ಸಾರಾಂಶ
ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ನಮ್ಮ ಸಿಬ್ಬಂದಿ ದೀಪಾವಳಿ ಮರೆತು ಹಗಲು, ರಾತ್ರಿ ಕಾರ್ಯಾಚರಣೆ ನಡೆಸಿ, ಹೆಡೆಮುರಿ ಕಟ್ಟಿದ್ದು, ಬಹುತೇಕ ಆರೋಪಿಗಳು ಜೈಲು ಸೇರಿದ್ದಾರೆ ಎಂದು ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಹೇಳಿದ್ದಾರೆ.
ಕೊಪ್ಪಳ: ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ನಮ್ಮ ಸಿಬ್ಬಂದಿ ದೀಪಾವಳಿ ಮರೆತು ಹಗಲು, ರಾತ್ರಿ ಕಾರ್ಯಾಚರಣೆ ನಡೆಸಿ, ಹೆಡೆಮುರಿ ಕಟ್ಟಿದ್ದು, ಬಹುತೇಕ ಆರೋಪಿಗಳು ಜೈಲು ಸೇರಿದ್ದಾರೆ ಎಂದು ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ಪ್ರಮುಖ ಆರೋಪಿ ರವಿ ಮತ್ತು ಗಂಗಾಧರ ಅವರನ್ನು ಬಂಧಿಸುವ ಮೂಲಕ ಒಟ್ಟು ಹತ್ತು ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿದೆ. ಕೊಲೆ ಪ್ರಕರಣವನ್ನು ಭೇದಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು.ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಇದಕ್ಕೂ ಮುನ್ನ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿಗಳಾದ ರವಿ (ತಂದೆ ಬಸವರಾಜ) ಮತ್ತು ಗಂಗಾಧರ ಗೌಳಿ (ತಂದೆ ಬಾಬುರಾವ್ ಶಹಪೂರಕರ್)ಯನ್ನು ಅ. 26ರಂದು ಬಳ್ಳಾರಿಯ ಅನಂತಪುರ ರಸ್ತೆ ಹೊರವಲಯದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಪ್ರಕರಣ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತ್ ಕುಮಾರ್ ಆರ್., ಡಿಎಸ್‌ಪಿ ಜಯಪ್ಪ ನ್ಯಾಮಗೌಡ್ರ ಅವರ ಮಾರ್ಗದರ್ಶನದಲ್ಲಿ, ಗಂಗಾವತಿ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ ಮಾಳಿ ಅವರ ನೇತೃತ್ವದಲ್ಲಿ ವಿಶೇಷ ಪತ್ತೆ ತಂಡ ಕಾರ್ಯಾಚರಣೆ ನಡೆಸಿದೆ.ಈ ತಂಡದಲ್ಲಿ ಡಿಎಸ್‌ಪಿ ಅಂಜನೇಯ, ಪಿಎಸ್‌ಐ ಹನುಮಂತಪ್ಪ ತಳವಾರ, ಪಿಎಸ್‌ಐ ಧನುಂಜಯ ಹಿರೇಮಠ, ಎಎಸ್‌ಐ ಚಂದಪ್ಪ ನಾಯಕ್ ಹಾಗೂ ಸಿಬ್ಬಂದಿ, ತಾಂತ್ರಿಕ ವಿಭಾಗದ ಸದಸ್ಯರು ಭಾಗಿಯಾಗಿದ್ದರು.
ಸೂಕ್ಷ್ಮ ಸ್ವರೂಪದ ಕೊಲೆ ಪ್ರಕರಣ ಬಯಲು ಮಾಡಿದ ತಂಡದ ಶ್ರೇಷ್ಠ ಕಾರ್ಯವನ್ನು ಮೆಚ್ಚಿ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ್ ಎಲ್. ಅರಸಿದ್ದಿ, ಐಪಿಎಸ್ ತಂಡಕ್ಕೆ ಪ್ರಶಂಸೆ ಮತ್ತು ಬಹುಮಾನ ಘೋಷಿಸಿದ್ದಾರೆ.;Resize=(128,128))
;Resize=(128,128))
;Resize=(128,128))