ಕಟೀಲು ಶ್ರೀ ದುರ್ಗಾಪಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ 18 ರಿಂದ 65 ವರ್ಷ ಒಳಗಿನ ಕಲಾವಿದರಿಗೆ 10 ಲಕ್ಷ ರು. ಕವರೇಜ್ ಅಪಘಾತ ವಿಮೆ ಮಾಡಿಕೊಡಲಾಯಿತು.

ಮೂಲ್ಕಿ: ಕಟೀಲು ಶ್ರೀ ದುರ್ಗಾಪಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ 18 ರಿಂದ 65 ವರ್ಷ ಒಳಗಿನ ಕಲಾವಿದರಿಗೆ 10 ಲಕ್ಷ ರು. ಕವರೇಜ್ ಅಪಘಾತ ವಿಮೆ, 15 ಲಕ್ಷ ಕವರೇಜ್ ಆರೋಗ್ಯ ವಿಮೆ, 65 ರಿಂದ 70 ವರ್ಷ ಒಳಗಿನ ಕಲಾವಿದರಿಗೆ ಉಳಿತಾಯ ಖಾತೆ ಜೊತೆಗೆ 2 ಲಕ್ಷ ರು. ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ ಮಾಡಿ ಕೊಡಲಾಯಿತು.

ಕಟೀಲು ಮೇಳಗಳ ಕಲಾವಿದರು ಮತ್ತು ಕೆಲಸಗಾರರ ಶ್ರೇಯೋಭಿವೃದ್ಧಿ ಸಮಿತಿಯಿಂದ ಸತತ 4 ವರ್ಷಗಳಿಂದ ಈ ವಿಮೆಗಳನ್ನು ಉಚಿತವಾಗಿ ಮಾಡಿ ಕೊಡಲಾಗುತ್ತಿದೆ. ಕಟೀಲು ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸುಮಾ, ಕುಮಾರ್, ಮಾರುಕಟ್ಟೆ ಕಾರ್ಯನಿರ್ವಾಹಕ ಸುಭಾಷ್ ಪಿ ಸಾಲ್ಯಾನ್, ಅವಿನಾಶ್, ಗುರುರಾಜ್, ಶಕುಂತಳ, ಮಲ್ಲಿಕಾರ್ಜುನ, ಚರಣ್, ಮಾಧವ, ಸುರೇಖಾ, ದಯಾನಂದ ಶಿಂಧೆ ಸಹಕರಿಸಿದರು.