ಇಂದು ಉಡುಪಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

| Published : Jun 18 2024, 12:51 AM IST

ಇಂದು ಉಡುಪಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ
Share this Article
  • FB
  • TW
  • Linkdin
  • Email

ಸಾರಾಂಶ

ಜೂನ್‌ 18ರಂದು ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಆದ್ದರಿಂದ ಉಡುಪಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಉಡುಪಿ: ನಿಟ್ಟೂರು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಅಂಬಲಪಾಡಿ, ಬನ್ನಂಜೆ, ಕೊಡವೂರು ಮತ್ತು ನಿಟ್ಟೂರು ಫೀಡರ್ಮಾರ್ಗದಲ್ಲಿ ಜೂನ್‌ 18ರಂದು ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಸ್ವಾಗತಗೋಪುರ, ಭುಜಂಗ ಪಾರ್ಕ್, ಅಜ್ಜರಕಾಡು, ಬನ್ನಂಜೆ, ಕಾಡಬೆಟ್ಟು, ವಿದ್ಯಾರಣ್ಯರಮಾರ್ಗ, ಬ್ರಹ್ಮಗಿರಿ, ತಾಲೂಕು ಪಂಚಾಯಿತಿ, ಸಿಟಿ ಬಸ್ಟ್ಯಾಂಡ್‌, ಸರ್ವೀಸ್‌ ಬಸ್ಟ್ಯಾಂಡ್‌, ಪುತ್ತೂರು ಪೋಸ್ಟ್‌ ಆಫೀಸ್, ಹನುಮಂತನಗರ, ಕೊಡವೂರು, ಕಾನಂಗಿ, ಮೂಡಬೆಟ್ಟು, ಸಾಲ್ಮರ, ಮಲ್ಪೆ ಮಧ್ವರಾಜ ರಸ್ತೆ, ಫಿಶ್‌ ಕ್ಯೂರಿಂಗ್‌ ಗಾರ್ಡ್, ಸಿಟಿಜನ್ಸ್‌ ಸರ್ಕಲ್, ಮಧ್ವನಗರ, ಹೆಬ್ಬಾರ್‌ ರಸ್ತೆ, ಆದಿ ಉಡುಪಿ ಮಾರ್ಕೆಟ್‌ ಹಿಂದೆ, ಕಂಗನಬೆಟ್ಟು, ಪುತ್ತೂರು, ಎಸ್.ಟಿ.ಪಿ, ಬಾಳಿಗಫಿಶ್ನೆಟ್, ಆಭರಣ ಕಾರ್‌ ಶೋರೂಂ, ನ್ಯೂ ಕಾಲನಿ ಕೊಡಂಕೂರು, ಕೊಡಂಕೂರು, ನಿಟ್ಟೂರು, ಅಡ್ಕದಕಟ್ಟೆ ಮತ್ತು ಸುತ್ತಮುತ್ತ ವಿದ್ಯುತ್‌ ವ್ಯತ್ಯವಾಗಲಿದೆ.* ಮಣಿಪಾಲ: ಮಣಿಪಾಲ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮೂಡುಬೆಳ್ಳೆ ಫೀಡರ್‌ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ಜೂನ್‌ 18ರಂದು ನಡೆಯಲಿದೆ. ಆದ್ದರಿಂದ ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು ಮತ್ತು ಸುತ್ತಮುತ್ತ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

* ಹೆಬ್ರಿ: ಹೆಬ್ರಿ ಉಪವಿದ್ಯುತ್‌ ಸ್ಥಾವರದಿಂದ ಹೊರಡುವ ಹೆಬ್ರಿ, ಮುದ್ರಾಡಿ, ಬೆಳೆಂಜೆ, ಕಳ್ತೂರು, ಚಾರ, ಶಿವಪುರ, ವಾಟರ್‌ ಸಪ್ಳೈ, ನಾಡ್ಪಾಲು ಫೀಡರ್‌ನಲ್ಲಿ ಜೂನ್‌ 18ರಂದು ನಿರ್ವಹಣಾ ಕಾಮಗಾರಿ ನಡೆಯಲಿದೆ.

ಅಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಹೆಬ್ರಿ, ಮುದ್ರಾಡಿ, ಮುನಿಯಾಲು, ಬಚ್ಚಪ್ಪು, ಕಬ್ಬಿನಾಲೆ, ಮಂಡಾಡಿಜೆಡ್ಡು, ಕಳ್ತೂರು, ಸಂತೆಕಟ್ಟೆ, ಕರ್ಜೆ, ಕುರ್ಪಾಡಿ, ಬೆಳೆಂಜೆ, ಮಡಾಮಕ್ಕಿ, ಕಾಸನಮಕ್ಕಿ, ಶಿವಪುರ, ಕಾನ್ಬೆಟ್ಟು, ಕನ್ಯಾನ, ಚಾರ, ಹೊಸೂರು, ಹುತ್ತುರ್ಕೆ ವಾಟರ್‌ ಸಪ್ಲೈ, ಕಲ್ಲಿಲ್ಲು ವಾಟರ್‌ ಸಪ್ಲೈ, ಸೀತಾನದಿ, ಸೋಮೇಶ್ವರ, ನಾಡ್ಪಲು ಮತ್ತು ಸುತ್ತಮುತ್ತ ವಿದ್ಯುತ್‌ ವ್ಯತ್ಯವಾಗಲಿದೆ.ಕುಂದಾಪುರ: ಕುಂದಾಪುರ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಅಂಪಾರು, ಬಳ್ಕೂರು ಮತ್ತು ಜಪ್ತಿ ವಾಟರ್‌ಸಫ್ಲೈ ಮಾರ್ಗಗಳಲ್ಲಿ ಟ್ರೀ ಟ್ರಿಮ್ಮಿಂಗ್‌ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿ ಜೂನ್‌ 18ರಂದು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಕುಂದಾಪುರ ಪುರಸಭೆ ಕುಡಿಯುವ ನೀರಿನ ಸ್ಥಾವರ, ಅಂಪಾರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಬಳ್ಕೂರು, ಕೋಣಿ, ಕಂದಾವರ, ಬಸ್ರೂರು ಮತ್ತು ಆನಗಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.ಕಾಪು: ಬೆಳಪು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮಲ್ಲಾರು ಫೀಡರ್‌ ಮಾರ್ಗದಲ್ಲಿ ಹೊಸದಾಗಿ ಲಿಂಕ್‌ ಲೈನ್‌ ಕಾಮಗಾರಿ ಜೂನ್‌ 19ರಂದು ನಡೆಯಲಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ಮಲ್ಲಾರು, ಪಕೀರ್ಣಕಟ್ಟೆ, ಬೆಳಪು, ಮಜೂರು ಮತ್ತು ಸುತ್ತಮುತ್ತ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.