ಸಾರಾಂಶ
ದಸರಾ ಕೇಸರಿ ಪ್ರಶಸ್ತಿಗೆ ನಡೆದ ಪಂದ್ಯಾವಳಿಯಲ್ಲಿ ಮುದೋಳಿನ ಸದಾಶಿವ ನಲವಡೆ ಜಯಗಳಿಸಿದರು
ಕನ್ನಡಪ್ರಭ ವಾರ್ತೆ ಮೈಸೂರು
ನಾಡಹಬ್ಬ ದಸರಾ ಅಂಗವಾಗಿ ನಡೆದ ಪಾಯಿಂಟ್ ಕುಸ್ತಿಯಲ್ಲಿ ದಸರಾ ಕಿಶೋರಿ ಪ್ರಶಸ್ತಿಯನ್ನು ದಾವಣಗೆರೆ ಕ್ರೀಡಾ ನಿಲಯದ ಎಸ್. ಶಾಲಿನಿ ಮುಡಿಗೇರಿಸಿಕೊಂಡರು. ಗಾಯತ್ರಿ ಅವರ ವಿರುದ್ಧ ನಡೆದ ಕುಸ್ತಿಯಲ್ಲಿ ಶಾನಿಲಿ ಅವರು 10 ಅಂಕಪಡೆಯುವ ಮೂಲಕ ಈ ಪ್ರಶಸ್ತಿಗೆ ಭಾಜನರಾದರು.ನಗರದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಬುಧವಾರ ದಸರಾ ಕಿಶೋರ ಪ್ರಶಸ್ತಿಗೆ ನಡೆದ ಪಂದ್ಯದಲ್ಲಿ ದಾವಣಗೆರೆಯ ಕುರುವರ ಸಂಜೀವ ಪಡೆದುಕೊಂಡರು. ಅದೇ ಊರಿನ ಮಹೇಶ್ಪಿ.ಗೌಡ ವಿರುದ್ಧ ಸೆಣಸಾಡಿದ ಸಂಜೀವ ಅವರು ಒಟ್ಟು 6 ಪಾಯಿಂಟ್ ಪಡೆದು ದಸರಾ ಕಿಶೋರ ಪ್ರಶಸ್ತಿಗೆ ಪಾತ್ರರಾದರು.ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಬನ್ನೂರಿನ ನಂದಿನಿ ಆಯ್ಕೆಯಾದರು.ಮೈಸೂರು ವಿಭಾಗದ ದಸರಾ ಕುಮಾರ ಪ್ರಶಸ್ತಿಗೆ ನಡೆದ ಪಂದ್ಯಾವಳಿಯಲ್ಲಿ ಮಂಡ್ಯದ ಗಿರೀಶ್ ಮತ್ತು ಮೈಸೂರಿನ ಆರ್. ನಿತಿನ್ ನಡುವಿನ ಪಂದ್ಯದಲ್ಲಿ ಗಿರೀಶ್ಅವರು ಒಟ್ಟು 25 ಅಂಕ ತಮ್ಮದಾಗಿಸಿಕೊಂಡರು.ದಸರಾ ಕೇಸರಿ ಪ್ರಶಸ್ತಿಗೆ ನಡೆದ ಪಂದ್ಯಾವಳಿಯಲ್ಲಿ ಮುದೋಳಿನ ಸದಾಶಿವ ನಲವಡೆ ಜಯಗಳಿಸಿದರು. ದಾವಣಗೆರೆಯ ಬಸವರಾಜ ಪಾಟೀಲ್ ಮತ್ತು ಸದಾಶಿವನ ನಲವಡೆ ಅವರ ನಡುವಿನ ಸೆಣಸಾಟದಲ್ಲಿ ನಲವಡೆ 15 ಅಂಕ ತಮ್ಮದಾಗಿಸಿಕೊಂಡರು.ದಸರಾ ಕಂಠೀರವ ಪ್ರಶಸ್ತಿಗೆ ನಡೆದ ಪಂದ್ಯಾವಳಿಯಲ್ಲಿ ಮುಧೋಳದ ಬಾಪು ರಾಮ್ ಸಿಂಧೆ ಮತ್ತು ಬಾಗಲಕೋಟೆಯ ಶಿವಯ್ಯ ಪೂಜಾರಿ ಮುಖಾಮುಖಿ ಆದರು. ಇಬ್ಬರೂ ಪ್ರಬಲ ಪೈಪೋಟಿ ನೀಡಿದರಾದರೂ ಶಿವಯ್ಯ ಪೂಜಾರಿ ಅವರು 6 ಅಂಕಗಳಿಸುವ ಮೂಲಕ ದಸರಾ ಕಂಠೀರವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಸಾಹುಕಾರ್ಚೆನ್ನಯ್ಯ ಕಪ್ಅನ್ನು ನಂಜನಗೂಡಿನ ಪೈ. ಸೂರ್ಯಕಾಂತ, ಮೈಸೂರು ಮಹಾರಾಜ ಒಡೆಯರ್ ಕಪ್ಅನ್ನು ಬೈರಪ್ಪ ನಾಯಕ, ಮೈಸೂರು ಮೇಯರ್ಕಪ್ಅನ್ನು ಬೋಗಾದಿಯ ಮನು, ಸಿದ್ದರಾಮಯ್ಯ ಪ್ರಶಸ್ತಿಯನ್ನು ಪಡುವಾರಹಳ್ಳಿಯ ಚಂದ್ರು ಮತ್ತು ಯತೀಂದ್ರ ಸಿದ್ದರಾಮಯ್ಯ ಪ್ರಶಸ್ತಿಯನ್ನು ಮಹೇಶ್ ಪಡೆದುಕೊಂಡರು.