ಸಾರಾಂಶ
ಚನ್ನಗಿರಿ ತಾಲೂಕಿನ ಬಿ.ಆರ್.ಟಿ. ಕಾಲೋನಿ ಗ್ರಾಮದಲ್ಲಿ ಗಾಂಜಾ ಗಿಡವನ್ನು ಬೆಳೆಸುತ್ತಿದ್ದ ಸ್ಥಳಕ್ಕೆ ಮಂಗಳವಾರ ಚನ್ನಗಿರಿಯ ಅಬಕಾರಿ ನಿರೀಕ್ಷಕಿ ಬಿ.ಶ್ವೇತಾ ನೇತೃತ್ವದ ತಂಡ ದಾಳಿ ನಡೆಸಿ, ಗಿಡ ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ: ತಾಲೂಕಿನ ಬಿ.ಆರ್.ಟಿ. ಕಾಲೋನಿ ಗ್ರಾಮದಲ್ಲಿ ಗಾಂಜಾ ಗಿಡವನ್ನು ಬೆಳೆಸುತ್ತಿದ್ದ ಸ್ಥಳಕ್ಕೆ ಮಂಗಳವಾರ ಚನ್ನಗಿರಿಯ ಅಬಕಾರಿ ನಿರೀಕ್ಷಕಿ ಬಿ.ಶ್ವೇತಾ ನೇತೃತ್ವದ ತಂಡ ದಾಳಿ ನಡೆಸಿ, ಗಿಡ ವಶಪಡಿಸಿಕೊಂಡಿದ್ದಾರೆ. ಸರ್ವೇ ನಂಬರ್ 38ರಲ್ಲಿ ಗಾಂಜಾ ಗಿಡ ಬೆಳೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಕಳ್ಳಿ ಗಿಡಗಳ ಮಧ್ಯೆ ಬೆಳೆದಿದ್ದ 4.5 ಅಡಿ ಎತ್ತರದ, 280 ಗ್ರಾಂ ತೂಕದ, ಸುಮಾರು ₹10 ಸಾವಿರ ಬೆಲೆ ಬಾಳುವ ಗಾಂಜಾ ಗಿಡವನ್ನು ಪತ್ತೆಹಚ್ಚಲಾಯಿತು. ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಅಬಕಾರಿ ನಿರೀಕ್ಷಕಿ ಶ್ವೇತಾ ತಿಳಿಸಿದ್ದಾರೆ.
ಕಾರ್ಯಾಚರಣೆ ತಂಡದಲ್ಲಿ ಅಬಕಾರಿ ಸಿಬ್ಬಂದಿ, ಗ್ರಾಪಂ ಪಿಡಿಒ ಲತಾ ಭಾಗವಹಿಸಿದ್ದರು.- - - -1ಕೆಸಿಎನ್‌ಜಿ7):