ಮಹದಾಯಿ ಯೋಜನೆಗೆ ಪ್ರಧಾನಿ ಅನುಮತಿ ಕೊಡಿಸಲಿ: ಬಸವರಾಜ.

| Published : Oct 27 2024, 02:22 AM IST

ಮಹದಾಯಿ ಯೋಜನೆಗೆ ಪ್ರಧಾನಿ ಅನುಮತಿ ಕೊಡಿಸಲಿ: ಬಸವರಾಜ.
Share this Article
  • FB
  • TW
  • Linkdin
  • Email

ಸಾರಾಂಶ

ವನ್ಯಜೀವಿಗಳ ಮಂಡಳಿಯಿಂದ ಅನುಮತಿ ಪ್ರಧಾನಿಯವರು ಮೇಲೆ ಈ ಭಾಗದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಒತ್ತಡ ಹಾಕಿ ಕೊಡಿಸಲು ಮುಂದಾಗಬೇಕು

ನರಗುಂದ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಅನುಮತಿ ಕೊಡಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜ ಹೇಳಿದರು.

ಅವರು ಶನಿವಾರ ಪಟ್ಟಣದ ರೈತ ವೀರಗಲ್ಲ ಬಳಿ ಹಮ್ಮಿಕೊಂಡಿರುವ ಮಹದಾಯಿ ಯೋಜನೆ ಜಾರಿಗೆ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಸಂಘ (ಒಕ್ಕೂಟ), ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಹಾಗೂ ಕನ್ನಡಪರ, ದಲಿತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಹೋರಾಟದ ಮುಂದಿನ ರೂಪರೇಷಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಗೆ ಆಡಳಿತಾತ್ಮಕ, ಪರಿಸರ ಇಲಾಖೆ ಪರವಾನಗಿ ಸಿಕ್ಕಿದೆ, ಆದರೆ ವನ್ಯಜೀವಿಗಳ ಮಂಡಳಿಯಿಂದ ಅನುಮತಿ ಪ್ರಧಾನಿಯವರು ಮೇಲೆ ಈ ಭಾಗದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಒತ್ತಡ ಹಾಕಿ ಕೊಡಿಸಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವಪ್ಪ ಅಬ್ಬನಿ, ನಜೀರಸಾಬ್‌ ಮುಲ್ಲಾನವರ, ಅಮೀನ ದಿದಗಿ, ಎಸ್.ಎಸ್. ಪಾಟೀಲ, ಪೂಜಾರಪ್ಪ, ಶರಣಯ್ಯ ಮುಳ್ಳುರಮಠ, ಶಂಕರಗೌಡ ಬೀಳಗಿ, ನಿಂಗಪ್ಪ ದಿವಟಿಗೆ, ರಾಘವೇಂದ್ರ, ಚಂದ್ರಪ್ಪ, ಈರಮ್ಮ ಮೇಟಿ, ಶಂಕ್ರಮ್ಮ, ಮಲ್ಲಿಕಾರ್ಜುನ ರಾಮರ್ದುಗ, ಈರಣ್ಣ ರಾಜನಾಳ, ಬಸವರಾಜ ಸಾಬಳೆ, ಶಂಕ್ರಣ್ಣ ಅಂಬಲಿ, ಚನ್ನು ನಂದಿ, ವೀರಣ್ಣ ಸೋಪ್ಪಿನ, ವಿಠಲ ಜಾಧವ, ನಬಿಸಾಬ್‌ ಕಿಲ್ಲೇದಾರ, ರಾಘವೇಂದ್ರ ನಡುವಿನಮನಿ ಸೇರಿದಂತೆ ಮುಂತಾದವರು ಇದ್ದರು.