ನಾಪೋಕ್ಲು ಪೊನ್ನಾಡ್ ರೈತ ಉತ್ಪಾದಕ ಕಂಪನಿ ವಾರ್ಷಿಕ ಸಭೆ

| Published : Sep 18 2024, 01:50 AM IST

ಸಾರಾಂಶ

ಪೊನ್ನಾಡ್ ರೈತ ಉತ್ಪಾದಕ ಕಂಪನಿ ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದು ಸದಸ್ಯರ ಸಹಕಾರದಿಂದ ಅಭಿವೃದ್ಧಿ ಹೊಂದಿದೆ ಎಂದು ಪೊನ್ನಾಡ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಎ.ಕೆ ಮನು ಮುತ್ತಪ್ಪ ಹೇಳಿದ್ದಾರೆ. ಇಲ್ಲಿನ ಕೊಡವ ಸಮಾಜದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಂಪನಿಯ ನಾಲ್ಕನೇ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪೊನ್ನಾಡ್ ರೈತ ಉತ್ಪಾದಕ ಕಂಪನಿ ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದು ಸದಸ್ಯರ ಸಹಕಾರದಿಂದ ಅಭಿವೃದ್ಧಿ ಹೊಂದಿದೆ ಎಂದು ಪೊನ್ನಾಡ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಎ.ಕೆ ಮನು ಮುತ್ತಪ್ಪ ಹೇಳಿದ್ದಾರೆ.

ಇಲ್ಲಿನ ಕೊಡವ ಸಮಾಜದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಂಪನಿಯ ನಾಲ್ಕನೇ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೆ ಅಗತ್ಯವಿರುವ ಕೃಷಿಗೆ ಪೂರಕ ಎಲ್ಲಾ ಸಲಕರಣೆಗಳನ್ನು ರೈತರಿಗೆ ಅವಶ್ಯಕ ವಸ್ತುಗಳನ್ನು ವಿತರಿಸಲಾಗುತ್ತಿದೆ. ಕಂಪನಿ ವಹಿವಾಟಿನ ಶೇರು ಬೆಲೆ 96 ರು.ಗಳಾಗಿದ್ದು, ಕಳೆದ ವರ್ಷ ನೂರು ರು.ಗೇರಿದ್ದ ಶೇರು ಬೆಲೆ ಇಂದು 134 ರು. ಆಗಿದೆ. ರೈತರಿಗೆ ಕಾಫಿ ಖರೀದಿಯಲ್ಲಿ ಯೋಗ್ಯ ಬೆಲೆ ನೀಡಲಾಗುತ್ತಿದೆ ತೇವಾಂಶ ಹಾಗೂ ಔಟರ್ನ್ ಪರೀಕ್ಷೆಯನ್ನು ಸರಿಯಾಗಿ ನಿರ್ವಹಿಸಿ ಕಾಫಿಯನ್ನು ನೇರವಾಗಿ ಕಂಪೆನಿಗಳಿಗೆ ಕೊಟ್ಟು ದೊರೆತ ಲಾಭವನ್ನು ರೈತರಿಗೆ ನೀಡಲಾಗುತ್ತಿದೆ ಎಂದರು.

ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಕುರಿತು ಮಡಿಕೇರಿ ಕಾಫಿ ಮಂಡಳಿಯ ವಿಸ್ತರಣಾ ಕಚೇರಿಯ ಉಪನಿರ್ದೇಶಕ ಚಂದ್ರಶೇಖರ್, ಕೃಷಿ ರಸಾಯನ ಶಾಸ್ತ್ರಜ್ಞ ಡಾಕ್ಟರ್ ನಡಫ್ ಇವರಿಂದ ತಾಂತ್ರಿಕ ಕಾರ್ಯಾಗಾರ ನಡೆಯಿತು. ಮಡಿಕೇರಿ ಕಾಫಿ ಮಂಡಳಿ ವಿಸ್ತರಣಾ ಕಚೇರಿ ಉಪನಿರ್ದೇಶಕ ಚಂದ್ರಶೇಖರ್, ಕೃಷಿ ರಸಾಯನಶಾಸ್ತ್ರಜ್ಞ ಡಾ. ನಡಫ್ ರಾಜ್ಯ ಸಮನ್ವಯ ಅಧಿಕಾರಿ ರಾಮಪ್ರಿಯ ,ಜಿಲ್ಲಾ ಸಮನ್ವಯಾಧಿಕಾರಿ ಪವಿತ್ರ. ನಬಾರ್ಡ್ ಡಿಡಿಎಂ ರಮೇಶ್ ಬಾಬು, ಈಶ ಔಟ್ರಿಚ್ ನ ಸುಸರ್ಪಿಣಿ ,ದೇವಬಾಹು ಸುವಿರಾಜ ಮತ್ತಿತರರು ಪಾಲ್ಗೊಂಡರು.

ನಿರ್ದೇಶಕ ಕುಲ್ಲೇಟಿರ ಅಜಿತ್ ನಾಣಯ್ಯ, ಮುಕ್ಕಾಟಿರ ವಿನಯ್, ಕೋಡಿರ

ಪ್ರಸನ್ನ, ಕಾಟುಮಣಿಯಂಡ ಉಮೇಶ್, ಕೇಟೋಳಿರ ರತ್ನಾ ಚರ್ಮಣ್ಣ, ಸಹನಿರ್ದೆಶಕ ಕಲ್ಯಾಟಂಡ ರಘು ತಮ್ಮಯ್ಯ, ಅಪ್ಪನೆರವಂಡ ರಾಜಾ ಪೂವಯ್ಯ, ಮಚ್ಚುರ ಯದುಕುಮಾರ್, ಕುಲ್ಲೇಟಿರ ಬನ್ಸಿ ಬೋಪಣ್ಣ ಮತ್ತಿತರರಿದ್ದರು.ಈಶ ಫೌಂಡೇಶನ್

ಸಂಯೋಜಕೀ ಪವಿತ್ರ ವಾರ್ಷಿಕ ವರದಿ ವಾಚಿಸಿದರು. ರತ್ನಾ ಚರ್ಮಣ್ಣ ವಂದಿಸಿದರು.