ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರು ಕ್ಷೇತ್ರ ಕೊರಟಗೆರೆ ಪಪಂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅನಿತಾ ಅವರು ಅವಿರೋಧವಾಗಿ ಆಯ್ಕೆ ಮಾಡುವುದರ ಮೂಲಕ ಕೊರಟಗೆರೆ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಬೀತು ಮಾಡಿದ್ದಾರೆ. ಕೊರಟಗೆರೆ ಪಪಂಯಲ್ಲಿ ಒಟ್ಟು ೧೫ ಸ್ಥಾನಗಳಿದ್ದು ೧೪ ಸದಸ್ಯರನ್ನು ಒಳಗೊಂಡಿದ್ದು ಕಾಂಗ್ರೆಸ್ ಪಕ್ಷದ ೫ ಸದಸ್ಯರು, ಜೆಡಿಎಸ್ ಪಕ್ಷದ ೭ ಸದಸ್ಯರು, ಬಿಜೆಪಿ ೧ ಹಾಗೂ ಒಬ್ಬ ಪಕ್ಷೇತರ ಸದಸ್ಯ ಇದ್ದು ಪಪಂ ಎರಡನೇ ಅವದಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಠ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ೩ನೇ ವಾರ್ಡ್‌ನ ಸದಸ್ಯೆ ಅನಿತಾ ಏಕೈಕ ಅಭ್ಯರ್ಥಿ ಇದ್ದರೂ ಅವರು ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷರಾದರು. ಅದೇ ರೀತಿ ೨ನೇ ವಾರ್ಡ್‌ನ ಜೆಡಿಎಸ್ ಸದಸ್ಯೆ ಉಸ್ಮಾ ಫರೀಯಾ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ ಕೊರಟಗೆರೆ ಪಟ್ಟಣ ಪಂಚಾಯಿತಿಯ ಕಾಂಗ್ರೆಸ್ ಪಕ್ಷದಿಂದ ನೂತನ ಅಧ್ಯಕ್ಷರಾಗಿ ಅನಿತಾ ಮತ್ತು ಉಪಾಧ್ಯಕ್ಷರಾಗಿ ಉಸ್ಮಾಫಾರಿಯಾ ಅವಿರೋಧವಾಗಿ ಆಯ್ಕೆ ಯಾಗಿರುವುದು ಸಂತಸ ತಂದಿದೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ೫ ಮಂದಿ ಸದಸ್ಯರೊಂದಿಗೆ ಜೆಡಿಎಸ್ ಪಕ್ಷದ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯೆ ಮಂಜುಳಾ ಸೇರಿ ೩ ಸದಸ್ಯರು ಹಾಗೂ ನಟರಾಜು ಪಕ್ಷೇತರ ಸದಸ್ಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಸೇರ್ಪಡೆ ಯಾಗಿದ್ದು ಪಕ್ಷಕ್ಕೆ ಪಟ್ಟಣ ಪಂಚಾಯಿತಿಯಲ್ಲಿ ಮತ್ತಷ್ಟು ಬಲ ಬಂದಿದೆ ಎಂದರು.ನೂತನ ಅಧ್ಯಕ್ಷ ಅನಿತಾ ಮಾತನಾಡಿ ಕೊರಟಗೆರೆಯ ಅಭಿವೃದ್ದಿಗೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ಮಾರ್ಗದರ್ಶನ ಮತ್ತು ಸಹಕಾರ ದೃಷ್ಠಿಯಿಂದ ಅವರೊಂದಿಗೆ ಕೈ ಜೋಡಿಸಿದ್ದೇನೆ ಹಾಗೂ ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಕೊರಟಗೆರೆ ಪಟ್ಟಣದ ಅಭಿವೃದ್ದಿ ಮಾಡಲಾಗುವುದು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ನನ್ನ ಅಧ್ಯಕ್ಷ ಸ್ಥಾನ ಆಯ್ಕೆಗೆ ಸಹಕರಿಸಿದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಗೆ ಮತ್ತು ಪ.ಪಂ. ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಉಪಾಧ್ಯಕ್ಷ ಉಸ್ಮಾಫಾರಿಯಾ ಮಾತನಾಡಿ ಡಾ.ಜಿ.ಪರಮೇಶ್ವರ ರವರ ಮೇಲೆ ವಿಶ್ವಾಸವಿಟ್ಟು ಪಟ್ಟಣದ ಅಭಿವೃದ್ದಿಗಾಗಿ ಅವರ ಬೆಂಬಲವಾಗಿ ಉಪಾಧ್ಯಕ್ಷೆಯಾಗಿದ್ದೇನೆ, ಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ಅಧ್ಯಕ್ಷರ ಜೋತೆಗೂಡಿ ಸದಸ್ಯರ ಸಹಕಾರದೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಸದಸ್ಯರಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ನಂದೀಶ್, ಹೇಮಲತಾ, ಮಂಜುಳಾ, ನಟರಾಜು, ಫಯಾಜ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆಶಂಕರ್, ನಗರ ಸಭಾ ಮಾಜಿ ಉಪಾಧ್ಯಕ್ಷ ವಾಲೇಚಂದ್ರಯ್ಯ, ಕೆ.ಪಿ.ಸಿ.ಸಿ ಕಾರ್ಯದರ್ಶಿ ದಿನೇಶ್, ಮುಖಂಡರಾದ ಲಾರಿಸಿದ್ದಪ್ಪ, ಗಣೇಶ್, ಎಚ್.ಎಂ.ರುದ್ರಪ್ರಸಾದ್, ಕೆ.ವಿ.ಮಂಜುನಾಥ್, ವಿನಯ್‌ಕುಮಾರ್ ಕೆ.ಎಲ್.ಆನಂದ್, ತುಂಗಾ ಮಂಜುನಾಥ್, ಮಕ್ತಿಯಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಮ್ಮ, ಸೇರಿದಂತೆ ಇತರರು ಇದ್ದರು.