ಪ್ರಸವಪೂರ್ವ ಲಿಂಗ ಪರೀಕ್ಷೆ ಕ್ರಿಮಿನಲ್ ಪ್ರಕರಣ ದಾಖಲು

| Published : Jan 30 2025, 01:46 AM IST

ಪ್ರಸವಪೂರ್ವ ಲಿಂಗ ಪರೀಕ್ಷೆ ಕ್ರಿಮಿನಲ್ ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

Prenatal sex testing criminal case filed

-ಬೀದರ್‌ನಲ್ಲಿ ಡಿಎಚ್ಒ ಡಾ.ಧ್ಯಾನೇಶ್ವರ ನಿರಗುಡೆ ಸಭೆಯಲ್ಲಿ ಎಚ್ಚರಿಕೆ । ಜಿಲ್ಲೆಯಲ್ಲಿರುವ ಸುಮಾರು 118 ಸ್ಕ್ಯಾನಿಂಗ್ ಕೇಂದ್ರಗಳು

-----

ಕನ್ನಡಪ್ರಭ ವಾರ್ತೆ ಬೀದರ್

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಪ್ರಸವಪೂರ್ವ ಲಿಂಗ ಪರೀಕ್ಷೆ ವಿಧಾನ ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೇ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನಿರಗುಡೆ ತಿಳಿಸಿದರು.

ಡಿಎಚ್‌ಒ ಕಚೇರಿ ಸಭಾಂಗಣದಲ್ಲಿಂದು ಈ ಕುರಿತು ಜರುಗಿದ ಪಿ.ಸಿ. ಹಾಗೂ ಪಿ.ಎನ್.ಡಿ.ಟಿ. ಕಾಯ್ದೆ 1994 (ಗರ್ಭಧಾರಣಾ ಹಾಗೂ ಪ್ರಸನ ಪೂರ್ವ ಪತ್ತೆ ತಂತ್ರ ವಿಧಾನಗಳ ಅಧಿನಿಯಮ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂರು ತಿಂಗಳಿಗೊಮ್ಮೆ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಿಗೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಿಲೀಪ ಡೊಂಗ್ರೆ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುತ್ತದೆ. ಪ್ರತಿ ಸ್ಕ್ಯಾನಿಂಗ್ ಕೇಂದ್ರವು ಅಗತ್ಯ ದಾಖಲಾತಿಗಳನ್ನು ಇಡಬೇಕಾಗುತ್ತದೆ.

ಒಟ್ಟು 72 ಕೇಂದ್ರಗಳಲ್ಲಿ ಗರ್ಭ ತಪಾಸಣೆ ನಡೆಸಲಾಗುತ್ತಿದೆ. ಗರ್ಭಕ್ಕೆ ಯಾವುದಾದರೂ ಲೋಪದೋಷ ಇರುವ ಬಗ್ಗೆ ತಪಾಸಣೆಗೆ ಒಳಪಡುವ ಮಹಿಳೆಯ ಎಲ್ಲ ವಿವರದ ರಜಿಸ್ಟರ್, ನಾಲ್ಕು ಕಾಲಂ ರಜಿಸ್ಟರ್, ಬಿಲ್ ಬುಕ್ ಕಡ್ಡಾಯವಾಗಿ ಇಡಬೇಕಾಗುತ್ತದೆ. ಕೆಲವೆಡೆ ಸಣ್ಣ ಪುಟ್ಟ ಲೋಪದೋಷ ಕಂಡುಬಂದವರಿಗೆ ನೋಟೀಸ್ ಈಗಾಗಲೇ ನೀಡಲಾಗಿದೆಯೆಂದು ಸಭೆಗೆ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಅನೇಕ ಲಂಬಾಣಿ ತಾಂಡಾಗಳಿದ್ದು, ಬಗದಲ್, ಹೊನ್ನಿಕೇರಿ ಅಂತಹ ತಾಂಡಾಗಳಲ್ಲಿ ಗಂಡು, ಹೆಣ್ಣು ಅನುಪಾತ ತೀರ ಕಡಿಮೆ ಇದೆ, ಹೆಣ್ಣು ಅನುಪಾತ ತೀರ ಕುಸಿತದ ಬಗ್ಗೆ ನಿಗಾವಹಿಸಿ ಮಾಹಿತಿ ಸಂಗ್ರಹಿಸಬೇಕೆಂದು ಜಿಲ್ಲಾ ತಪಾಸಣಾ ಹಾಗೂ ಪರಿಶೀಲನಾ ಸಮಿತಿ ಹಾಗೂ ಸಲಹಾ ಸಮಿತಿ ಸದಸ್ಯ, ವಕೀಲರಾದ ಉಮೇಶ ಪಾಂಡ್ರೆ ಸಭೆಯ ಗಮನಕ್ಕೆ ತಂದರು.

ಆಶಾ ಕಾರ್ಯಕರ್ತೆಯರು ಪ್ರತಿ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯರ ಬಗ್ಗೆ ನಿಗಾ ವಹಿಸಬೇಕು. ಭ್ರೂಣ ಹತ್ಯೆ ಲಿಂಗ ತಪಾಸಣೆ ನಿಷೇಧ ಬಗ್ಗೆ ಗರ್ಭಿಣಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ತಾಲೂಕು ಮಟ್ಟದಲ್ಲಿ ಸಭೆ ನಡೆಸುವಂತೆ ಡಿಎಚ್‌ಒ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಬಗ್ಗೆ ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನಿಂದ ಚೈತನ್ಯಶ್ರೀ ಪ್ರಶಸ್ತಿ ಪಡೆದ ಡಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾಗಿರುವ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಆರತಿ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಮಕ್ಕಳ ತಜ್ಞ ಡಾ.ಸೋಹೆಲ್, ರೆಡಿಯೋಲಾಜಿಸ್ಟ್ ಡಾ.ಅಮಿತ ಶಾಹ, ಮಲ್ಲಿಕಾರ್ಜುನ, ಮಂಜುಳಾ ಮಾಳೆ, ವಿನಯಕುಮಾರ ಮಾಳಗೆ ಸಭೆಯಲ್ಲಿ ಪಾಲ್ಗೊಂಡಿದ್ದರು.

----

ಫೋಟೊ: ಚಿತ್ರ 29ಬಿಡಿಆರ್50

ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನಿಂದ ಚೈತನ್ಯಶ್ರೀ ಪ್ರಶಸ್ತಿ ಪಡೆದ ಡಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿಯ ಸದಸ್ಯರಾಗಿರುವ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಆರತಿ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.