ಸಾರಾಂಶ
ಠಾಣೆಗಳ ಎಲ್ಲಾ ಪೊಲೀಸ್ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಪೊಲೀಸರು ದೇವರಿಗೆ ನಮಿಸಿ, ಸಿಹಿ ಹಂಚಿದರು.
ಚಾಮರಾಜನಗರ:
ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಪೊಲೀಸರು ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚಿದರು.ಭಾರತದಲ್ಲಿ ಪ್ರಮುಖ ಆಚರಣೆಯಾದ ಆಯುಧ ಪೂಜೆಯನ್ನು ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಠಾಣೆಗಳಲ್ಲಿ ಪೊಲೀಸರು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಠಾಣೆಗಳ ಎಲ್ಲಾ ಪೊಲೀಸ್ ವಾಹನಗಳು ಹಾಗೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಪೊಲೀಸರು ದೇವರಿಗೆ ನಮಿಸಿ, ಸಿಹಿ ಹಂಚಿದರು.ವರ್ಷಪೂರ್ತಿ ಖಾಕಿ ಧರಿಸಿ ಖದರ್ ತೋರುತ್ತಿದ್ದ ಪೊಲೀಸರು ಆಯಧ ಪೂಜೆ ಪ್ರಯುಕ್ತ ಸಾಂಪ್ರದಾಯಿಕ ದಿರಿಸಾದ ಪಂಚೆ, ಶರ್ಟ್, ಶಲ್ಯ ಹೊದ್ದು ಮಹಿಳಾ ಸಿಬ್ಬಂದಿ ಸೀರೆ ಉಟ್ಟು ಜಿಲ್ಲೆಯ ಗುಂಡ್ಲುಪೇಟೆ, ಕುದೇರು, ಹನೂರು, ತೆರಕಣಾಂಬಿ ಠಾಣೆ ಪೊಲೀಸರು ಸಂಭ್ರಮಿಸಿದರು.
ಆಯುಧ ಪೂಜೆ ಹಿನ್ನೆಲೆ ಗುಂಡ್ಲುಪೇಟೆ ಠಾಣೆಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದು ಗಮನ ಸೆಳೆಯಿತು.