ನಗರ ಬಿಜೆಪಿ ವತಿಯಿಂದ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ನಾಡಿನಾದ್ಯಂತ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ದೇವರಿಗೆ ಸೀಯಾಳ ಅಭಿಷೇಕ ಸೋಮವಾರ ನೆರವೇರಿತು.
ಉಡುಪಿ: ನಗರ ಬಿಜೆಪಿ ವತಿಯಿಂದ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ನಾಡಿನಾದ್ಯಂತ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ದೇವರಿಗೆ ಸೀಯಾಳ ಅಭಿಷೇಕ ಸೋಮವಾರ ನೆರವೇರಿತು.ಈ ಸಂದರ್ಭ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ ಕರಾವಳಿ ಜಿಲ್ಲೆ ಸಹಿತ ರಾಜ್ಯದಾದ್ಯಂತ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಬನ್ನಂಜೆ ಮಹಾಲಿಂಗೇಶ್ವರ ದೇವರಿಗೆ ಸೀಯಾಳ ಅಭಿಷೇಕ ನಡೆಸುವ ಸಂಕಲ್ಪ ಮಾಡಿದ್ದು, ಇಂದು ಬೆಳಿಗ್ಗೆಯಿಂದಲೇ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ಸಂತಸ ತಂದಿದೆ ಎಂದರು.ಉಡುಪಿ ನಗರ ಬಿಜೆಪಿ ಅಧಕ್ಷ ದಿನೇಶ್ ಅಮೀನ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಅಶೋಕ್ ನಾಯ್ಕ್, ಸವಿತಾ ಹರೀಶ್ ರಾಮ್, ರಶ್ಮಿ ಸಿ. ಭಟ್, ಅನಿಟ ಡಿಸೋಜ, ಟಿ. ಜಿ. ಹೆಗ್ಡೆ, ಮಂಡಲದ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಪಕ್ಷದ ಪ್ರಮುಖರಾದ ಡೆನಿಸ್ ಮಸ್ಕರೇನ್ಹಸ್, ಕಿಶೋರ್ ಕುಮಾರ್, ಆನಂದ ಮಠದಬೆಟ್ಟು, ಶಂಕರ ಕುಲಾಲ್, ನೀತಾ ಪ್ರಭು, ಶ್ರೀವತ್ಸ, ಅರುಣ್ ಮಲ್ಪೆ, ಹಿಂದೂ ಯುವ ಸೇನೆಯ ಜಿಲ್ಲಾಧ್ಯಕ್ಷ ಅಜಿತ್ ಕೊಡವೂರು ಮತ್ತಿತರರಿದ್ದರು.