ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ: ಬಾಲಕೃಷ್ಣ

| Published : May 22 2024, 12:45 AM IST

ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ: ಬಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಸಂಸದ ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ. ಬದಲಿಗೆ ತಂದೆಗೆ ತಕ್ಕ ಮಗ ಆಗಿದ್ದಾನೆ. ಆದ್ದರಿಂದಲೇ ಇವಲ್ಲವೂ ಚರ್ಚೆ ಆಗುತ್ತಿವೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ರಾಮನಗರ: ಸಂಸದ ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ. ಬದಲಿಗೆ ತಂದೆಗೆ ತಕ್ಕ ಮಗ ಆಗಿದ್ದಾನೆ. ಆದ್ದರಿಂದಲೇ ಇವಲ್ಲವೂ ಚರ್ಚೆ ಆಗುತ್ತಿವೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕುಮಾರಸ್ವಾಮಿ ಅವರೇ ನಾನು ದಾರಿತಪ್ಪಿದ್ದೆ, ಬಳಿಕ ನನ್ನ ಶ್ರೀಮತಿ ನನ್ನನ್ನು ಎಚ್ಚರಿಸಿದರು ಅಂತ ಹೇಳಿದ್ದರು. ಹಾಗೆ ನೂಲಿನಂತೆ ಸೀರೆ ಅಲ್ಲವೇ? ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಿದ್ದರೆ ಇದೆಲ್ಲವು ಹೊರಗೆ ಬರುತ್ತಿರಲಿಲ್ಲ. ಆದರೆ, ಆತ ತಂದೆಗೆ ತಕ್ಕ ಮಗ ಆಗಿದ್ದರಿದೆ ಇವೆಲ್ಲವು ಆಚೆ ಬರುತ್ತಿವೆ. ಪ್ರಜ್ವಲ್‌ಗೆ ಟಿಕೆಟ್ ಕೊಡದೆ ಹೋಗಿದ್ದರೆ ಇದ್ಯಾವುದೂ ಹೊರಗೆ ಬರುತ್ತಿರಲಿಲ್ಲ ಎಂದರು.

ಪ್ರಜ್ವಲ್ ಹಗರಣಗಳು ಅಮಿತ್ ಶಾಗೆ ಮೊದಲೇ ಗೊತ್ತಿತ್ತು. ಆ ಸಿಡಿಗಳೆಲ್ಲ ಅಮಿತ್ ಶಾ ಕೈ ಸೇರಿದ್ದರಿಂದಲೇ ಅವರು ಟಿಕೆಟ್ ಬೇಡ ಅಂದಿದ್ರು. ಆದರೂ ದೇವೇಗೌಡರು ಮೊಮ್ಮಗನ ವ್ಯಾಮೋಹಕ್ಕೆ ಟಿಕೆಟ್ ಕೊಟ್ಟರು. ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಬಹುದಿತ್ತು ಎಂದು ಹೇಳಿದರು.

ಈ ಪ್ರಕರಣದಲ್ಲಿ ಕಾಂಗ್ರೆಸ್ ಅವರನ್ನು ವಿಲನ್ ಮಾಡುತ್ತಿದ್ದಾರೆ. ವೀಡಿಯೋ ಮಾಡಿದ್ದು ಜೆಡಿಎಸ್ ಸಂಸದ, ವೀಡಿಯೋ ಸಿಡಿ ಮಾಡಿ ಹಂಚಿದ್ದು ಬಿಜೆಪಿಯ ದೇವರಾಜೇಗೌಡ. ಆದರೆ, ಆರೋಪ ಮಾಡಿ ಕಾಂಗ್ರೆಸ್ ಪಕ್ಷದವರನ್ನು ವಿಲನ್ ಮಾಡುತ್ತಿದ್ದಾರೆ. ಇದು ಯಾವ ನ್ಯಾಯ? ನಾವೇನು ಸಿಡಿ ಫ್ಯಾಕ್ಟರಿ ಇಟ್ಟುಕೊಂಡಿದ್ದೇವಾ, ವೀಡಿಯೋ ಮಾಡಿ ತಂದು ಕೊಡಿ ಅಂತ ಹೇಳಿದ್ವಾ? ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಒಬ್ಬ ಮಾಜಿ ಸಿಎಂ. ಸ್ವಲ್ಪ ಗಂಭೀರವಾಗಿ ಇರೋದನ್ನ ಕಲಿಯಬೇಕು. ಎರಡು ಬಾರಿ ಸಿಎಂ ಆಗಿದ್ದವರು, ಚಿಲ್ಲರೆ ಹುಡುಗರ ರೀತಿ ಮಾತನಾಡೋದನ್ನ ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕುಮಾರಸ್ವಾಮಿಯವರ ಆರೋಪಕ್ಕೆ ಕಾನೂನು ಸುವ್ಯವಸ್ಥೆ ಹಾಳಾಗಲು ಕುಮಾರಸ್ವಾಮಿ ಅವರೇ ಕಾರಣ. ನೀವೇ ಪ್ರತಿನಿತ್ಯ ಮಾಧ್ಯಮದಲ್ಲಿ ತೋರಿಸುತ್ತಿದ್ದೀರಿ. ಇವತ್ತು ಏನಾದರು ಕಾನೂನು ಸುವ್ಯವಸ್ಥೆ ಹಾಳಾಗಿದ್ದರೆ ಅದಕ್ಕೆ ಕುಮಾರಸ್ವಾಮಿ ಅವರೇ ಕಾರಣ ಎಂದು ಆರೋಪಿಸಿದರು.

ಸರ್ಕಾರ ನಮ್ಮ ಕುಟುಂಬದವರ ಪೋನ್ ಟ್ಯಾಪಿಂಗ್ ಮಾಡುತ್ತಿದ್ದಾರೆಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಯಾವತ್ತಾದರು ಸತ್ಯ ಹೇಳಿದ್ದಾರ? ಅವರು ಹೇಳೋದೆಲ್ಲಾ ಸುಳ್ಳೇ. ಅವರು ಮೊದಲೇ ಊಹೆ ಮಾಡಿಕೊಳ್ಳುತ್ತಾರೆ. ಸರ್ಕಾರ ಈ ರೀತಿ ಮಾಡಬಹುದು, ಸಿದ್ದರಾಮಯ್ಯ, ಡಿಕೆಶಿ ಏನು ಮಾಡುತ್ತಾರೆ ಅಂತಾ ಊಹೆ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ 100 ಕೋಟಿ ಡೀಲ್ ನಡೆದಿದೆ ಎಂಬ ದೇವರಾಜೇಗೌಡ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ದೇವರಾಜೇಗೌಡ ಯಾರು ಅಂತಾ ಎಲ್ಲರಿಗೂ ಗೊತ್ತು. ಮೊದಲು ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುತ್ತಿದ್ದರು. ಆಮೇಲೆ ನಮ್ಮ ವಿರುದ್ಧ ಮಾತನಾಡಲು ಶುರು ಮಾಡಿದ್ದಾನೆ. ಇದೆಲ್ಲಾ ಬಿಜೆಪಿಯವರು ಅವನ ಕೈಯಲ್ಲಿ ಆಟ ಆಡಿಸುತ್ತಿದ್ದಾರೆ. ಬಿಜೆಪಿಯರು ಯಾವ ರೀತಿ ಕೀ ಕೊಡುತ್ತಾರೊ ಆ ರೀತಿ ದೇವರಾಜೇಗೌಡ ಆಡುತ್ತಿದ್ದಾನೆ ಎಂದು ಹೇಳಿದರು.

ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ಏಕೆ ಕೊಡಬೇಕು. ಈ‌ ಹಿಂದೆ ಬಿಡಿಸಿಸಿ ಬ್ಯಾಂಕ್ ಸಂಬಂಧ ಪಟ್ಟ ಕೇಸ್ ಕೊಟ್ಟು 35 ವರ್ಷಗಳೇ ಕಳೆದಿವೆ‌. ಏನು ತೀರ್ಮಾನ ಆಗಿಲ್ಲ. ಎಸ್‌ಐಟಿ ಅವರು ಕೇಸ್ ತನಿಖೆ ನಡೆಸುತ್ತಿದ್ದಾರೆ. ಅವರಿಗೆ ಸಮಾಧಾನ ಆಗಲಿಲ್ಲ ಅಂದರೆ ಸಿಬಿಐಗೆ ಕೊಡೋದ ಬೇಡ್ವಾ ಅಂತಾ ಯೋಚನೆ ಮಾಡಬೇಕು. ಎಸ್‌ಐಟಿ ತನಿಖೆಯ ವರದಿಗೂ ಮುಂಚೆಯೇ ಸಿಬಿಐಗೆ ಏಕೆ ಕೊಡಬೇಕು. ಸಿಬಿಐಗೆ ಕೊಟ್ಟರೆ ಪ್ರಕರಣದಿಂದ ತಪ್ಪಿಸಿಕೊಂಡು ರಕ್ಷಣೆ ತಗೋಬಹುದು ಅಂತಾ ಆಲೋಚನೆ ಇರಬೇಕು ಎಂದು ಟೀಕಿಸಿದರು.ಬಾಕ್ಸ್‌........

ನಾವೇನೂ ಬಳೆ ತೊಟ್ಕೊಂಡು ಕೂತಿಲ್ಲ, ನಮಗೂ ಫೋಟೋ ಸುಡೋಕೆ ಬರುತ್ತೆರಾಮನಗರ: ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ ಮಾಡಿಸಿ ಪೋಸ್ಟರ್ ಸುಟ್ಟು ಹಾಕಿ ಚಪ್ಪಲಿಯಲ್ಲಿ ಹೊಡಿಸುತ್ತೀರಾ ಕುಮಾರಸ್ವಾಮಿ ಅವರೇ. ನಾವು ತಾಳ್ಮೆಯಿಂದ ಇದ್ದೇವೆ. ಅಂದ ಮಾತ್ರಕ್ಕೆ ನಾವೇನೂ ಬಳೆ ತೊಟ್ಟುಕೊಂಡು ಕೂತಿಲ್ಲ. ನಮಗೂ ಫೋಟೋಗೆ ಬೆಂಕಿ ಇಟ್ಟು ಸುಡಲು ಬರುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಾಗಡಿ ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ತಪ್ಪು ಮಾಡಿದ್ದಾರೋ ಅವರ ಫೋಟೋ ಸುಡಲಿ. ಡಿ.ಕೆ.ಶಿವಕುಮಾರ್ ಅವರ ಫೋಟೋ ಸುಟ್ಟಿದ್ದೀರಿ. ಸರ್ಕಲ್‌ನಲ್ಲಿ ಭಾವಚಿತ್ರಕ್ಕೆ ಚಪ್ಪಲಿ ಹೊಡೆದರೆ ದೊಡ್ಡದು. ಆ ಕೆಲಸ ನಮಗೆ ಮಾಡಲು ಬರುವುದಿಲ್ಲವೇ. ಅವರ ಶಿಷ್ಯಂದಿರೇನು ಸುಮ್ಮನೆ ಕೂತಿಲ್ಲ. ನಾವು ಮನಸ್ಸು ಮಾಡಿದರೆ ಅವರ ಪೋಟೊಗೂ ಬೆಂಕಿ ಇಟ್ಟು ಸುಡುತ್ತೇವೆ. ನಾವೇನೂ ಬಳೆ ತೊಟ್ಟಿಕೊಂಡು ಕೂತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷ ಆಗುತ್ತೆ ಎಂದು ಹೇಳಿದರು.

ಪ್ರಜ್ವಲ್ ಗೆ ಸಿಡಿ ಮಾಡಿ ಅಂತಾ ಯಾರಾದರು ಹೇಳಿದ್ದರಾ? ಡಿ.ಕೆ. ಶಿವಕುಮಾರ್ ಆಗಲಿ ನಾವೇನಾದರೂ ಫೋನ್ ಮಾಡಿ ಹೇಳಿದ್ವಾ, ಕುಮಾರಸ್ವಾಮಿಗೆ ತಲೆ ಕೆಟ್ಟಿದೆ ಅದಕ್ಕೆ ಏನೇನೋ ಮಾತನಾಡುತ್ತಾರೆ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ವಿರುದ್ಧವೇ ಆರೋಪ ಮಾಡುತ್ತಾರೆ. ಕುಮಾರಸ್ವಾಮಿಗೆ ನಿದ್ದೆಗಣ್ಣಲ್ಲೂ ಡಿಕೆಶಿ ಕಾಣುತ್ತಾರೆ ಎಂದು ಲೇವಡಿ ಮಾಡಿದರು.

ಒಕ್ಕಲಿಗ ನಾಯಕತ್ವ ಮೊದಲು ಜನತಾದಳದ ಬಳಿಯೇ ಇತ್ತು‌. ಈಗ ಅದು ಛಿದ್ರ ಛಿದ್ರ ಆಗಿದೆ. ಎಲ್ಲಾ ಕಡೆ ವಿಭಜನೆ ಆಗಿದೆ. ಒಕ್ಕಲಿಗರು ಇದೀಗ ಎಲ್ಲಾ ಪಕ್ಷದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಒಕ್ಕಲಿಗ ನಾಯಕತ್ವ ಇರೋದು ಇದೀಗ ಕಾಂಗ್ರೆಸ್ ಪಕ್ಷದಲ್ಲಿ. ಒಕ್ಕಲಿಗ ನಾಯಕತ್ವ ಇರುವ ಪಕ್ಷವನ್ನು ಮೋದಿ ಅವರ ಬಳಿ ಹೋಗಿ ಅಡ ಇಟ್ಟಿದ್ದಾರೆ. ಅಲ್ಲಿ ಏನು ಕುಮಾರಸ್ವಾಮಿನಾ ಮುಖ್ಯಮಂತ್ರಿ ಮಾಡುತ್ತಾರಾ?

ಬಿಜೆಪಿಯಲ್ಲಿ ಕುಮಾರಸ್ವಾಮಿ ಆಟ ನಡೆಯೋದಿಲ್ಲ. ಡಿ.ಕೆ.ಶಿವಕುಮಾರ್ ಎಲ್ಲಿ ಒಕ್ಕಲಿಗ ನಾಯಕರಾಗ್ತಾರೋ. ಎಲ್ಲಿ ನನ್ನ ನಾಯಕತ್ವ ಕೈತಪ್ಪುತ್ತೊ ಅಂತಾ ಕುಮಾರಸ್ವಾಮಿ ಈ ರೀತಿ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಆತ ತನ್ನ ತೆವಲಿಗೆ ಮಾತಾಡಿದ್ದಾನೆ‌. ಆತನ ವಿರುದ್ಧ ಬೇಕಿದ್ದರೆ ಕ್ರಮ ಕೈಗೊಳ್ಳಲಿ, ಅದನ್ನು ಬಿಟ್ಟು ಡಿ.ಕೆ.ಶಿವಕುಮಾರ್ ವಿರುದ್ಧ ಮಾತಾಡುವುದು ತಪ್ಪು. ಮಾತು ಎತ್ತಿದರೆ ಡಿ.ಕೆ.ಶಿವಕುಮಾರ್ ಈ ರೀತಿ ಮೋಸ ಮಾಡಬೇಕಾ..? ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡುತ್ತೀರಾ. ಕುಮಾರಸ್ವಾಮಿ ಮಾತಿನ ಶೈಲಿಯನ್ನು ಬಾಲಕೃಷ್ಣ ಅಣುಕಿಸಿದರು.21ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು.