ಬಾಗಲಕೋಟೆ : ಈ ವರ್ಷ ಜಿಲ್ಲೆಯಲ್ಲಿ 60 ಬಾಲ್ಯ ವಿವಾಹ ತಡೆ - ರೀಚ್ ಸಂಸ್ಥೆ ಸಂಯೋಜಕ ಕುಮಾರ

| Published : Nov 29 2024, 01:05 AM IST / Updated: Nov 29 2024, 11:57 AM IST

ಬಾಗಲಕೋಟೆ : ಈ ವರ್ಷ ಜಿಲ್ಲೆಯಲ್ಲಿ 60 ಬಾಲ್ಯ ವಿವಾಹ ತಡೆ - ರೀಚ್ ಸಂಸ್ಥೆ ಸಂಯೋಜಕ ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲ್ಯವಿವಾಹ ಮುಕ್ತ ಭಾರತ ಮಾಡಲು ರೀಚ್ ಸಂಸ್ಥೆ ಹೊರಟ್ಟಿದ್ದು, ಅಭಿಯಾನವು ಈಗಾಗಲೇ ಜಿಲ್ಲೆಯಲ್ಲಿ ನಡೆದಿದೆ. 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ

  ಬಾಗಲಕೋಟೆ : ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಬಾಲ್ಯವಿವಾಹ ಈ ವರ್ಷ ತಡೆಗಟ್ಟಿದೆ ಎಂದು ರೀಚ್ ಸಂಸ್ಥೆ ಸಂಯೋಜಕ ಕುಮಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲ್ಯವಿವಾಹ ಮುಕ್ತ ಭಾರತ ಮಾಡಲು ರೀಚ್ ಸಂಸ್ಥೆ ಹೊರಟ್ಟಿದ್ದು, ಅಭಿಯಾನವು ಈಗಾಗಲೇ ಜಿಲ್ಲೆಯಲ್ಲಿ ನಡೆದಿದೆ. 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. 1600ಕ್ಕೂ ಹೆಚ್ಚು ಗ್ರಾಮಸ್ಥರು ಪಾಲ್ಗೊಂಡಿದ್ದಾರೆ ಎಂದರು. ಮಕ್ಕಳ ರಕ್ಷಣೆ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿದ್ದು, ವಿವಿಧ ಸಂಘ, ಸಂಸ್ಥೆ ಗಳು, ಅಧಿಕಾರಿಗಳು ಹಾಗೂ ಸಮುದಾಯಗಳು, ಕುಟುಂಬಗಳ ಮಧ್ಯಸ್ಥಿಕೆ, ಸಮಾಲೋಚನೆ ಮೂಲಕ ಬಾಲ್ಯವಿವಾಹ ತಡೆಗಟ್ಟಲಾಗುತ್ತಿದೆ ಎಂದರು.

ಸಂಸ್ಥೆ ನಿರ್ದೇಶಕ ಜಿ.ಎನ್.ಸಿಂಹ ಮಾತನಾಡಿ, ಸ್ಥಳೀಯ ಅಧಿಕಾರಿಗಳು ಮತ್ತು 2 ರಾಜ್ಯ ಸರ್ಕಾರದೊಂದಿಗಿನ ಸಹಭಾಗಿತ್ವದೊಂದಿಗೆ ನಾವು ಬಾಲ್ಯವಿವಾಹದಿಂದ ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸುವುದಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಪ್ರಧಾನಿ ಮೋದಿಜಿ ಸಾರಥ್ಯದ ಈ ರಾಷ್ಟ್ರ ವ್ಯಾಪ್ತಿ ಅಭಿಯಾನವು ನಮಗೆಲ್ಲಾ ಹೊಸ ಶಕ್ತಿ ಮತ್ತು ಹುರುಪು ನೀಡಿದೆ. ನಾವು ಈ ಜಿಲ್ಲೆಯಲ್ಲಿ ಆರಂಭಿಸಿದ ಈ ಸಣ್ಣ ಚಳವಳಿಯು ಈಗ ರಾಷ್ಟ್ರ ವ್ಯಾಪ್ತಿ ಅಭಿಯಾನವಾಗಿದೆ ಎಂದರು.

ಬಾಲ್ಯವಿವಾಹದ ಸಂತ್ರಸ್ತೆ ಸುಧಾ ಮಾತನಾಡಿ, ಈ ಸಾಮಾಜಿಕ ಪಿಡುಗನ್ನು ನಿಲ್ಲಿಸಲು ಸರ್ಕಾರದ ಪರಿಹಾರ ಕ್ರಮಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದರು. ತಮ್ಮ ಜೀವನದಲ್ಲಿ ಆದಂತಹ ಘಟನೆ ಹಂಚಿಕೊಂಡರು 5 ವರ್ಷದಲ್ಲಿ ಬಾಲ್ಯವಿವಾಹ ಆಗಿದ್ದು 16 ವರ್ಷಕ್ಕೆ ಮಕ್ಕಳು ಆಗಿದ್ದಾರೆ. ಆಡುವ ಕೂಸಿಗೆ ಕಾಡುವ ಕೂಸು ಎನ್ನುವ ಹಾಗೆ ನನ್ನ ಪರಿಸ್ಥಿತಿ ಆಯ್ತು. ಋತುಮತಿಯಾದ ವರ್ಷದಲ್ಲೇ ನನ್ನ ಗಂಡನ ಮನೆಗೆ ಕಳಿಸಿಕೊಟ್ಟರು. ಆ ಸಮಯದಲ್ಲಿ ನನ್ನ ವೈಯಕ್ತಿಕ ಆರೋಗ್ಯದ ಬಗ್ಗೆ ನನಗೆ ಅರಿವಿರಲಿಲ್ಲ. ಶಿಕ್ಷಣದಿಂದ ವಂಚಿತಳಾದೆ. ಆಗ ರೀಚ್ ಸಂಸ್ಥೆ ಸಹಾಯದಿಂದ ಹತ್ತನೇ ತರಗತಿ ಉತ್ತೀರ್ಣಳಾದೆ ಸಂಸ್ಥೆಯಲ್ಲಿ ಸ್ವಯಂ ಸೇವಕರಾಗಿ ಮಕ್ಕಳ ಹಕ್ಕುಗಳ ಬಗ್ಗೆ ಕೈ ಜೋಡಿಸಿದ್ದೇನೆ ನನಗಾದ ಪರಿಸ್ಥಿತಿ ಬೇರೆಯಾರಿಗೂ ಬರಬಾರದು ಎನ್ನುವ ದೃಷ್ಟಿಕೋನದಲ್ಲಿ ಈ ಮಹತ್ತರ ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದಲ್ಲಿ ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆಯು ಕೂಡ ಇದರಲ್ಲಿ ಭಾಗಿ ಆಗುತ್ತೇವೆ ಎಂದು ಹೇಳಿದರು.