ಪಿಎಸ್‌ಐ ಮಂಜುನಾಥ್‌ಗೆ ರಾಷ್ಟ್ರಪತಿ ಪದಕ

| Published : Aug 15 2024, 01:50 AM IST

ಸಾರಾಂಶ

ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯ ಬೆರಳು ಮುದ್ರೆ ಘಟಕದ ಪೊಲೀಸ್ ಉಪ ನಿರೀಕ್ಷಕ ಮಂಜುನಾಥ ಎಸ್. ಕಲ್ಲೇದೇವರ ಅವರಿಗೆ 2024ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಪೊಲೀಸ್ ಸೇವಾ ಪದಕ ಲಭಿಸಿದೆ.

ದಾವಣಗೆರೆ: ಜಿಲ್ಲಾ ಪೊಲೀಸ್ ಇಲಾಖೆಯ ಬೆರಳು ಮುದ್ರೆ ಘಟಕದ ಪೊಲೀಸ್ ಉಪ ನಿರೀಕ್ಷಕ ಮಂಜುನಾಥ ಎಸ್. ಕಲ್ಲೇದೇವರ ಅವರಿಗೆ 2024ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಪೊಲೀಸ್ ಸೇವಾ ಪದಕ ಲಭಿಸಿದೆ.

ಮಂಜುನಾಥ ಎಸ್. ಕಲ್ಲೇದೇವರಪುರ 2002ರ ಬ್ಯಾಚ್‌ನವರು. ಹಾವೇರಿ ಜಿಲ್ಲೆ, ಬೆಳಗಾವಿ ನಗರ, ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸಿದ್ದರು. ಈಗ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯ ಬೆರಳು ಮುದ್ರೆ ಘಟಕದ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಿಎಸ್ಐ ಮಂಜುನಾಥ ಕಲ್ಲೇದೇವರ ಜಿಲ್ಲೆಯಲ್ಲಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2017ರಲ್ಲಿ ಅತ್ಯುತ್ತಮ ಸೇವೆಗೆ ನೀಡಲಾಗುವ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪದಕಕ್ಕೆ ಪಾತ್ರರಾಗಿದ್ದ ಮಂಜುನಾಥ ಕಲ್ಲೇದೇವರ ಇದೀಗ ರಾಷ್ಟ್ರಪತಿಗಳ ಶ್ಲಾಘನೀಯ ಪೊಲೀಸ್ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಮಂಜುನಾಥ ಕಲ್ಲೇದೇವರ್‌ರನ್ನು ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಅಧಿಕಾರಿ, ಸಿಬ್ಬಂದಿ ಅಭಿನಂದಿಸಿದ್ದಾರೆ.

- - - -14ಕೆಡಿವಿಜಿ28, 29:

ಮಂಜುನಾಥ ಎಸ್. ಕಲ್ಲೇದೇವರ