ಸಾರಾಂಶ
ಮಣ್ಣಿನ ಫಲವತ್ತತೆ ಕಾಪಾಡಲು ಪೂರ್ವಿಕರ ಹಾಗೆ ಸಾವಯವ ಕೃಷಿ ಮಾಡಿ ಮುಂದಿನ ಪೀಳಿಗೆಗೆ ಕೃಷಿ ಭೂಮಿ ಉಳಿಸಿ ಸಂರಕ್ಷಿಸಬೇಕಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಅನ್ನ ಬೆಳೆಯುವ ಭೂಮಿ ದೇವರು. ಅದರಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಗೂ ಗಾಜಿನ ಚೂರುಗಳನ್ನು ಹಾಕಬಾರದು. ದೀಪಾವಳಿ ಹಬ್ಬದಲ್ಲಿ ಗೋವುಗಳ ಸಗಣಿಯ ಕೆರಕನನ್ನು ಹೂಗಳಿಂದ ಪೂಜಿಸುವುದೇ ಭೂಮಿ ಪೂಜೆ ಆಗಿತ್ತು. ಈಗಲೂ ನಮ್ಮ ಹಳ್ಳಿಗಳಲ್ಲಿ ಈ ಸಂಪ್ರದಾಯವಿದೆ. ಮನುಷ್ಯನ ಆರೋಗ್ಯ ಎಷ್ಟು ಮುಖ್ಯವೋ ಹಾಗೆಯೇ ಭೂಮಿಯ ಆರೋಗ್ಯವು ಆರೋಗ್ಯವೂ ಮುಖ್ಯ. ಪ್ರತಿಯೊಬ್ಬರೂ ಭೂಮಿಯ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಣ್ಣಿನ ಫಲವತ್ತತೆ ಕಾಪಾಡಲು ಪೂರ್ವಿಕರ ಹಾಗೆ ಸಾವಯವ ಕೃಷಿ ಮಾಡಿ ಮುಂದಿನ ಪೀಳಿಗೆಗೆ ಕೃಷಿ ಭೂಮಿ ಉಳಿಸಿ ಸಂರಕ್ಷಿಸಬೇಕಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ತಾಲೂಕಿನ ಬಾಗೂರು ಹೋಬಳಿಯ ಓಬಳಾಪುರ ಗ್ರಾಮದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಹಾಗೂ ರಾಗಿ ಬೆಳೆ ಕ್ಷೇತ್ರೋತ್ಸವ, ಕೃಷಿ ಪರಿಕರಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.ಅನ್ನ ಬೆಳೆಯುವ ಭೂಮಿ ದೇವರು. ಅದರಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಗೂ ಗಾಜಿನ ಚೂರುಗಳನ್ನು ಹಾಕಬಾರದು. ದೀಪಾವಳಿ ಹಬ್ಬದಲ್ಲಿ ಗೋವುಗಳ ಸಗಣಿಯ ಕೆರಕನನ್ನು ಹೂಗಳಿಂದ ಪೂಜಿಸುವುದೇ ಭೂಮಿ ಪೂಜೆ ಆಗಿತ್ತು. ಈಗಲೂ ನಮ್ಮ ಹಳ್ಳಿಗಳಲ್ಲಿ ಈ ಸಂಪ್ರದಾಯವಿದೆ. ಮನುಷ್ಯನ ಆರೋಗ್ಯ ಎಷ್ಟು ಮುಖ್ಯವೋ ಹಾಗೆಯೇ ಭೂಮಿಯ ಆರೋಗ್ಯವು ಆರೋಗ್ಯವೂ ಮುಖ್ಯ. ಪ್ರತಿಯೊಬ್ಬರೂ ಭೂಮಿಯ ಸಂರಕ್ಷಣೆಗೆ ಮುಂದಾಗಬೇಕು ಎಂದರು.ಚನ್ನರಾಯಪಟ್ಟಣ ತಾಲೂಕು ಪ್ರಪಂಚದಲ್ಲೇ ತಂಪಾದ ತಾಪಮಾನಕ್ಕೆ ಮೊದಲನೇ ಸ್ಥಾನದಲ್ಲಿದೆ ಎಂದು ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ತಿಳಿದು ಬಂದಿದೆ. ತಾಲೂಕಿನ ೧೦೦ ಕೆರೆಗಳಿಗೆ ಹೇಮಾವತಿ ನದಿ ನೀರಿನ ಏತ ನೀರಾವರಿ ಯೋಜನೆ ಕಲ್ಪಿಸಿ ಎಲ್ಲ ಕೆರೆಗಳಿಗೂ ನೀರು ಹರಿಸಿದ್ದರಿಂದ ತಾಪಮಾನ ಕಡಿಮೆಯಾಗಿದೆ. ರೈತರ ಕೃಷಿ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗಿದೆ ಎಂದರು.ಚೀನಾ ದೇಶದಲ್ಲಿ ನೀರು ನಿಲ್ಲದ ಹಾಗೆ ಕಡಿಮೆ ನೀರಿನಲ್ಲಿ ಭತ್ತ ಬೆಳೆಯುತ್ತಾರೆ. ಹೊಂಗೆಯ ಮರ, ಸೆಣಬಿನ ಹಸಿರೆಲೆ ಗೊಬ್ಬರ ಮಾಡಿ ಬೆಳೆ ಬೆಳೆಯಬೇಕು ಎಂದರು. ನಾನು ಸಹ ಪದವಿ ಮುಗಿಸಿ ಕೃಷಿಕನಾಗಿ ೪೦೦ ಟನ್ ಕಬ್ಬು, ನೂರಾರು ಚೀಲ ಭತ್ತ ಬೆಳೆಯುತ್ತಿದ್ದೆ. ರೈಸ್ ಮಿಲ್ ಇತ್ತು. ಆಕಸ್ಮಿಕವಾಗಿ ರಾಜಕೀಯ ಬಂದವನು ಈಗಲೂ ಕೃಷಿಯಲ್ಲಿ ಒಲವಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಮೋಹನ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಕ್ಷಿತ್ ನಾಯಕ್, ಮುಖಂಡರಾದ ಬಿ.ಎಚ್.ಶಿವಣ್ಣ, ಎನ್.ಬಸವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್, ಮಾಜಿ ಅಧ್ಯಕ್ಷ ಮಹಾಲಿಂಗೇಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ. ಜಯರಾಮ್, ಉಪಾಧ್ಯಕ್ಷ ಪ್ರತೀಪ್, ತಮ್ಮಯಣ್ಣ, ಮಾಜಿ ಅಧ್ಯಕ್ಷರಾದ ಟಿ.ಎಂ.ಗಿರೀಶ್, ಟಿ.ವಿ.ಬಸವರಾಜ್, ಹೇಮರಾಜ್, ನಾಗೇಶ್, ಚಂದ್ರಶೇಖರ್, ತಿಮ್ಮೇಗೌಡ ಹಾಜರಿದ್ದರು.