ಪುನೀತಾಗೆ ಉಚಿತ ಶಿಕ್ಷಣ ನೀಡಲು ಮುಂದಾದ ಪ್ರತಿಷ್ಠಿತ ಕಾಲೇಜುಗಳು

| Published : May 05 2025, 12:50 AM IST

ಪುನೀತಾಗೆ ಉಚಿತ ಶಿಕ್ಷಣ ನೀಡಲು ಮುಂದಾದ ಪ್ರತಿಷ್ಠಿತ ಕಾಲೇಜುಗಳು
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿನಿ ಸಾಧನೆ ಗಮನಿಸಿದ ರಾಮನಗರ ಶಾಂತಿನಿಕೇತನ ಶಾಲೆ, ಮಂಡ್ಯದ ಅಭಿನವ ಭಾರತಿ ಕಾಲೇಜುಗಳು ಉಚಿತ ಶಿಕ್ಷಣ ನೀಡಲು ಮುಂದೆ ಬಂದಿದ್ದು, ಜೊತೆಗೆ ಬೆಂಗಳೂರಿನ ಡಿಆರ್ ಕಾಲೇಜು ಸೇರಿದಂತೆ ಇನ್ನೂ ಹಲವು ಶಿಕ್ಷಣ ಸಂಸ್ಥೆಗಳು ರಿಯಾಯ್ತಿ ಶುಲ್ಕ ಅಥವಾ ಉಚಿತ ಶಿಕ್ಷಣದ ಭರವಸೆ ನೀಡುವೆ ಎಂದು ಪುನೀತ ತಿಳಿಸಿದಳು.

ಕನ್ನಡಪ್ರಭ ವಾರ್ತೆ ಮದ್ದೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವ ಪಟ್ಟಣದ ಪೂರ್ಣ ಪ್ರಜ್ಞಾವಿದ್ಯಾ ಸಂಸ್ಥೆ ವಿದ್ಯಾರ್ಥಿನಿ ಸಿ. ಪುನೀತಾಳಿಗೆ ಉಚಿತ ಶಿಕ್ಷಣ ನೀಡಲು ರಾಜ್ಯದ ಪ್ರತಿಷ್ಠಿತ ಕಾಲೇಜುಗಳು ಮುಂದೆ ಬಂದಿವೆ.

ತಾಲೂಕು ಹುಳುಗನಹಳ್ಳಿಯ ಎಚ್.ಕೆ.ಚಂದ್ರಶೇಖರ್ ಮತ್ತು ಹೇಮಾವತಿ ದಂಪತಿ ಪುತ್ರಿ ಪುನೀತ ಪರೀಕ್ಷೆಯಲ್ಲಿ 625ಕ್ಕೆ 624 (ಶೇ.99.84 ರಷ್ಟು) ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡು ಮಂಡ್ಯ ಜಿಲ್ಲೆ ಮತ್ತು ಮದ್ದೂರು ತಾಲೂಕಿಗೆ ಕೀರ್ತಿ ತಂದಿದ್ದಾಳೆ.

ವಿದ್ಯಾರ್ಥಿನಿ ಸಾಧನೆ ಗಮನಿಸಿದ ರಾಮನಗರ ಶಾಂತಿನಿಕೇತನ ಶಾಲೆ, ಮಂಡ್ಯದ ಅಭಿನವ ಭಾರತಿ ಕಾಲೇಜುಗಳು ಉಚಿತ ಶಿಕ್ಷಣ ನೀಡಲು ಮುಂದೆ ಬಂದಿದ್ದು, ಜೊತೆಗೆ ಬೆಂಗಳೂರಿನ ಡಿಆರ್ ಕಾಲೇಜು ಸೇರಿದಂತೆ ಇನ್ನೂ ಹಲವು ಶಿಕ್ಷಣ ಸಂಸ್ಥೆಗಳು ರಿಯಾಯ್ತಿ ಶುಲ್ಕ ಅಥವಾ ಉಚಿತ ಶಿಕ್ಷಣದ ಭರವಸೆ ನೀಡುವೆ ಎಂದು ಪುನೀತ ತಿಳಿಸಿದಳು.

ಈ ವಿಚಾರಗಳ ಬಗ್ಗೆ ಪೋಷಕರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಗಳಿಸಿ ಐಎಎಸ್ ಅಧಿಕಾರಿಯಾಗಬೇಕೆಂಬ ಛಲ ನನ್ನಲ್ಲಿದೆ. ಹೀಗಾಗಿ ವಿದ್ಯಾಭ್ಯಾಸದ ಸಮಯದಲ್ಲಿ ಟಿವಿ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ಜೊತೆಗೆ ಶಾಲೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೆಚ್ಚಿನ ಸಮಯ ತರಗತಿ ನಡೆಸಿರುವುದು ಹಾಗೂ ಮುಂಜಾನೆ ಮತ್ತು ರಾತ್ರಿ ಓದಿಗೆ ಸಮಯ ಮೀಸಲಿಟ್ಟಿರುವುದು ನನ್ನ ಈ ಶೈಕ್ಷಣಿಕ ಸಾಧನೆಗೆ ನೆರವಾಗಿದೆ ಎಂದು ಕನ್ನಡಪ್ರಭ ಕ್ಕೆ ತಿಳಿಸಿದಳು.

ಕಾರ್ಮೆಲ್ ಪ್ರೌಢಶಾಲೆಗೆ ಉತ್ತಮ ಫಲಿತಾಂಶ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕಾರ್ಮೆಲ್‌ ಕಾನ್ವೆಂಟ್‌ ಪ್ರೌಢಶಾಲೆಗೆ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ. ಎಸ್‌.ಹಿತಾ 622 ಅಂಕಗಳೊಂದಿಗೆ ಶೇ.99.5 ಫಲಿತಾಂಶ ಪಡೆದು ಜಿಲ್ಲೆಗೆ 4ನೇ ಸ್ಥಾನ, ಅಬಿಗೇಲ್ ಗ್ರೇಸ್ 621 ಅಂಕಗಳೊಂದಿಗೆ ಶೇ.99.3 ಗಳಿಸುವ ಮೂಲಕ ಜಿಲ್ಲೆಗೆ 5 ನೇ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. 44 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ, 78 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರನ್ನು ನಮ್ಮ ಸಂಸ್ಥೆಯ ವ್ಯವಸ್ಥಾಪಕಿ ಸಿಸ್ಟರ್ ಅಶ್ವಿನಿ, ಮುಖ್ಯ ಶಿಕ್ಷಕರಾದ ಸಿಸ್ಟರ್ ಮೇರಿ ಪೌಲಿನ್, ಹಿರಿಯ ಶಿಕ್ಷಕರಾದ ಸಂಗೀತ ರಾಜ್, ಸಿಸ್ಟರ್ ಫ್ರಾನ್ಸಿಲಿನ್ ಹಾಗೂ ಎಲ್ಲಾ ಶಿಕ್ಷಕ ವರ್ಗದವರು ಅಭಿನಂದಿಸಿದ್ದಾರೆ.