ಕಾರಣಿಕ ಕೇತ್ರವಾಗಿರುವ ಪರ್ಲಡ್ಕದ ಪಾಂಗಳಾಯಿ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆ, ನಾಗತಂಬಿಲ ಮತ್ತು ಗ್ರಾಮ ದೈವ ಹಾಗೂ ಪರಿವಾರ ದೈವಗಳ ಪಾಂಗಳಾಯಿ ನೇಮೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಕಾರಣಿಕ ಕೇತ್ರವಾಗಿರುವ ಪರ್ಲಡ್ಕದ ಪಾಂಗಳಾಯಿ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆ, ನಾಗತಂಬಿಲ ಮತ್ತು ಗ್ರಾಮ ದೈವ ಹಾಗೂ ಪರಿವಾರ ದೈವಗಳ ಪಾಂಗಳಾಯಿ ನೇಮೋತ್ಸವ ನಡೆಯಿತು.

ಶನಿವಾರ ಬೆಳಗ್ಗೆ ಗಣಹೋಮ, ಕಲಶ ಪೂಜೆ, ನಾಗತಂಬಿಲ, ಸಾಮೂಹಿಕ ಆಶ್ಲೇಷಾ ಬಲಿ, ಪಂಚಾಮೃತ ಅಭಿಷೇಕ, ದೈವಗಳಿಗೆ ಕಲಶ ತಂಬಿಲ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾ ಪೂಜೆ ಅನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ಗಂಟೆ ೫ರಿಂದ ದೈವಗಳ ಭಂಡಾರ ತೆಗೆದು ಅರಸು ಮುಂಡ್ಯತ್ತಾಯ, ಗುಳಿಗ, ಪಂಜುರ್ಲಿ-ಕಲ್ಲುರ್ಟಿ, ಪೊಟ್ಟನ್ ದೈವ, ನಾಗರಕ್ತೇಶ್ವರಿ ನೇಮ ನಡೆದವು.

ಅರಸು ಮುಂಡ್ಯತ್ತಾಯ ದೈವಸ್ಥಾನದ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ ಕಲ್ಲಿಮಾರ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಸರೋಜಿನಿ ಅಭಿಕಾರ್, ಮಾಜಿ ಅಧ್ಯಕ್ಷರಾದ ತಾರಾನಾಥ ರೈ, ಕೋಶಾಧಿಕಾರಿ ಜಯಶಂಕರ ರೈ, ಸದಸ್ಯರಾದ ಕರುಣಾಕರ ಆಲೆಟ್ಟಿ, ಪಿ.ಎಸ್. ರಾಜಗೋಪಾಲ ಶಗ್ರಿತ್ತಾಯ, ಪದಾಧಿಕಾರಿಗಳಾದ ಉಮಾಶಂಕರ್ ನಾಯಕ್ ಪಾಂಗಳಾಯಿ, ಸೂರಪ್ಪ ಗೌಡ, ಕರುಣಾಕರ ಆಲೆಟ್ಟಿ, ಸಂಪತ್ ಕುಮಾರ್‌ ಉಪಸ್ಥಿತರಿದ್ದರು.