ಮಾಲಿನ್ಯಕ್ಕೆ ಮಾನವನ ಸ್ವಯಂಕೃತ ಅಪರಾಧ ಕಾರಣ

| Published : Jun 06 2024, 12:32 AM IST

ಸಾರಾಂಶ

ದೇಶದ ರಾಜಧಾನಿ ದೆಹಲಿಯಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ 52.9 ಡಿಗ್ರಿ ಸೆಲ್ಸಿಯಸ್ ಎಂಬುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿದೆ. ಇಂದು ದೆಹಲಿ, ನಾಳೆ ಇತರೆ ನಗರಗಳು ಎಂಬ ಎಚ್ಚರ ನಮ್ಮಲ್ಲಿರಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಾತಾವರಣದಲ್ಲಿ ಉಷ್ಣಾಂಶ ಮಿತಿಮೀರಿ ಏರಿಕೆಯಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ, ಜಲಮೂಲಗಳ ಕಲುಷಿತಗೊಳ್ಳುತ್ತಿವೆ. ಇದು ಮಾನವನ ಸ್ವಯಂಕೃತ ಅಪರಾಧ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕಬಳ್ಳಾಪುರ ಪ್ರಾದೇಶಿಕ ಕಚೇರಿ, ನಗರಸಭೆ, ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಕುರಿತು ಅರಿವು ಮೂಡಿಸಿ

ಇತ್ತೀಚಿಗೆ ದೇಶದ ರಾಜಧಾನಿ ದೆಹಲಿಯಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ 52.9 ಡಿಗ್ರಿ ಸೆಲ್ಸಿಯಸ್ ಎಂಬುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿದೆ. ಇಂದು ದೆಹಲಿ, ನಾಳೆ ಇತರೆ ನಗರಗಳು ಎಂಬ ಎಚ್ಚರ ನಮ್ಮಲ್ಲಿದ್ದು ಪರಿಸರ ಸಂರಕ್ಷಣೆಯ ಜಾಗೃತಿ ಮೂಡದಿದ್ದರೆ ಭವಿಷ್ಯದ ದಿನಗಳು ಭೂಮಿ ಮೇಲಿನ‌ ಜೀವಿಗಳಿಗೆ ಕರಾಳವಾಗಲಿವೆ. ಆ ಅಪಾಯಕಾರಿ ದಿನಗಳೂ ತುಂಬಾ ದೂರವೇನಿಲ್ಲ ಎಂದರು.ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಪ್ರತಿಯೊಬ್ಬರಿಗೂ ಹಸಿರೇ ಉಸಿರಾಗಬೇಕು. ಪರಿಸರ ಎಂಬುದು ಅತ್ಯಮೂಲ್ಯವಾದ್ದದು ಅದರ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲಿ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ಜೀವಿತಾವಧಿಯಲ್ಲಿ ಜೀವಿಸಲು ಸರಾಸರಿ 422 ಮರಗಳು ಬೇಕು. ನಮ್ಮ ಜೀವ ಕಾಪಾಡಿಕೊಳ್ಳಲು ಪರಿಸರವನ್ನು ಕಾಪಾಡಬೇಕು ಎಂದು ತಿಳಿಸಿದರುಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಬಿ ಶಿವಪ್ರಸಾದ್ , ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಎಚ್.ಕೆ ಉಮೇಶ್, ನ್ಯಾಯಾಧೀಶರಾದ ಶೃತಿ,ಭಾರತಿಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್,ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್.ರಮೇಶ್,ಪರಿಸರ ಅಧಿಕಾರಿ ಟಿ.ಎಂ ಸಿದ್ದೇಶ್ವರ ಬಾಬು, ಮತ್ತಿತರರು ಇದ್ದರು.