ಸಾರಾಂಶ
ಶಿರಸಿ: ಅಖಿಲ ಹವ್ಯಕ ಮಹಾಸಭಾದಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕರ ವೇದಿಕೆ ಸಹಯೋಗದಲ್ಲಿ ಪ್ರತಿಬಿಂಬ ಮತ್ತು ಯುವಜನೋತ್ಸವ ಕಾರ್ಯಕ್ರಮ ನ. ೨೪ರಂದು ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ನಗರದ ಲಯನ್ಸ್ ಸ್ಕೂಲ್ ಸಭಾಭವನದಲ್ಲಿ ಜರುಗಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಹವ್ಯಕ ಮಹಾಸಭಾ ನಿರ್ದೇಶಕ ಶಶಾಂಕ ಹೆಗಡೆ ಶಿಗೇಹಳ್ಳಿ ಮಾಹಿತಿ ನೀಡಿ, ಅಂದು ಬೆಳಗ್ಗೆ ೭ ಗಂಟೆಯಿಂದ ಶಿಕ್ಷಕರಿಂದ ಗಾಯತ್ರೀ ಜಪಾನುಷ್ಠಾನ, ಸರಸ್ವತೀ ಹವನ, ಶಿಕ್ಷಕಿಯರಿಂದ ಕುಂಕುಮಾರ್ಚನೆ ಹಾಗೂ ಭಗವದ್ಗೀತಾ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.ಬೆಳಗ್ಗೆ ೧೦ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಯಲ್ಲಾಪುರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಉದ್ಘಾಟಿಸಲಿದ್ದಾರೆ. ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ಲಯನ್ಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಲೋಕೇಶ ಹೆಗಡೆ ಉಪಸ್ಥಿತರಿರಲಿದ್ದಾರೆ. ಸರಸ್ವತೀ ಉಪಾಸನೆ ಕುರಿತು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಉಪನ್ಯಾಸ ನೀಡಲಿದ್ದಾರೆ. ಪ್ರತಿಭೆಗಳಿಗೆ ಸ್ಪರ್ಧಾ ಸೌರಭ, ಯುವ ಪ್ರತಿಭೋತ್ಸವ, ರಸಪ್ರಶ್ನೆ, ಒನ್ ಮಿನಿಟ್ ಮನರಂಜನಾ ಕಾರ್ಯಕ್ರಮ, ಚರ್ಚಾಗೋಷ್ಠಿ ನಡೆಯಲಿದೆ. ಅತಿಯಾದ ಶಿಕ್ಷಣ ಮೋಹದಿಂದ ಹವ್ಯಕತ್ವ ಅಳಿವಿನ ಅಂಚಿನಲ್ಲಿದೆಯೇ ಎಂಬ ವಿಷಯದ ಕುರಿತು ಶಿಕ್ಷಕ ವೃಂದದವರಿಂದ ಚರ್ಚಾಗೋಷ್ಠಿ ಆಯೋಜಿಸಲಾಗಿದೆ ಎಂದರು.
ಹವ್ಯಕರ ಆಹಾರ ಮತ್ತು ಆರೋಗ್ಯ ಎಂಬ ವಿಷಯದ ಕುರಿತ ಡಾ. ಕಿಶನ್ ಆರ್ ಭಾಗ್ವತ್ ಸಾಗರ ಉಪನ್ಯಾಸ ನೀಡಲಿದ್ದು, ಸಂಜೆ ೪.೩೦ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಹೆಗಡೆ ಉಪಸ್ಥಿತರಿರಲಿದ್ದಾರೆ. ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಪರ್ಧೆಗಳಲ್ಲಿ ಹವ್ಯಕರಿಗೆ ಮಾತ್ರ ಅವಕಾಶವಿದ್ದು, ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಸ್ಪರ್ಧಿಗಳನ್ನು ಬೆಂಗಳೂರಿನಲ್ಲಿ ನಡೆಯುವ ಪ್ರತಿಬಿಂಬ ಗ್ರ್ಯಾಂಡ್ ಫಿನಾಲೆಗೆ ಆಯ್ಕೆ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರತಿಬಿಂಬ ಸಂಚಾಲಕ ವಿ.ಎಂ. ಹೆಗಡೆ, ಯುವ ವೇದಿಕೆ ಸಂಚಾಲಕ ಡಿ.ಎಸ್. ಹೆಗಡೆ, ಹವ್ಯಕ ಶಿಕ್ಷಕರ ವೇದಿಕೆ ಸಂಚಾಲಕ ಡಿ.ಪಿ. ಹೆಗಡೆ, ಲಯನ್ಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಲೋಕೇಶ ಹೆಗಡೆ ಮತ್ತಿತರರು ಇದ್ದರು.ಇಂದಿನಿಂದ ತ್ರಿ ರಾಜ್ಯಮಟ್ಟದ ಋಗ್ವೇದ ಕಂಠಪಾಠ ಪರೀಕ್ಷೆ
ಗೋಕರ್ಣ: ಮುಖ್ಯ ಕಡಲತೀರದ ಮಣಿಭದ್ರ ದೇವಾಲಯದ ಬಳಿ ಇರುವ ಹರಿಹರೇಶ್ವರ ವೇದ ವಿದ್ಯಾಪೀಠದಲ್ಲಿ ದಿನಾಂಕ ಅ. ೧೪ರಿಂದ ೧೬ರ ವರೆಗೆ ತ್ರಿರಾಜ್ಯಮಟ್ಟದ(ಮಹಾರಾಷ್ಟ್ರ, ಗೋವಾ, ಕರ್ನಾಟಕ) ವೇದ ವಿದ್ಯಾರ್ಥಿಗಳಿಗೆ ಋಗ್ವೇದ ಕಂಠಪಾಠ ಪರೀಕ್ಷೆ ನಡೆಯಲಿದೆ. ಋಗ್ವೇದದ ಘನಭಾಗ, ಕ್ರಮಭಾಗ, ಸಂಹಿತಾ ಭಾಗ, ಎರಡು ಅಷ್ಟಕಗಳು, ಪವಮಾನಸೂಕ್ತ, ಭಗವದ್ಗೀತೆ ಭಾಗಗಳ ಪರೀಕ್ಷೆಯನ್ನು ಆಯೋಜಿಸಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ವೇ. ಬ್ರಹ್ಮ ಕೃಷ್ಣ ಜೋಗಭಟ್ ನೆರವೇರಿಸುವರು. ವೇ. ಸುಬ್ರಹ್ಮಣ್ಯ ಅಡಿ ಅಧ್ಯಕ್ಷತೆ ವಹಿಸಲಿದ್ದು, ಬ್ರಾಹ್ಮಣ ಪರಿಷತ್ ಅಧ್ಯಕ್ಷ ವೇ. ಚಂದ್ರಶೇಖರ ಅಡಿಮೂಳೆ, ಮೈಸೂರಿನ ವೇ. ಚಿನ್ಮಯದತ್ತ ಘನಪಾಠಿಗಳು ಪಾಲ್ಗೊಳ್ಳಲಿದ್ದಾರೆ.ಇದೇ ಸಂದರ್ಭದಲ್ಲಿ ಮಹಾಗಣಪತಿ ಮಂದಿರದ ಅರ್ಚಕರಾದ ವೇ. ಬ್ರಹ್ಮ ಪರಮೇಶ್ವರ ಶಂಕರಲಿಂಗ, ಬೆಂಗಳೂರಿನ ವೇ. ಬ್ರಹ್ಮ ಎಸ್. ಶ್ಯಾಮಸುಂದರ್ ಘನಪಾಠಿ, ವೇ. ಚಿಂತಾಮಣಿ ಉಮಾಶಂಕರ ಘನಪಾಠಿ, ಮಹಾರಾಷ್ಟ್ರದ ವೇ. ಬ್ರಹ್ಮಶ್ರೀನಿಧಿ ಸ್ವಾನಂದ ಧಾಯ್ಗುಡೆ, ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ ಬಳ್ಕೂರ ಅವರನ್ನು ಸನ್ಮಾನಿಸಲಾಗುವುದು ಎಂದು ಹರಿಹರೇಶ್ವರ ವೇದ ವಿದ್ಯಾಪೀಠದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.