ಕಂಪ್ಯೂಟರ್ ಆಪರೇಟರ್‌ಗಳು ತಮ್ಮ ವೃತ್ತಿಯನ್ನು ಗೌರವದಿಂದ ಕಾಣಬೇಕು.ಆಶಾ ಭಾವನೆಯಿಂದ ಕೆಲಸ ಮಾಡಬೇಕು.
ಯಲಬುರ್ಗಾ: ಗಣಕಯಂತ್ರ ನಿರ್ವಾಹಕರಿಗೆ ಧನಾತ್ಮಕ ಚಿಂತನೆ ಅವಶ್ಯ ಎಂದು ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಹೇಳಿದರು.
ಇಲ್ಲಿನ ತಾಪಂ ಕಚೇರಿ ಸಭಾಂಗಣದಲ್ಲಿ ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್‌ರವರ ೨೩೪ನೇ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಕ್ಲರ್ಕ್ ಕಂ. ಡಾಟಾ ಎಂಟ್ರಿ ಆಪರೇಟರ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಂಪ್ಯೂಟರ್ ಆಪರೇಟರ್‌ಗಳು ತಮ್ಮ ವೃತ್ತಿಯನ್ನು ಗೌರವದಿಂದ ಕಾಣಬೇಕು.ಆಶಾ ಭಾವನೆಯಿಂದ ಕೆಲಸ ಮಾಡಬೇಕು. ಸರ್ಕಾರದ ಮಟ್ಟದಲ್ಲಿ ಕ್ಲರ್ಕ್ ಮತ್ತು ಕಂಪ್ಯೂಟರ್ ಆಪರೇಟರ್‌ಗಳನ್ನು ಗುರುತಿಸಿ ಕ್ಲರ್ಕ್. ಕಂ ಡಾಟಾ ಎಂಟ್ರಿ ಆಪರೇಟರ್ ದಿನ ಆಚರಿಸುತ್ತಿರುವುದು ಶ್ಲಾಘನೀಯ. ಸರ್ಕಾರದ ಆಶಯದಂತೆ ಕೆಲಸ ಮಾಡಿ ತಮ್ಮ ಸೇವಾ ಭದ್ರತೆ ಹಾಗೂ ವೇತನ ಪಡೆಯಲು ಹೋರಾಡುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಗೆ ಸಹಕರಿಸಲಾಗುವುದು ಎಂದರು.
ತಾಪಂ ಸಹಾಯಕ ನಿರ್ದೇಶಕ ಫಕಿರಪ್ಪ ಕಟ್ಟಿಮನಿ ಮಾತನಾಡಿ, ಪಂಚಾಯತಿಗಳ ಅರ್ಧ ಕೆಲಸ ನಿಭಾಯಿಸುವ ಶಕ್ತಿ ಡಿಇಒಗಳು ಹೊಂದಿದ್ದಾರೆ. ಇವರ ಬೇಡಿಕೆ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರಲಾಗುವುದು ಎಂದರು.ಪಿಡಿಒಗಳ ಸಂಘದ ತಾಲೂಕಾಧ್ಯಕ್ಷ ವೀರಭದ್ರಗೌಡ ಮೂಲಿಮನಿ, ಲೆಕ್ಕಾಧಿಕಾರಿ ಹಜರತ್ ಅಲಿ, ವಿಷಯ ನಿರ್ವಾಹಕ ಬಸವರಾಜ ಹಳ್ಳಿ, ಪಿಡಿಒಗಳಾದ ರೇಣುಕಾ ಟಂಕದ, ಅಬ್ದುಲ್ ಗಫಾರ್, ಕಂಪ್ಯೂಟರ್ ಅಪರೇಟರ್ ಮುರಾರಿರಾವ್ ಮಾತನಾಡಿದರು.
ಈ ಸಂದರ್ಭ ಗ್ರಾಪಂ ಪಿಡಿಒಗಳು, ಡಿಇಒಗಳು ಹಾಗೂ ತಾಪಂ ಸಿಬ್ಬಂದಿ ಇದ್ದರು.