ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತಯಾರಾಗಿ: ಡಾ. ಶ್ರೀನಿವಾಸ್‌

| Published : Mar 11 2024, 01:17 AM IST

ಸಾರಾಂಶ

ಕೂಡ್ಲಿಗಿಯಲ್ಲಿ ಮಾಜಿ ಶಾಸಕ ದಿ. ಎನ್.ಟಿ. ಬೊಮ್ಮಣ್ಣ ಸ್ಮರಣಾರ್ಥ ಆರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕೋಚಿಂಗ್ ಸೆಂಟರ್‌ಗೆ ಚಾಲನೆ ನೀಡಲಾಯಿತು.

ಕೂಡ್ಲಿಗಿ: ನಮ್ಮ ತಂದೆ, ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರ ಸ್ಮರಣಾರ್ಥ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಮರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಬೇಕೆಂಬ ಕನಸು ಇದೀಗ ನನಸಾಗಿದೆ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಕೆಕೆಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕಟ್ಟಡದಲ್ಲಿ ಮಾಜಿ ಶಾಸಕ ದಿ. ಎನ್.ಟಿ. ಬೊಮ್ಮಣ್ಣ ಸ್ಮರಣಾರ್ಥ ಆರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕೋಚಿಂಗ್ ಸೆಂಟರ್‌ಗೆ ಚಾಲನೆ ನೀಡಿ ಮಾತನಾಡಿದರು.

ಪದವಿ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದು, ಸ್ಥಳೀಯವಾಗಿ ತರಬೇತಿ ಪಡೆಯುವಂಥ ಸೌಕರ್ಯ ಇಲ್ಲದಿರುವುದು ಬಹುತೇಕರು ಹಿಂದುಳಿಯುತ್ತಿದ್ದಾರೆ. ನಮ್ಮ ತಾಲೂಕು ಹಿಂದುಳಿದಿದ್ದರೂ, ಶೈಕ್ಷಣಿಕ ಪ್ರಗತಿಯಲ್ಲಿ ಮುಂದಾಗಬೇಕು ಎಂಬ ಉದ್ದೇಶದಿಂದ ಈ ಭಾಗದ ಬಡವರ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲೆಂದು ಕೋಚಿಂಗ್ ಸೆಂಟರ್ ಆರಂಭಿಸಿದ್ದು, ಇದು ಎಂದಿಗೂ ನಿಲ್ಲುವುದಿಲ್ಲ ಎಂದರು.ಕಾಂಗ್ರೆಸ್ ಯುವ ಮುಖಂಡ ಎನ್.ಟಿ. ತಮ್ಮಣ್ಣ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಬೀಜ ನಿಗಮದ ಸದಸ್ಯ ನಾಗರಕಟ್ಟೆ ಸಾವಜ್ಜಿ ರಾಜೇಂದ್ರಪ್ರಸಾದ್, ಪಪಂ ಸದಸ್ಯ ಕಾವಲಿ ಶಿವಪ್ಪ ನಾಯಕ, ಉಪನ್ಯಾಸಕ ಕೊಟ್ರಪ್ಪನವರ ನಾಗರಾಜ ಮಾತನಾಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ಪಪೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯಜನ್ನು, ಕಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಕುಮಾರಗೌಡ, ಮುಖಂಡರಾದ ಟಿ.ಜಿ. ಮಲ್ಲಿಕಾರ್ಜುನಗೌಡ, ಕಾನಮಡುಗು ಕೆ.ಎಂ. ಶಶಿಧರ, ಬಣವಿಕಲ್ಲು ಎರಿಸ್ವಾಮಿ, ಗುಡೇಕೋಟೆ ವಿಶಾಲಾಕ್ಷಿ ರಾಜಣ್ಣ, ತೂಲಹಳ್ಳಿ ಶಾಂತನಗೌಡ, ದಿನ್ನೆ ಮಲ್ಲಿಕಾರ್ಜುನ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವೇಶ್ವರ, ಉಪಾಧ್ಯಕ್ಷ ಜಿ.ಆರ್. ಸಿದ್ದೇಶ್, ಕಾನಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಎ.ಸಿ. ಚೇತನ್, ಜಿ. ಓಬಣ್ಣ, ಕುರಿಹಟ್ಟಿ ಬೋಸಣ್ಣ, ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ, ಕೆ.ಎನ್. ದಿನಕರ, ರಾಮದುರ್ಗ ಮಾಬುಸಾಬ್ ಸೇರಿ ಇತರರಿದ್ದರು.