ಸಾರಾಂಶ
ಮುದಗಲ್ ಸಮೀಪದ ಕನಸಾವಿ ಗ್ರಾಮದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಅಮರೇಶ ನಾಡಗೌಡ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮುದಗಲ್ ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಪ್ರಮುಖ ವೇದಿಕೆಗಳಾಗಿದ್ದು ಮಕ್ಕಳು ತಮ್ಮ ಕಲೆಯನ್ನು ಪ್ರದರ್ಶನ ಮಾಡಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಮರೇಶ ನಾಡಗೌಡ ಹೇಳಿದರು.
ಪಟ್ಟಣ ಸಮೀಪದ ಆಮದಿಹಾಳ ಗ್ರಾಪಂ ವ್ಯಾಪ್ತಿಯ ಕನಸಾವಿ ಗ್ರಾಮದಲ್ಲಿ ನಡೆದ ಮಕ್ಕಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶೈಕ್ಷಣಿಕ ವ್ಯವಸ್ಥೆ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃಧ್ಧಿಗೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದ ಎಂದರು.ಶಾಲೆಯ ಮುಖ್ಯಗುರು ಶಿವಶಂಕರ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಕಲಿಕಾ ಜೊತೆಗೆ ಅವರ ಪ್ರತಿಭೆ ಹೊರತರಲು ಇಂತಹ ಕಾರ್ಯಕ್ರಮಗಳನ್ನು ಇಲಾಖೆ ಮೂಲಕ ಸರಕಾರ ಆಯೋಜಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಮದಿಹಾಳ ಗ್ರಾಪಂ ಅಧ್ಯಕ್ಷ ಶಶಿಧರಗೌಡ ಬ್ಯಾಲಿಹಾಳ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಮರೇಶ ಯರಡೋಣಿ , ಸಿಆರ್‌ಪಿ ರಾಮಚಂದ್ರ ಢವಳೆ, ಶರಣಪ್ಪ ಮುದ್ದಲಗುಂದಿ, ರಾಮನಗೌಡ ಪೊಲೀಸ್ ಪಾಟೀಲ್, ಉಪಸ್ಥಿತರಿದ್ದರು.