ಜೂ.6ರಂದು ನಂಜನಗೂಡಿನ ಕಸುವಿನಹಳ್ಳಿಯಿಂದ ಗುಂಡ್ಲುಪೇಟೆ ಠಾಣೆಗೆ ಕರ್ತವ್ಯಕ್ಕೆ ಬರುತ್ತಿದ್ದಾಗ ಬೈಕ್‌ಗೆ ನಾಯಿ ಅಡ್ಡ ಬಂದ ಪರಿಣಾಮ ಆಯತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪೊಲೀಸ್‌ ಪೇದೆ ಗಣೇಶ್‌ (33) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆಳೆದಿದ್ದಾರೆ.

ಜೂ.6ರಂದು ಸಸ್ತಪುರ ಕಾಲೋನಿ ಬಳಿ ನಡೆದಿದ್ದ ದುರ್ಘಟನೆ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜೂ.6ರಂದು ನಂಜನಗೂಡಿನ ಕಸುವಿನಹಳ್ಳಿಯಿಂದ ಗುಂಡ್ಲುಪೇಟೆ ಠಾಣೆಗೆ ಕರ್ತವ್ಯಕ್ಕೆ ಬರುತ್ತಿದ್ದಾಗ ಬೈಕ್‌ಗೆ ನಾಯಿ ಅಡ್ಡ ಬಂದ ಪರಿಣಾಮ ಆಯತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪೊಲೀಸ್‌ ಪೇದೆ ಗಣೇಶ್‌ (33) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆಳೆದಿದ್ದಾರೆ.

ಗಣೇಶ್‌ ಅವರು ಜೂ.6ರ ಶನಿವಾರದಂದು ಗುಂಡ್ಲುಪೇಟೆ ತಾಲೂಕಿನ ಸಸ್ತಪುರ ಕಾಲೋನಿ ಬಳಿ ಬರುವಾಗ ನಾಯಿ ಅಡ್ಡಬಂದು ಆಯತಪ್ಪಿ ಬಿದ್ದಿದ್ದು, ಗಂಭೀರ ಹಂತಕ್ಕೆ ತಲುಪಿದ್ದರು. ಅದಕ್ಕಾಗಿ ಮೈಸೂರಿನ ಜೆಎಸ್ಎಸ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ 6 ದಿನಗಳ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಮೃತರು ಒಂದು ವರ್ಷದ ಹಿಂದೆ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದರು.

ಸಂತಾಪ:

ಗಣೇಶ್‌ ಅವರ ಅಕಾಲಿಕ ನಿಧನಕ್ಕೆ ಗುಂಡ್ಲುಪೇಟೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.