ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೊಡಗರಹಳ್ಳಿ ಗ್ರಾಮದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೊಡಗರಹಳ್ಳಿ ಗ್ರಾಮದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಿತು.ಕೊಡಗರಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯವರಾದ ಸಾವಿತ್ರಿ ಪ್ರಾರ್ಥನೆ ಮಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಕಲಾಮಣಿನಾರಾಯಣ ಉದ್ಘಾಟಿಸಿದರು.
0-5 ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆಯನ್ನು ಗ್ರಾಮದ ಎಲ್ಲಾ ಮಕ್ಕಳ ಪೋಷಕರ ಗಮನಕ್ಕೆ ತಂದು ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ನೀತಾ ಹರೀಶ, ಚನ್ನಬಸವಿ, ಗ್ರಾಮದ ಸಿಹೆಚ್ಒ ಟೆಸ್ಮಿ ಥಾಮಸ್, ಆಶಾ ಕಾರ್ಯಕರ್ತರಾದ ಕವಿತಾ ಮತ್ತು ಜಸ್ಮಿತ, ಅಂಗನವಾಡಿ ಸಹಾಯಕಿಯಾದ ಸಂಧ್ಯಾ ಹಾಗೂ ಗ್ರಾಮಸ್ಥರು ಮಕ್ಕಳು ಉಪಸ್ಥಿತರಿದ್ದರು.