ಆರ್‌.ಎಸ್‌.ಎಸ್‌ದು ರಾಷ್ಟ್ರದ್ರೋಹವೋ, ರಾಷ್ಟ್ರಭಕ್ತಿಯೋ

| Published : Oct 19 2025, 01:00 AM IST

ಸಾರಾಂಶ

ಬಡತನ, ಜಾತಿ ವ್ಯವಸ್ಥೆ ಹೋಗಲಾಡಿಸಲು ಆರ್.ಎಸ್.ಎಸ್ ಕೊಡುಗೆ ನೀಡಿಲ್ಲ. ದೇಶವನ್ನು ಬಲಿಷ್ಠಗೊಳಿಸಲು ಕೊಡುಗೆ ಇಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಆರ್‌ಎಸ್ಎಸ್ ನೋಂದಾಯಿಸಿಕೊಳ್ಳದೆ ದೇಶಾದ್ಯಂತ ಅನೇಕಾರು ಶಾಖೆಯನ್ನು ಹೊಂದಿ ಕೆಲಸ ಮಾಡುತ್ತಿರುವುದು ರಾಷ್ಟ್ರದ್ರೋಹವೋ, ರಾಷ್ಟ್ರಭಕ್ತಿಯೋ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು.ನಗರ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಆರ್‌.ಎಸ್‌.ಎಸ್‌ ಆರಂಭವಾಗಿ ನೂರು ವರ್ಷವಾಗಿದೆ. ಸಂಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಸರ್ಟಿಫಿಕೇಟ್‌ ನೀಡಿದ್ದಾರೆ. ಆದರೆ ಭಾರತದ ಸ್ವಾತಂತ್ರ್ಯ ಚಳವಳಿಗಾಗಲಿ, ಸಂವಿಧಾನ ರಚನೆಗಾಗಲಿ ಈ ಸಂಸ್ಥೆಯ ಕಾಣಿಕೆ ಏನು ಎಂದು ಪ್ರಶ್ನಿಸಿದರು.ಬಡತನ, ಜಾತಿ ವ್ಯವಸ್ಥೆ ಹೋಗಲಾಡಿಸಲು ಆರ್.ಎಸ್.ಎಸ್ ಕೊಡುಗೆ ನೀಡಿಲ್ಲ. ದೇಶವನ್ನು ಬಲಿಷ್ಠಗೊಳಿಸಲು ಕೊಡುಗೆ ಇಲ್ಲ. ದೇಶಾದ್ಯಂತ ನೂರಾರು ಶಾಖೆಯನ್ನು ಹೊಂದಿದೆ. ಸಾಕಷ್ಟು ದೇಣಿಗೆಯನ್ನು ಪಡೆಯುತ್ತಿದೆ. ಇದಕ್ಕೆ ಲೆಕ್ಕಪತ್ರ ಇಲ್ಲವೇ? ಕೂಡಲೇ ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.ರಾಷ್ಟ್ರದಲ್ಲಿ ಮತಗಳ್ಳತನ ಮತ್ತು ಆರ್‌.ಎಸ್‌.ಎಸ್‌. ಶತಮಾನೋತ್ಸವ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಬಿಜೆಪಿ, ಆರ್‌ಎಸ್‌ಎಸ್, ಬಜರಂಗದಳ, ಭಾರತೀಯ ಮಜ್ದೂರು ಸೇರಿ 42 ಸಂಘಟನೆಗಳಿವೆ. ಇದರಲ್ಲಿ 3800 ಮಂದಿ ಪೂರ್ಣ ಪ್ರಮಾಣದಲ್ಲಿ ದುಡಿಯುತ್ತಿದ್ದಾರೆ. ಇವರೆಲ್ಲರ ಲೆಕ್ಕಪತ್ರ ಕೊಡುವವರು ಯಾರು? ಮತದ ಆಧಾರ ಮೇಲೆ ಸಮಾಜ ಒಡೆಯುವ ಕೆಲಸಮಾಡುತ್ತಿದ್ದೀರಿ. ಜಾತಿ ವ್ಯವಸ್ಥೆ ಜಾರಿ ಮಾಡುತ್ತಾ, ಶ್ರೇಣಿಕೃತ ವ್ಯವಸ್ಥೆ ಮಾಡಿದ್ದಿರಿ. ಒಬ್ಬನೇ ಒಬ್ಬ ದಲಿತನನ್ನು ಆರ್.ಎಸ್.ಎಸ್ ಸರಸ್ವತಿ ಚಾಲಕರನ್ನಾಗಿ ಮಾಡಿದ್ದಿರಾ? ಎಂದು ಅವರು ಕೇಳಿದರು.ಆರ್.ಎಸ್.ಎಸ್ ಅನ್ನು ಬ್ರಾಹ್ಮಣರ ಸ್ವಯಂ ಸೇವಕ ಸಂಘ ಎಂದು ಕರೆಯಬಹುದು. ಕರ್ನಾಟಕ ಸಿವಿಲ್ ಸರ್ವೀಸಸ್ ನಿಯಮದ ಅಡಿ ರಾಜಕೀಯ, ಮತೀಯ ಸಂಘಟನೆಗಳಂತೆ ಇರಬಾರದು ಎಂಬಂತೆ ಇದೆ. ಆದರೆ, ಕ್ಲಾಸ್ 4 ರಿಂದ ಕ್ಲಾಸ್‌1 ರವರೆಗೆ ಆರ್.ಎಸ್‌.ಎಸ್ ನವರನ್ನೇ ತುಂಬಿದ್ದೀರಿ, ಅವರು ಸಮಾಜಕ್ಕೆ ಪೂರಕ ಆಗುವುದಿಲ್ಲ. ಈಗ ನಡಯುತ್ತಿರುವುದು ವೈಚಾರಿಕ ಸಂಘರ್ಷ ಹೊರತು, ವೈಯಕ್ತಿಕ ಸಂಘರ್ಷ ಅಲ್ಲ ಎಂದರು.ಈ ಹಿನ್ನೆಲೆಯಲ್ಲಿ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಹಾಕುತ್ತಿರುವುದು, ಗಾಂಧಿ ಕೊಂದ ನಿಮ್ಮ ಮನಸ್ಥಿತಿ ನೂರು ವರ್ಷದ ನಂತರವೂ ಹೋಗಿಲ್ಲ ಎಂಬುದು ತೋರಿಸುತ್ತದೆ. ಈ ಮನಸ್ಥಿತಿ ಬಿಡಿ ಇಲ್ಲದಿದ್ದರೆ ಜನರೇ ನಿಮಗೆ ಪಾಠ ಕಲಿಸುತ್ತಾರೆ. ಹಿಂಸೆ, ಮತೀಯ ಮನಸ್ಥಿತಿ ಇರುವವರನ್ನು ಮೋಹನ್ ಭಾಗವತ್, ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ನೊಂದಾಯಿತ ಸಂಸ್ಥೆಯಲ್ಲದ ಸಂಘಟನೆ ನಡೆಯಲು ಹೇಗೆ ಬಿಟ್ಟಿದ್ದೀರಿ ಎಂದು ಅವರು ಪ್ರಶ್ನಿಸಿದರು.ಯಡಿಯೂರಪ್ಪ ಅವರ ಕುಟುಂಬದವರು ವಿದೇಶದಲ್ಲಿ ಕೋಟಿಗಟ್ಟಲೆ ಆಸ್ತಿ ಇಟ್ಟಿದ್ದಾರೆ ಎನ್ನುವ ಶಾಸಕ ಯತ್ನಾಳ್‌ಅವರು ಸಾಕ್ಷಿ ಬಿಡುಗಡೆಗೊಳಿಸಲಿ. ರಾಜ್ಯ ಸರ್ಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ಎಲ್ಲರಿಗೂ ಸೇರಿ ಕಾನೂನು ಜಾರಿಮಾಡಿದೆ. ಇದನ್ನು ಜಾತಿ ಮನಸ್ಥಿತಿಯಿಂದ ನೋಡುವುದು ಬಿಡಿ. ಬಿಜೆಪಿ ಸರ್ಕಾರವು ಬಿಬಿಎಂಪಿ ಆಸ್ತಿಯನ್ನು ಅಡವಿಟ್ಟು, ಅಭಿವೃದ್ಧಿ ಮಾಡುವುದಾಗಿ ಹೇಳಿದರೂ ಸುಮ್ಮನಾದರು. ಡಿ.ಕೆ. ಶಿವಕುಮಾರ್‌ಅವರು ಹಗಲು, ರಾತ್ರಿ ಎನ್ನದೆ ವೈಟ್‌ಟ್ಯಾಪಿಂಗ್‌ಮಾಡಿ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ ಎಂದರು. ಹೈಕಮಾಂಡ್‌ ತೀರ್ಮಾನ ಅಂತಿಮಮುಖ್ಯಮಂತ್ರಿ ಹುದ್ದೆ ಹಾಗೂ ಅಧಿಕಾರ ಹಂಚಿಕೆ ವಿಚಾರವಾಗಿ ನಮ್ಮಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನ ಅಂತಿಮ. ಸಿಎಂ ಆಯ್ಕೆ ವಿಷಯ ಬಂದಾಗ ಶಾಸಕರೆಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಮುಂಬರುವ ಸ್ಥಳೀಯ, ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಪಕ್ಷದ ಹೈಕಮಾಂಡ್‌ತೀರ್ಮಾನ ಕೈಗೊಳ್ಳುತ್ತದೆ ಎಂದರು.1984 ರಲ್ಲಿ ಎಚ್‌.ಡಿ. ದೇವೇಗೌಡರ ಆದಿಯಾಗಿ 16 ಮಂದಿ ಹಿರಿಯ ರಾಜಕಾರಣಿಗಳಿಂದ ರಾಜೀನಾಮೆ ಕೊಡಿಸಿಕೊಂಡು ಪಕ್ಷದ ಕೆಲಸಕ್ಕೆ ಕಳುಹಿಸಿದರು. ಆದ್ದರಿಂದ ಸಿಎಂಗೆ ಅನುಭವವಿದೆ. 10 ರಿಂದ 20 ವರ್ಷದ ಅಧಿಕಾರ ಅನುಭವ ಇರುವವರನ್ನು ಪಕ್ಷ ಸಂಘಟನೆಗೆ ಕಳುಹಿಸಿಕೊಡಬೇಕು ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ ಎಂದರು.ಹೀಗೆ ಎಲ್ಲಾ ಶಾಸಕರು ಮತ್ತು ಮುಖಂಡರ ಅನುಭವ ಪಡೆದು ಹೈಕಮಾಂಡ್‌ತೀರ್ಮಾನಿಸಬಹುದು ಎಂದರು.ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಜಿ.ಎನ್. ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ವಕ್ತಾರ ಕೆ. ಮಹೇಶ್ ಇದ್ದರು.