ಇಲ್ಲಿನ ಪಂಪ್‌ವೆಲ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತೃತ್ವದಲ್ಲಿ ಗುರುವಾರ ಆಸ್ಪತ್ರೆಯ ಸಭಾಂಗಣದಲ್ಲಿ ‘ವೈದ್ಯರ ದಿನಾಚರಣೆ- 2026’ ಅನ್ನು ಆಚರಿಸಲಾಯಿತು. ‘ಬಿಹೈಂಡ್ ದಿ ಮಾಸ್ಕ್: ಹೂ ಹೀಲ್ಸ್ ದಿ ಹೀಲರ್ಸ್?’ (ಮುಖವಾಡದ ಹಿಂದೆ: ವೈದ್ಯರನ್ನು ಗುಣಪಡಿಸುವವರು ಯಾರು?) ಎಂಬ ವಿಶೇಷ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಂಗಳೂರು : ಇಲ್ಲಿನ ಪಂಪ್‌ವೆಲ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತೃತ್ವದಲ್ಲಿ ಗುರುವಾರ ಆಸ್ಪತ್ರೆಯ ಸಭಾಂಗಣದಲ್ಲಿ ‘ವೈದ್ಯರ ದಿನಾಚರಣೆ- 2026’ ಅನ್ನು ಆಚರಿಸಲಾಯಿತು. ‘ಬಿಹೈಂಡ್ ದಿ ಮಾಸ್ಕ್: ಹೂ ಹೀಲ್ಸ್ ದಿ ಹೀಲರ್ಸ್?’ (ಮುಖವಾಡದ ಹಿಂದೆ: ವೈದ್ಯರನ್ನು ಗುಣಪಡಿಸುವವರು ಯಾರು?) ಎಂಬ ವಿಶೇಷ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಂಗಳೂರಿನ ಯೇನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಅಶ್ವಿನಿ ದತ್ ಆರ್. ಮಾತನಾಡಿ, ಹಗಲು-ರಾತ್ರಿ ಎನ್ನದೆ ಸ್ವಂತ ಆರೋಗ್ಯವನ್ನು ಲೆಕ್ಕಿಸದೆ ಸಮಾಜಕ್ಕಾಗಿ ದುಡಿಯುವ ವೈದ್ಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ನಾವೆಲ್ಲರೂ ಗಮನ ಹರಿಸಬೇಕಾದ ಅಗತ್ಯವಿದೆ. ವೈದ್ಯರಿಗೆ ಕೇವಲ ಗೌರವ ನೀಡಿದರೆ ಸಾಲದು, ಅವರಿಗೆ ಕೆಲಸ ಮಾಡಲು ಸುರಕ್ಷಿತ ಮತ್ತು ಒತ್ತಡರಹಿತ ವಾತಾವರಣವನ್ನು ನಿರ್ಮಿಸಿಕೊಡುವುದು ಇಡೀ ಸಮಾಜದ ಜವಾಬ್ದಾರಿಯಾಗಿದೆ. ಇವತ್ತು ಇಲ್ಲಿ ಪ್ರಸಾದ್ ನೇತ್ರಾಲಯದ ವತಿಯಿಂದ ಸಮಾಜಕ್ಕೆ ಸ್ವಾರ್ಥರಹಿತ ಸೇವೆ ಸಲ್ಲಿಸಿದ ಹಿರಿಯ ಮತ್ತು ಅನುಭವಿ ವೈದ್ಯರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮುಖ್ಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಎಚ್. ಪ್ರಭಾಕರ್ ಮಾತನಾಡಿ, ವೈದ್ಯರ ತ್ಯಾಗ ಮತ್ತು ಸೇವೆಗೆ ಇಡೀ ಸಮಾಜ ಸದಾ ಋಣಿಯಾಗಿದೆ ಎಂದರು.

ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕುಡ್ಲು ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಮಾಜಕ್ಕೆ ಸ್ವಾರ್ಥರಹಿತ ವೈದ್ಯಕೀಯ ಸೇವೆ ಸಲ್ಲಿಸಿದ ವೈದ್ಯರನ್ನು ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಪದ್ಧತಿಗಳ ವೈದ್ಯರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.

ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್‌, ಪ್ರಸಾದ್‌ ನೇತ್ರಾಲಯ ಮಂಗಳೂರಿನ ನಿರ್ದೇಶಕರಾದ ಡಾ. ವಿಕ್ರಮ್ ಜೈನ್, ಡಾ. ಹರೀಶ್ ಶೆಟ್ಟಿ, ಡಾ. ಜೇಕಬ್ ಚಾಕೋ ಇದ್ದರು.