ಸಾರಾಂಶ
ಶೌಚಾಲಯ ಇರುವ ಮನೆ ಅರಮನೆ, ಶೌಚಾಲಯ ಇಲ್ಲದ ಮನೆ ಸೆರೆಮನೆಯಾಗಿದೆ. ಪ್ರತಿಯೊಬ್ಬ ನಾಗರಿಕರು ಶೌಚಾಲಯ ಬಳಸಿ ಕಾಯಿಲೆಗಳಿಂದ ಮುಕ್ತ ವಾಗಬೇಕಾಗಿದೆ
ನರೇಗಲ್ಲ: ಬಯಲು ಶೌಚ ಆಧುನಿಕ ನಾಗರಿಕತೆ ಸಂಸ್ಕೃತಿಯಲ್ಲ, ಕೆಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಂಡು ವೈಯಕ್ತಿಕ ಗೃಹ ಶೌಚಾಲಯಗಳ ಮೇಲೆ ಅನುದಾನ ನೀಡುತ್ತಿದೆ. ಅದರ ಸದುಪಯೋಗ ಪಡೆದು ಸುಸಂಸ್ಕೃತ ನಾಗರಿಕ ಸಮಾಜ ನಿರ್ಮಿಸುವುದು ನಮ್ಮ ಆದ್ಯತೆ ಆಗಬೇಕು ಎಂದು ಪ್ರಾಂಶುಪಾಲ ಎಸ್.ಎಲ್. ಗುಳೆದಗುಡ್ಡ ಹೇಳಿದರು.
ಪಟ್ಟಣದ ಎಸ್.ಎಂ.ಬಿ.ಕೆ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನರೇಗಲ್, ಎನ್.ಎಸ್ಎಸ್ ಘಟಕ 1ಹಾಗೂ 2 ಸಂಯುಕ್ತಾಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಜಾಥಾ ಹಾಗೂ ಸ್ವಚ್ಛತಾ ಅಭಿಯಾನದಡಿಯಲ್ಲಿ ಬಯಲು ವಿಸರ್ಜನೆ ತ್ಯಜಿಸಿ, ಶೌಚಾಲಯ ಬಳಸಿ ಅಭಿಯಾನದ ಜಾಥಾ ಉದ್ಘಾಟಿಸಿ ಮಾತನಾಡಿದರು.ಶೌಚಾಲಯ ಇರುವ ಮನೆ ಅರಮನೆ, ಶೌಚಾಲಯ ಇಲ್ಲದ ಮನೆ ಸೆರೆಮನೆಯಾಗಿದೆ. ಪ್ರತಿಯೊಬ್ಬ ನಾಗರಿಕರು ಶೌಚಾಲಯ ಬಳಸಿ ಕಾಯಿಲೆಗಳಿಂದ ಮುಕ್ತ ವಾಗಬೇಕಾಗಿದೆ. ಸುಸಂಸ್ಕೃತ ನಾಗರಿಕರು ಬಯಲು ಶೌಚ ಮಾಡದೆ ನಾವು ಸುಸಂಸ್ಕೃತರು ಎ೦ದು ಸಾಬೀತು ಪಡಿಸಬೇಕಿದೆ. ಪರಿಸರ ಸ್ವಚ್ಛ ಮತ್ತು ಹಸಿರಾಗಿದ್ದರೆ, ರೋಗ ಮುಕ್ತವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿದರು. ಜಾಥಾದಲ್ಲಿ ಎನ್.ಎಸ್.ಎಸ್ ಅಧಿಕಾರಿ ಶಿವಮೂರ್ತಿ ಕುರೇರ, ಸುನಂದಾ ಮುಂಜಿ, ಅಂಜನಮೂರ್ತಿ ಕೆ.ಎಚ್. ಜಯಶ್ರಿ ಮುತಗಾರ, ಬಸವರಾಜ ಪಲ್ಲೇದ, ವಿ.ಕೆ. ಸಂಗನಾಳ, ಕಿರಣ್ ರಂಜಣಗಿ, ಎನ್.ಎಸ್. ಹೊನ್ನೂರ್, ಚಂದ್ರು ಸಂಶಿ, ಎಸ್.ಬಿ. ಕಿನ್ನಾಳ, ಬಿ.ಎಸ್. ಮಡಿವಾಳರ, ಚಂದ್ರು ರಾಥೋಡ, ಬಿ.ಕೆ. ಕಂಬಳಿ, ಪ್ರೇಮಾ ಕಾತ್ರಾಳ, ಶ್ವೇತಾ ಹುಣಸಿಮರದ, ಶಂಕರ ನರಗುಂದ, ವಿ.ಸಿ. ಇಲ್ಲೂರ, ಎಂ.ಎಫ್.ತಹಸೀಲ್ದಾರ, ಕೆ.ಎನ್.ಕಟ್ಟಿಮನಿ, ಸಿದ್ದು ನವಲಗುಂದ, ಮಲ್ಲಪ್ಪ ಸಮಗಂಡಿ ಉಪಸ್ಥಿತರಿದ್ದರು.