ಕುಶಾಲನಗರ ಉಪವಿಭಾಗದ ಕೂಡಿಗೆ ಶಾಖಾ ವ್ಯಾಪ್ತಿಯ 220/66/11 ಕೆವಿ ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಗಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ನ. 6 ರಂದು ಬೆಳಗ್ಗೆ 10 ರಿಂದ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಮಡಿಕೇರಿ : ಕುಶಾಲನಗರ ಉಪವಿಭಾಗದ ಕೂಡಿಗೆ ಶಾಖಾ ವ್ಯಾಪ್ತಿಯ 220/66/11 ಕೆವಿ ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಗಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ನ. 6 ರಂದು ಬೆಳಗ್ಗೆ 10 ರಿಂದ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಫ್12 ಭುವನಗಿರಿ-ಮಲ್ಲೇನಹಳ್ಳಿ, ಹುದುಗೂರು, ಭುವನಗಿರಿ, ಎಫ್6 ಕೂಡಿಗೆ-ಕೂಡಿಗೆ, ಸುಂದರನಗರ, ಎಫ್1 ಹೆಬ್ಬಾಲೆ-ಹೆಬ್ಬಾಲೆ, ಕಣಿವೆ, ಎಫ್2 ಕಾವೇರಿ-ಇಂಡಸ್ಟ್ರಿಯಲ್ ಏರಿಯಾ, ಎಫ್13 ಎಸ್ಎಲ್ಎನ್-ಎಸ್ಎಲ್ಎನ್, ಎಫ್11 ಹಾರಂಗಿ-ಹಾರಂಗಿ, ಚಿಕ್ಕತ್ತೂರು, ದೊಡ್ಡತ್ತೂರು, ಎಫ್8 ಸೋಮೇಶ್ವರ-ಗುಮ್ಮನಕೊಲ್ಲಿ, ಮುಳ್ಳುಸೋಗೆ, ಸಾಯಿ ಲೇಔಟ್, ಎಫ್9 ಬಲಮುರಿ-ರಥಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ಹಾಗೆಯೇ ಗೋಣಿಕೊಪ್ಪ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್5 ಕುಂದ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ನ. 6 ರಂದು ಬೆಳಗ್ಗೆ 9.30 ರಿಂದ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಹಳ್ಳಿಗಟ್ಟು, ಕುಂದ, ಈಚೂರು, ಕೊಳತೋಡು-ಬೈಗೋಡು, ಹಾತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.