ಸಾರಾಂಶ
ಹೊನ್ನಾಳಿ ಪಟ್ಟಣದ ದೇವನಾಯಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೈತ ಮುಖಂಡ ದಿಡಗೂರಿನ ಎ.ಜಿ. ಪ್ರಕಾಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ದೇವನಾಯಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೈತ ಮುಖಂಡ ದಿಡಗೂರಿನ ಎ.ಜಿ. ಪ್ರಕಾಶ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.ನಿಕಟಪೂರ್ವ ಅಧ್ಯಕ್ಷರಾಗಿದ್ದ ಎಚ್.ಪಿ. ಗುರುಬಸಪ್ಪ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಎ.ಜಿ. ಪ್ರಕಾಶ್ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು. ಇದರಿಂದ ಚುನಾವಣಾಧಿಕಾರಿ ನವೀನ್ ಕುಮಾರ್ ಅವರು ಎ.ಜಿ. ಪ್ರಕಾಶ್ ಆಯ್ಕೆ ಅವಿರೋಧ ಎಂದು ಘೋಷಣೆ ಮಾಡಿದರು.
ಆಡಳಿತ ಮಂಡಳಿ ಉಪಾಧ್ಯಕ್ಷೆ ಡಿ.ಎಂ. ವಿನೋದಮ್ಮ, ಸದಸ್ಯರಾದ ಡಿ.ಕೆ. ಚಂದ್ರಪ್ಪ, ಬಿ.ಎಚ್. ಗಣೇಶಪ್ಪ, ಬಿ.ಎಚ್. ಕುಮಾರ್, ಟಿ.ಮಲ್ಲಪ್ಪ, ಕೆ.ಎಚ್. ಪರಮೇಶ್, ಎಚ್.ಪಿ. ಗುರುಬಸಪ್ಪ, ಡಿ.ಬಿ. ಮಹೇಂದ್ರ, ಎಸ್.ಎಚ್. ಮಾರುತಿ, ಒ.ಕೆ. ರಮೇಶ್, ಸುಶೀಲಮ್ಮ, ಮುಖ್ಯ ಕಾರ್ಯನಿರ್ವಾಹಕ ಜಿ.ಎಂ. ಚೇತನ್, ಸಿಬ್ಬಂದಿ ಡಿ.ಎಸ್. ನವೀನ್, ಎಂ.ಎಸ್. ಮನೋಜ್ ಉಪಸ್ಥಿತರಿದ್ದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ, ಸಣ್ಣಕ್ಕಿ ಬಸವನಗೌಡ, ಹೊನ್ನಾಳಿ ತಾಲೂಕು ಸಾಧು ವೀರಶೈವ ಸಮಾಜ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ನ್ಯಾಮತಿ ತಾಲೂಕು ಅಧ್ಯಕ್ಷ ಕೋಡಿಕೊಪ್ಪ ಶಿವಣ್ಣ, ಹಲವು ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
- - --21ಎಚ್.ಎಲ್.ಐ2:
ಹೊನ್ನಾಳಿ ಪಟ್ಟಣದ ದೇವನಾಯಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಎ.ಜಿ. ಪ್ರಕಾಶ್ ಆಯ್ಕೆಯಾಗಿದ್ದು, ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದಿಸಿದರು.