ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ

| Published : Oct 24 2024, 12:32 AM IST

ಸಾರಾಂಶ

ಅಸ್ಪೃಶ್ಯತೆ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿದೆ ಆಲೂರು ತಹಸೀಲ್ದಾರ್ ಸಿ.ಪಿ ನಂದಕುಮಾರ್ ತಿಳಿಸಿದರು. ನಮ್ಮ ದೇಶವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಸಮಾಜದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳು ಅನಾದಿಕಾಲದಿಂದಲೂ ಬೇರೂರಿವೆ. ಅದರಲ್ಲಿ ಅಸ್ಪೃಶ್ಯತೆ ಆಚರಣೆ ಸಹ ಒಂದಾಗಿದೆ. ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳಲ್ಲಿ ಸಮಾನತೆಯ ಹಕ್ಕನ್ನು ಕೂಡ ನೀಡಿರುವುದರಿಂದ, ಈ ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಪ್ರಾಣಿ, ಪಕ್ಷಿ ಹಾಗೂ ಮನುಷ್ಯನಿಗೂ ಕೂಡ ಸಮಾನತೆಯಿಂದ ಜೀವಿಸುವ ಹಕ್ಕಿದೆ ಎಂದರು.

ಆಲೂರು: ಅಸ್ಪೃಶ್ಯತೆ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿದೆ ಆಲೂರು ತಹಸೀಲ್ದಾರ್ ಸಿ.ಪಿ ನಂದಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಸನ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಲೂರು ಇವರ ಸಂಯುಕ್ತಾಶ್ರಯದಲ್ಲಿ, ಪಟ್ಟಣದ ಮುಖ್ಯಬೀದಿಯಲ್ಲಿ ಅಸ್ಪೃಶ್ಯತೆಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ದೇಶವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಸಮಾಜದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳು ಅನಾದಿಕಾಲದಿಂದಲೂ ಬೇರೂರಿವೆ. ಅದರಲ್ಲಿ ಅಸ್ಪೃಶ್ಯತೆ ಆಚರಣೆ ಸಹ ಒಂದಾಗಿದೆ. ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳಲ್ಲಿ ಸಮಾನತೆಯ ಹಕ್ಕನ್ನು ಕೂಡ ನೀಡಿರುವುದರಿಂದ, ಈ ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಪ್ರಾಣಿ, ಪಕ್ಷಿ ಹಾಗೂ ಮನುಷ್ಯನಿಗೂ ಕೂಡ ಸಮಾನತೆಯಿಂದ ಜೀವಿಸುವ ಹಕ್ಕಿದೆ.ಆದರೆ ಕೆಲವು ಸಂದರ್ಭಗಳಲ್ಲಿ ಅಸ್ಪೃಶ್ಯತೆಯ ಆಧಾರದ ಮೇಲೆ ಆಚರಣೆಗಳು ನಡೆಯುತ್ತಿರುವುದು ಸಮಾಜಕ್ಕೆ ಕಂಟಕ ಪ್ರಾಯವಾಗಿದೆ. ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಣೆಯು ಕಂಡು ಬಂದಲ್ಲಿ ಅದಕ್ಕೆ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುವ ನಿಯಮಗಳಿರುವುದರಿಂದ, ಯಾರೂ ಸಹ ಅಸ್ಪೃಶ್ಯತಾ ಆಚರಣೆಯಲ್ಲಿ ಭಾಗಿಯಾಗಬಾರದು ಹಾಗೂ ಅಸ್ಪೃಶ್ಯತಾ ಆಚರಣೆಯನ್ನು ಮಾಡುವುದಕ್ಕೆ ಮುಂದಾಗಬಾರದು ಎಂದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು ಮಾತನಾಡಿ, ಬೀದಿ ನಾಟಕದ ಜಾಗೃತಿ ರಥವು ಪಟ್ಟಣದ ಬಸ್ ನಿಲ್ದಾಣ, ಬೈರಾಪುರ, ಚನ್ನಾಪುರ, ಮಗ್ಗೆ, ರಾಯರ ಕೊಪ್ಪಲು ಕೆ.ಹೊಸಕೋಟೆ, ಹೊನ್ನೇನಹಳ್ಳಿ ಕ್ರಾಸ್ ಗ್ರಾಮಗಳಲ್ಲಿ ಜನಸಂದಣಿ ಪ್ರದೇಶದಲ್ಲಿ ಬೀದಿ ನಾಟಕಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್‌, ಮುಖಂಡರುಗಳಾದ ಬಿ.ಸಿ ಶಂಕರಾಚಾರ್, ಜವರಪ್ಪ, ಜಯಪ್ಪ, ಬೀದಿ ನಾಟಕ ತಂಡದ ಮುಖ್ಯಸ್ಥ ಲೋಕೇಶ್ ಉಪಸ್ಥಿತರಿದ್ದರು.