ಸಾರಾಂಶ
ರಾಮನಗರ: ಜಿಲ್ಲಾ ಶಿಕ್ಷಣ ಮತ್ತುತರಬೇತಿ ಸಂಸ್ಥೆಯ (ಡಿಐಇಟಿ) ಹಿರಿಯ ಉಪನ್ಯಾಸಕರುಗಳ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವ ಜಂಟಿ ಸುತ್ತೋಲೆ ಹಿಂಪಡೆಯುವಂತೆ ಒತ್ತಾಯಿಸಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕರನ್ನು ಭೇಟಿಯಾದ ಪದಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ 2025ರ ಅಕ್ಟೋಬರ್ 18ರಂದು ಹೊರಡಿಸಿರುವ ಸುತ್ತೋಲೆಯನ್ನು ಈ ಕೂಡಲೇ ಹಿಂಡೆಯಬೇಕು ಇಲ್ಲದಿದ್ದರೆ ಅನ್ಯಮಾರ್ಗವಿಲ್ಲದೆ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಪ್ರಾಂಶುಪಾಲರ ಸಂಘದಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಇಲಾಖೆ ನಿರ್ದೇಶಕರು ಹೊರಡಿಸಿರುವ ಜಂಟಿ ಸುತ್ತೋಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗಾವಹಿಸುವ ಉದ್ದೇಶದಿಂದ ಜಿಲ್ಲಾ ಶಿಕ್ಷಣ ಮತ್ತುತರಬೇತಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಉಪನ್ಯಾಸಕರ ಮೂಲಕ ಸ್ಥಳೀಯ ಪರಿಶೀಲನೆಗಳನ್ನು ನಡೆಸುವಂತೆ ತೀರ್ಮಾನಿಸಲಾಗಿದೆ. ಈ ಜಂಟಿಸುತ್ತೋಲೆ ಪದವಿ ಪೂರ್ವ ಶಿಕ್ಷಣದ ಅಸ್ಮಿತೆ, ಗೌರವ ಮತ್ತು ಶೈಕ್ಷಣಿಕ ತತ್ವಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಟೀಕಿಸಿದರು.
ಡಯಟ್ ನ ಹಿರಿಯ ಉಪನ್ಯಾಸಕರು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ವಾಸ್ತವವಾಗಿ ಡಯಟ್‌ನಲ್ಲಿ ಇರುವ ಹುದ್ದೆ ಉಪನ್ಯಾಸಕರ ಹುದ್ದೆ ಅಲ್ಲ ಅದು ಪ್ರಶಿಕ್ಷಕರ ಹುದ್ದೆ. ಅವರ ಸಾಮಾನ್ಯ ವಿದ್ಯಾರ್ಹತೆ B.S.C/B.A. B.ED, KES (Karnataka Education Service) ಡಯಟ್ ನಲ್ಲಿ ಉಪನ್ಯಾಸಕ ಹುದ್ದೆ ಇಲ್ಲ. ಅವರನ್ನು Teacher Educator ಅಂದರೆ ಪ್ರಶಿಕ್ಷಕ ಎಂದು ಸಂಬೋಧನೆ ಮಾಡುತ್ತಾರೆ. ಅವರು ವಿಷಯಕ್ಕೆ ಸಂಬಂದ ಪಟ್ಟಂತೆ ವಿಷಯಾಧಾರಿತ ಬೋಧನಾ ಪದ್ಧತಿ ಪಾಠ ಮಾಡುತ್ತಾರೆಯೇ ವಿನಃ ಅವರಿಗೆ ಪದವಿ ಪೂರ್ವ ಶಿಕ್ಷಣದ ವಿಷಯಕ್ಕೆ ಸಂಬಂಧಪಟ್ಟಂತೆ (10+2) ಆಳವಾದ ಜ್ಞಾನ ಇರುವುದಿಲ್ಲ.ಪದವಿ ಪೂರ್ವ ಶಿಕ್ಷಣ ಹಂತವು ಶಾಲಾ ತರಬೇತಿಯ ವಿಸ್ತರಣೆಯಲ್ಲ. ಅದು ವೈಜ್ಞಾನಿಕ ಆಧಾರಿತ ಸ್ಪರ್ಧಾತ್ಮಕ ಹಾಗೂ ರಾಷ್ಟ್ರ ಮಟ್ಟದ ಪಠ್ಯಕ್ರಮ ಹಾಗೂ ಡಿಐಇಟಿ ಉಪನ್ಯಾಸಕರಿಗೆ ಪದವಿ ಪೂರ್ವ ಪಠ್ಯಕ್ರಮದ ವೈಜ್ಞಾನಿಕ ಹಿನ್ನೆಲೆ ಎನ್ ಸಿಇಆರ್ ಟಿ ಆಧಾರಿತ ವಿಷಯದ ವ್ಯಾಪ್ತಿ ಹಾಗೂ ಆಳವಾದ ಕಲ್ಪನೆಗಳ ಕುರಿತು ಅರಿವು ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಡಯಟ್ ಉಪನ್ಯಾಸಕರ ಕನಿಷ್ಠ ವಿದ್ಯಾರ್ಹತೆ B.S.C/B.A. B.ED ಜೊತೆಗೆ KES ಬಹಳಷ್ಟು ಪ್ರಶಿಕ್ಷಕರಿಗೆ ಸ್ನಾತಕೋತ್ತರ ಪದವಿ NET/SLET/ Mphil, Phd ಇತ್ಯಾದಿ ಪದವಿಗಳು ಇರುವುದಿಲ್ಲ. ಇನ್ನು ಡಯಟ್ ಪ್ರಶಿಕ್ಷಕರ ಪ್ರೌಢ ಶಾಲೆಯಲ್ಲಿ ಸೀನಿಯರ್ ಅಸಿಸ್ಟೆಂಟ್ ಟೀಚರ್ ಹುದ್ದೆಯಿಂದ ಬಡ್ತಿ ಪಡೆದು ಡಯಟ್ ನ ಪ್ರಶಿಕ್ಷಕರ ಹುದ್ದೆಗೆ ವರ್ಗಾವಣೆ ಗೊಂಡಿದ್ದಾರೆ.ಇವರು ಡಯಟ್ ನಲ್ಲಿ ಟಿಸಿಎಚ್ ಅಂದು ಡಿಇಡಿ ಇಂದು ಡಿಎಲ್ ಇಡಿ ಗೆ ಪಾಠ ಮಾಡಲು ಮಾತ್ರ ಅರ್ಹತೆ ಹೊಂದಿದ್ದಾರೆ. ಡಯಟ್ ಪ್ರಶಿಕ್ಷಕರಿಗೆ ಕೆಎಕ್ಯೂಎಎಸಿ ಪ್ರಾಥಮಿಕ ಶಿಕ್ಷಣ ಹಾಗೂ ಮಾಧ್ಯಮಿಕ ಶಿಕ್ಷಣದ ಶಿಕ್ಷಕರಿಗೆ ತರಬೇತಿಮಾತ್ರಅವರ ವ್ಯಾಪ್ತಿಗೆ ಬರುತ್ತದೆ. ಪದವಿ ಪೂರ್ವ ಶಿಕ್ಷಣದ ಗಣಿತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಪರಿಕಲ್ಪನೆ ಇರುವುದಿಲ್ಲ. ವಿಷಯದ ಮೂಲಭೂತ ಅರಿವಿಲ್ಲದವರು, ವಿಜ್ಞಾನ ಪೂರ್ಣ ದೃಷ್ಠಿಕೋನ ಇಲ್ಲದವರು ಪದವಿ ಪೂರ್ವ ಮಟ್ಟದ ಉಪನ್ಯಾಸಕರ ಬೋಧನೆ ಪ್ರಾಯೋಗಿಕತೆ ಹಾಗೂ ಪಠ್ಯ ಮೌಲ್ಯವನ್ನು ಪರೀಶೀಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ, ಉಪಾಧ್ಯಕ್ಷ ಕೆ.ಜಿ.ಸತೀಶ್ , ಕಾರ್ಯದರ್ಶಿ ಡಾ.ದೊಡ್ಡಬೋರಯ್ಯ, ಖಜಾಂಚಿ ಬಿ.ಮಹೇಶ ಮತ್ತಿತರರು ಹಾಜರಿದ್ದರು.24ಕೆಆರ್ ಎಂಎನ್ 1.ಜೆಪಿಜಿ
ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಮೂಲಕ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.)
;Resize=(128,128))
;Resize=(128,128))
;Resize=(128,128))