Pramod's condolences to Ranjita's family
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಪಟ್ಟಣದ ಕಾಳಮ್ಮನಗರದಲ್ಲಿ ಕೊಲೆಯಾದ ರಂಜಿತಾ ಬನ್ಸೋಡೆ ಮನೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಕ್ಕಾಗಿ ಜಿಹಾದಿ, ಕೊಲೆಗಡುಕರನ್ನು, ಗೋ ಹಂತಕರನ್ನು ಓಲೈಕೆ ಮಾಡುತ್ತಿರುವ ಕಾಂಗ್ರೆಸ್‌ಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲವಾಗಿದೆ. ದೇಶಭಕ್ತಿ ಎಂದರೆ ಏನು ಎನ್ನುವುದೇ ಗೊತ್ತಿಲ್ಲ ಎಂದು ಹೇಳಿದರು.
ಇಂತಹ ಅಮಾನವೀಯ ಕೃತ್ಯ ನಡೆಯಬಾರದಿತ್ತು. ದುಃಖದಲ್ಲಿರುವ ಕುಟುಂಬಕ್ಕೆ ಹಿಂದೂ ಸಂಘಟನೆಗಳು ಸದಾ ಬೆಂಬಲವಾಗಿ ನಿಲ್ಲುತ್ತವೆ ಎಂದು ಧೈರ್ಯ ಹೇಳಿದರು.ಸರ್ಕಾರ, ಪೊಲೀಸ್ ಇಲಾಖೆ, ನ್ಯಾಯಾಲಯ ಹೇಗೆ ಬೇಕಾದರೂ ನಡೆದುಕೊಳ್ಳುತ್ತದೆ. ಇದಕ್ಕೆ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣವೇ ಸಾಕ್ಷಿ. ಅಮಾನವೀಯವಾಗಿ ಆಕೆಯನ್ನು ಕೊಚ್ಚಿ ಕೊಂದಿರುವ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದು ಯಾವ ರೀತಿಯ ನ್ಯಾಯ ವ್ಯವಸ್ಥೆ ಎಂದು ಪ್ರಶ್ನಿಸಿದರು. ಯಲ್ಲಾಪುರದ ರಂಜಿತಾರನ್ನು ಹಲಾಲ್ ಮಾದರಿಯಲ್ಲಿ ಕತ್ತರಿಸಿ ಹಾಕಿರುವುದು ಖಂಡನೀಯ. ಕೊಲೆ ಮಾಡಿದ ವ್ಯಕ್ತಿ ಸತ್ತರೂ, ಕೊಲೆ, ಗೋಹತ್ಯೆ, ಲವ್ ಜಿಹಾದ್‌ನಂತಹ ಕೃತ್ಯ ಮಾಡುವ ಮಾನಸಿಕತೆ ಸಾಯುವುದಿಲ್ಲ. ಅಂತಹ ಮಾನಸಿಕತೆ ಇಸ್ಲಾಂನ ಮೂಲದಲ್ಲೇ ಇದೆ. ಈ ಪ್ರವೃತ್ತಿಯನ್ನು ತಡೆಯುವ ಬಗ್ಗೆ ಸರ್ಕಾರ, ರಾಜಕಾರಣಿಗಳು, ಸಮಾಜ ಚಿಂತನೆ ಮಾಡಬೇಕಾಗಿದೆ. ಈ ವಿಚಾರದಲ್ಲಿ ಹಿಂದೂ ಸಂಘಟನೆಗಳು ಒಗ್ಗೂಡಿ ಬೀದಿಗಿಳಿದು ಹೋರಾಟ ಮಾಡಲಿವೆ ಎಂದರು.ಬಳ್ಳಾರಿಯಲ್ಲಿ ಹತ್ಯೆಯಾದ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ತಕ್ಷಣ ಹೋಗಿ ₹೨೫ ಲಕ್ಷ ಪರಿಹಾರ ನೀಡಲಾಗಿದೆ. ಯಲ್ಲಾಪುರದಲ್ಲಿ ದಲಿತ ಮಹಿಳೆಯ ಕೊಲೆಯಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಕಾಂಗ್ರೆಸ್‌ನ ಯಾವುದೇ ಸಚಿವರು ಭೇಟಿ ನೀಡಿಲ್ಲ. ದಲಿತ ಮಹಿಳೆಯನ್ನು ಅಮಾನವೀಯವಾಗಿ ಕೊಂದಿರುವ ವಿಚಾರ ಕಾಂಗ್ರೆಸ್ ಸರ್ಕಾರಕ್ಕೆ ಗಂಭೀರ ವಿಷಯವಾಗಿಲ್ಲ ಎಂದು ಟೀಕಿಸಿದರು.ಕರ್ನಾಟಕ ಉತ್ತರ ರಾಜ್ಯದ ಗೌರವಾಧ್ಯಕ್ಷ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ, ಜಿಲ್ಲಾಧ್ಯಕ್ಷ ಮಂಜುನಾಥ ಕೆ.ಎಚ್., ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮಹಾಲಿಂಗ ಐಗಳಿ, ಧಾರವಾಡ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಟ್ಕರ್, ಹರೀಶ ಪೂಜಾರಿ, ಸೋಮೇಶ್ವರ ನಾಯ್ಕ, ಶ್ರೀಪಾದ ಭಟ್ಟ, ಬಾಬು ಬಾಂದೇಕರ್, ಸಿದ್ದಾರ್ಥ ನಂದೊಳ್ಳಿಮಠ, ಕಿರಣ ಚೌಹಾಣ ಇತರರಿದ್ದರು.