ಉತ್ತಮ ಮಳೆ, ಬೆಳೆಗೆ ಪ್ರಾರ್ಥಿಸಿ ವನಭೋಜನ

| Published : Jun 09 2024, 01:35 AM IST

ಉತ್ತಮ ಮಳೆ, ಬೆಳೆಗೆ ಪ್ರಾರ್ಥಿಸಿ ವನಭೋಜನ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಉತ್ತಮ ಮಳೆ, ಬೆಳೆಗಾಗಿ ಜನ ಹಾಗೂ ಜಾನುವಾರುಗಳನ್ನು ರೋಗರುಜಿನಗಳಿಂದ ಸಂರಕ್ಷಿಸುವಂತೆ ಪ್ರಾರ್ಥಿಸಿ ತಾಲೂಕಿನ ಮೊಳೆ ಗ್ರಾಮದ ಪಟ್ಟಲದಮ್ಮ ದೇವಿ ದೇವಸ್ಥಾನದ ಬಳಿ ವನಭೋಜನ ಆಯೋಜಿಸಲಾಗಿತ್ತು.

ಚನ್ನಪಟ್ಟಣ: ಉತ್ತಮ ಮಳೆ, ಬೆಳೆಗಾಗಿ ಜನ ಹಾಗೂ ಜಾನುವಾರುಗಳನ್ನು ರೋಗರುಜಿನಗಳಿಂದ ಸಂರಕ್ಷಿಸುವಂತೆ ಪ್ರಾರ್ಥಿಸಿ ತಾಲೂಕಿನ ಮೊಳೆ ಗ್ರಾಮದ ಪಟ್ಟಲದಮ್ಮ ದೇವಿ ದೇವಸ್ಥಾನದ ಬಳಿ ವನಭೋಜನ ಆಯೋಜಿಸಲಾಗಿತ್ತು.

ಪ್ರತಿ ವರ್ಷ ಉತ್ತಮ ಮಳೆ ಬೆಳೆ ಹಾಗೂ ಕಾಯಿಲೆಗಳಿಂದ ಜನ ಹಾಗೂ ಜಾನುವಾರುಗಳನ್ನು ರಕ್ಷಿಸುವಂತೆ ಪಟ್ಟಲದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ವನಭೋಜನ ಮಾಡುವುದು ಈ ದೇವಿಯ ಪದ್ಧತಿ. ಅದರಂತೆ ಈ ಬಾರಿಯೂ ವನಭೋಜನ ಏರ್ಪಡಿಸಲಾಗಿತ್ತು. ವನಭೋಜನದ ಹಿನ್ನೆಲೆಯಲ್ಲಿ ಪಟ್ಟಲದಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ಬಳಿ ಗ್ರಾಮದ ಪ್ರತಿಯೊಂದು ಮನೆಯಿಂದಲೂ ಒಂದೊಂದು ಒಲೆ ಹಾಕಿ ಅಲ್ಲಿಯೇ ಅಡುಗೆ ತಯಾರಿಸಿ ತಾಯಿಗೆ ನೈವೇದ್ಯ ಅರ್ಪಿಸಿದ ಬಳಿಕ ಗ್ರಾಮಸ್ಥರು ಭಕ್ತಿ ಭಾವದಿಂದ ವನಭೋಜನದಲ್ಲಿ ಪಾಲ್ಗೊಂಡಿದ್ದರು. ಪೊಟೋ೮ಸಿಪಿಟಿ೪:

ಚನ್ನಪಟ್ಟಣ ತಾಲೂಕಿನ ಮೊಳೆ ಗ್ರಾಮದಲ್ಲಿ ವನಭೋಜನ ಆಯೋಜಿಸಲಾಗಿತ್ತು.