಕಾವ್ಯವನ್ನು ರಗಳೆಯಲ್ಲಿ ಹೇಳುವ ಪ್ರಯತ್ನ ಇದಾಗಿದೆ. ವ್ಯವಹಾರಿಕವಾಗಿ ಯೋಚನೆ ಮಾಡದೆ, ತಮ್ಮ ನಿಲುವಿನ ರೀತಿಯಲ್ಲಿ ಲೇಖಕರು ಸರಳವಾಗಿ ರಚಿಸಿದ್ದಾರೆ ಎಂದರು.

ಕೃತಿ ಆರಂಭದಲ್ಲಿ ರಗಳೆಯನ್ನು ಹದವಾಗಿ ಅದ್ಭುತವಾಗಿ ಬರೆಯುತ್ತಾ ಕೊನೆಯಲ್ಲಿ ಲಯ ಕಂಡುಕೊಂಡಿದ್ದಾರೆ. ಸಹಜ ಸಂಭಾಷಣೆ ಎನ್ನುವಂತೆ ಕಾಣುತ್ತದೆ. ಅನೇಕ ಪ್ರಸಂಗ ಇದ್ದು, ಸುಂದರ ಕಾವ್ಯವಾಗಿ ಮೂಡಿ ಬಂದಿದೆ. ಒಳ್ಳೆಯದು, ಕೆಟ್ಟದು ಎರಡಕ್ಕೂ ಗ್ರಾಮ್ಯ ಒಗ್ಗೂಡಿದೆ. ಅಂತಹ ವ್ಯಕ್ತಿ ಲೇಖಕ ದೇವಣ್ಣ ಹೊಸಕೋಟೆ. ಈ ಕಾರಣದಿಂದಲೇ ಅವರು ಇಷ್ಟವಾಗುತ್ತಾರೆ. ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ಪ್ರವಚನ ಕೇಳಿದರೆ, ಅವರ ಶಕ್ತಿ ಹಾಗೂ ಕಾವ್ಯದ ಬಗೆಗಿನಗಾಢ ತಿಳಿಯುತ್ತದೆ ಎಂದು ಅವರು ಶ್ಲಾಘಿಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಪದ್ಮಾ ಶೇಖರ್, ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ, ಲೇಖಕ ಪ್ರೊ. ದೇವಣ್ಣ ಹೊಸಕೋಟೆ ಇದ್ದರು.ವಚನಕಾರರು ಮತ್ತು ಶರಣರ ವಚನಗಳಿಂದ ಕನ್ನಡ ಸಾಹಿತ್ಯ ಮತ್ತು ಭಾಷೆ ವಿಸ್ತರಿಸಿದೆ. ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯ ಬೇರೆ ಅಲ್ಲ ಅನ್ನುವಷ್ಟರ ಮಟ್ಟಿಗೆ ಜನಮುಖಿಯಾಗಿವೆ. ಜನಪದ ಸಾಹಿತ್ಯ ಜೀವನ ಮೌಲ್ಯವನ್ನು ತಿಳಿಸಿದರೆ, ವಚನ ಸಾಹಿತ್ಯ ಜೀವನ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಕಟ್ಟಿಕೊಟ್ಟಿವೆ.

- ಪ್ರೊ. ಪದ್ಮಾಶೇಖರ್, ವಿಶ್ರಾಂತ ಕುಲಪತಿಪ್ರೊ.ದೇವಣ್ಣ ಹೊಸಕೋಟೆ ಅವರ ಎರಡು ಕೃತಿಗಳು ವಿಷಯವಸ್ತು, ನಿರೂಪಣಾ ಶೈಲಿ, ಭಾಷಾ ಬಳಕೆ ಮತ್ತು ರಚನೆಯ ದೃಷ್ಟಿಯಿಂದ ಅತ್ಯಂತ ಸುಂದರವಾಗಿ ಮೂಡಿಬಂದಿದ್ದು ಸರಳವಾಗಿ ಓದಿಸಿಕೊಳ್ಳುತ್ತದೆ. ಹಳೆಗನ್ನಡದ ತಾಪತ್ರಯವಿಲ್ಲದೆ ಹೊಸ ಕನ್ನಡದಲ್ಲಿ ರಚನೆಯಾಗಿರುವುದು ಕೃತಿಗಳ ವಿಶೇಷತೆಯಾಗಿದೆ. ಸಾಹಿತ್ಯ ಕೃತಿಗಳ ಓದು ಮನುಷ್ಯನಿಗೆ ನೆಮ್ಮದಿ ಮತ್ತು ಸಾಂತ್ವನ ನೀಡುತ್ತದೆ. ಆದರೆ, ಇತ್ತೀಚಿನ ವರ್ಷಗಳಿಂದ ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

- ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠರಾಮಾಯಣ, ಮಹಾಭಾರತ, ಸತ್ಯ ಹರಿಶ್ಚಂದ್ರನ ಕಥೆ ಸೇರಿದಂತೆ ಎಲ್ಲಾ ಪ್ರಾಚೀನ ಕಾವ್ಯಗಳ ಬಗ್ಗೆ ಮತ್ತು ಅಲ್ಲಿನ ಕೆಲವು ಘಟನೆಗಳ ಬಗ್ಗೆ ಸಾಕಷ್ಟು ಚರ್ಚೆ, ವಾದ- ವಿವಾದಗಳು ನಡೆಯುತ್ತಲೇ ಇವೆ. ಆ ಎಲ್ಲಾ ವಿಮರ್ಶೆ ಮತ್ತು ವಾದಗಳು ಅತ್ಯಂತ ಸೂಕ್ತವೂ, ವಸ್ತುನಿಷ್ಠವೂ ಆಗಿವೆ. ಆ ಚರ್ಚೆಗಳ ಕಾರಣಕ್ಕಾಗಿಯೇ ಪ್ರಾಚೀನ ಕಾವ್ಯಗಳು ನಮ್ಮ ನಡುವೆ ಉಳಿದುಕೊಂಡಿದೆ.

- ಪ್ರೊ.ಎಂ. ಕೃಷ್ಣೇಗೌಡ, ವಾಗ್ಮಿ