ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಮಾರಂಭ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಕೆ. ದೀಪಕ್ ಅಧ್ಯಕ್ಷತೆ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2025ನೇ ಸಾಲಿನ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿಗಳ ಪ್ರದಾನ ಮತ್ತು ಹಿರಿಯ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮವು ಡಿ. 14 ರಂದು ಬೆಳಗ್ಗೆ 11ಕ್ಕೆ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಜರುಗಲಿದೆ ಎಂದು ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ತಿಳಿಸಿದ್ದಾರೆ.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಮಾರಂಭ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಕೆ. ದೀಪಕ್ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತರನ್ನು ಶಾಸಕ ಜಿ.ಟಿ. ದೇವೇಗೌಡ ಸನ್ಮಾನಿಸುವರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡುವರು. ವಿಧಾನ ಪರಿಷತ್ ಕೆ. ಶಿವಕುಮಾರ್ ಅವರನ್ನು ಅಭಿನಂದಿಸಲಾಗುವುದು.
ಪ್ರಧಾನ ಭಾಷಣಕಾರರಾಗಿ ನ್ಯೂಸ್ 18 ಕನ್ನಡ ಸುದ್ದಿ ವಾಹಿನಿಯ ಸಂಪಾದಕ ಎ. ಹರಿಪ್ರಸಾದ್ ಆಗಮಿಸುವರು. ಮುಖ್ಯ ಅತಿಥಿಯಾಗಿ ಶಾಸಕರಾದ ಅನಿಲ್ ಚಿಕ್ಕಮಾದು, ಕೆ. ಹರೀಶ್ ಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಎಸ್ಎಸ್ ಸಮೂಹ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್ ಭಾಗವಹಿಸುವರು.ಹಿರಿಯ ಪತ್ರಕರ್ತರಿಗೆ ಅಭಿನಂದನೆ
ಈ ವರ್ಷದ ಹಿರಿಯ ಪತ್ರಕರ್ತರಾದ ನಗರ ಪ್ರದೇಶದಿಂದ ಜಸ್ಟ್ ಕನ್ನಡ ಸುದ್ದಿ ಸಂಸ್ಥೆಯ ಪ್ರಧಾನ ಸಂಪಾದಕ ವಿ. ಮಹೇಶ್ ಕುಮಾರ್, ಗ್ರಾಮೀಣ ಭಾಗದಿಂದ ಆಂದೋಲನ ದಿನಪತ್ರಿಕೆಯ ಹಿರಿಯ ವರದಿಗಾರ ಟಿ.ಎ. ಸಾದಿಕ್ ಪಾಷ, ವರ್ಷದ ಹಿರಿಯ ಉಪ ಸಂಪಾದಕರಾಗಿ ವಿಜಯ ಕರ್ನಾಟಕ ಪತ್ರಿಕೆಯ ಕೆ.ಎಸ್. ಮಂಜುನಾಥಸ್ವಾಮಿ, ಹಿರಿಯ ಛಾಯಾಗ್ರಾಹಕರಾಗಿ ಇಂಡಿಯನ್ ಎಕ್ಸ್ ಪ್ರೆಸ್‌ನ ಎಸ್. ಉದಯಶಂಕರ್, ದೃಶ್ಯ ಮಾಧ್ಯಮ ವಿಭಾಗದಿಂದ ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಸಿ.ಎಂ. ಮಧುಸೂದನ್, ಛಾಯಾಗ್ರಾಹಕ ಪ್ರಮೋದ್ ಪ್ರಭು ಹಾಗೆಯೇ ಪ್ರತಿಷ್ಠಿತ ಟಿಎನ್ಐಟಿ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಪತ್ರಕರ್ತ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ರವಿ ಪಾಂಡವಪುರ ಮತ್ತು ಟಿವಿ 9 ವಾಹಿನಿಯ ಜಿಲ್ಲಾ ವರದಿಗಾರ ರಾಮ್ ಅವರನ್ನು ಅಭಿನಂದಿಸಲಾಗುವುದು.ಏಳು ಮಂದಿಗೆ ವಾರ್ಷಿಕ ಪ್ರಶಸ್ತಿ
ಈ ಸಾಲಿನ ಅತ್ಯುತ್ತಮ ಕನ್ನಡ ವರದಿಗಾರಿಕೆ ಪ್ರಶಸ್ತಿಗೆ ಆಂದೋಲನ ದಿನಪತ್ರಿಕೆ ದಾ.ರಾ. ಮಹೇಶ್, ಇಂಗ್ಲಿಷ್ ವರದಿಗಾರಿಕೆಗೆ ಸ್ಟಾರ್ ಆಫ್ ಮೈಸೂರ್ ಪತ್ರಿಕೆ ವರದಿಗಾರ ಎ. ಗಣೇಶ್, ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ಎಸ್.ಆರ್. ಮಧುಸೂದನ್, ದೃಶ್ಯ ಮಾಧ್ಯಮ ವಿಭಾಗದಲ್ಲಿ ನ್ಯೂಸ್ 18 ವಾಹಿನಿಯ ಕೆ.ಎಸ್. ಆನಂದ ಮತ್ತು ವಿಡಿಯೋಗ್ರಾಫರ್ ಪಿ. ರಾಹುಲ್ ಹಾಗೂ ಇಂಡಿಯನ್ ಟಿವಿ ವರದಿಗಾರ ಚಂದನ್ ಬಲರಾಮ ಮತ್ತು ವಿಡಿಯೋಗ್ರಫರ್ ಎಲ್. ಸತೀಶ್ ಅವರಿಗೆ ಪ್ರಶಸ್ತಿ ಲಭಿಸಿದೆ.